– ಮರಿತಿಬ್ಬೇಗೌಡ ಹೊರತುಪಡಿಸಿದರೆ ಉಳಿದೆಲ್ಲ ಜೆಡಿಎಸ್ ಸದಸ್ಯರು ಮಸೂದೆ ಪರ
ಬೆಂಗಳೂರು: ವಿಧಾನಪರಿಷತ್‌ನಲ್ಲಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದೆ.
ಚರ್ಚೆಯ ಬಳಿಕ ಮಸೂದೆಯನ್ನು ಮತಕ್ಕೆ ಹಾಕುವಂತೆ ಕಾಂಗ್ರೆಸ್ ಒತ್ತಾಯಿಸಿದ ಕಾರಣ ಸಭಾಪತಿ ಮತ ವಿಭಜನೆ ಮಾಡಿದರು. ಮತಕ್ಕೆ ಹಾಕಿದಾಗ 37-21 ಮತಗಳ ಅಂತರದಲ್ಲಿ ಮಸೂದೆ ಅನುಮೋದನೆ ಪಡೆಯಿತು. ಧ್ವನಿ ಮತದ ಒಪ್ಪಿಗೆ ಬೇಡ, ಮತ ವಿಭಜನೆ ಮಾಡಿ ಎಂದು ವಿರೋಧ ಪಕ್ಷ ಸದಸ್ಯರು ಒತ್ತಾಯಿಸಿದರು.
ಮತ ವಿಭಜನೆ ವೇಳೆ ಮರಿತಿಬ್ಬೇಗೌಡ ಅವರನ್ನು ಹೊರತುಪಡಿಸಿದರೆ ಉಳಿದೆಲ್ಲ ಜೆಡಿಎಸ್ ಸದಸ್ಯರು ಮಸೂದೆ ಪರ ಎದ್ದು ನಿಂತು ಬೆಂಬಲ ವ್ಯಕ್ತಪಡಿಸಿದರು.