ಸಾರಿಗೆ ನೀತಿ ವಿರುದ್ಧ ಆಟೋ ಚಾಲಕರ ಬೃಹತ್‌ ಪ್ರತಿಭಟನಾ ಪ್ರದರ್ಶನ

ಬೆಂಗಳೂರು: ಸಾರಿಗೆ ಇಲಾಖೆ ರ‍್ಯಾಪಿಡೊ ಬೈಕ್, ಟ್ಯಾಕ್ಸಿ ಸಂಚಾರವನ್ನು ನಿಷೇಧಿಸಬೇಕು, ಬೌನ್ಸ್ ಎಲೆಕ್ಟ್ರಿಕ್‌ ಬೈಕ್‌ಗೆ ನೀಡಿರುವ ಅನುಮತಿ ತೆಗೆದುಹಾಕಬೇಕು ಎಂದು ಆಗ್ರಹಿಸಿ ಇಂದು(ಡಿಸೆಂಬರ್‌ 29) ವಿವಿಧ ಆಟೋ ಸಂಘಟನೆಗಳ ಘಟಕದ ಚಾಲಕರು ಬೃಹತ್ ಮಟ್ಟದಲ್ಲಿ ಪ್ರತಿಭಟನಾ ಸಮಾವೇಶ ನಡೆಸಿದರು.

ಸಾವಿರಾರು ಆಟೋ ಚಾಲಕರು ಸ್ವಾತಂತ್ರ್ಯ ಉದ್ಯಾನವನ ಬಳಿ ಸಮಾವೇಶಗೊಂಡು ರ‍್ಯಾಪಿಡ್ ದ್ವಿಚಕ್ರ ವಾಹನ, ಟ್ಯಾಕ್ಸಿಗಳಿಂದ ತೀವ್ರ ತೊಂದರೆಯಾಗುತ್ತಿದೆ. ಸರ್ಕಾರ ಕೂಡಲೇ ಇದನ್ನು ನಿಲ್ಲಿಸಬೇಕು ಎಂದು ಚಾಲಕರು ಆಗ್ರಹಿಸಿದರು.

ಇದನ್ನು ಓದಿ: ಬೃಹತ್‌ ಮತಪ್ರದರ್ಶನಕ್ಕೆ ಸಜ್ಜಾಗಿರುವ ಆಟೋ ಚಾಲಕರು; ಡಿ.29ಕ್ಕೆ ವಿಧಾನಸೌಧ ಮುತ್ತಿಗೆ

ಕೆಂಪೇಗೌಡ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಮೆರವಣಿಗೆ ನಡೆಸಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು. ಸುಮಾರು 21ಕ್ಕೂ ಹೆಚ್ಚು ವಿವಿಧ ಆಟೋ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದವು.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ರ‍್ಯಾಪಿಡೋ ದ್ವಿಚಕ್ರ ಹಾಗೂ ಟ್ಯಾಕ್ಸಿಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇದರಿಂದ ಆಟೋ ಚಾಲಕರು ಬೀದಿಗೆ ಬೀಳುತ್ತಿದ್ದಾರೆ. ರ‍್ಯಾಪಿಡೋಗೆ ಅನುಮತಿ ಇಲ್ಲದಿದ್ದರೂ, ರಾಜಾರೋಷವಾಗಿ ಸಂಚಾರ ಮಾಡುತ್ತಿದ್ದರೂ ಆರ್‌.ಟಿ.ಓ. ಅಧಿಕಾರಿಗಳು ಕ್ರಮಕೈಗೊಳ್ಳದೇ ವಿಫಲರಾಗಿದ್ದಾರೆ

ಸಾರಿಗೆ ವ್ಯವಸ್ಥೆಗೆ ಮಾರಕವಾಗಿರುವ ನೀತಿಗಳನ್ನು ಬದಲಾವಣೆ ಮಾಡಬೇಕೆಂದು ಆಗ್ರಹಿಸಿ ಹಲವು ಬಾರಿ ಸಭೆ, ಮನವಿಗಳ ಮೂಲಕ ಸರ್ಕಾರವನ್ನು ಒತ್ತಾಯಿಸಿದರೂ, ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಯಿತು ಎಂದು ಸಂಘಟನೆ ಮುಖಂಡರು ತಿಳಿಸಿದ್ದಾರೆ.

ಇದನ್ನು ಓದಿ: ಆಟೋರಿಕ್ಷಾ ಚಾಲಕರ ದೂಷಣೆ ಸಲ್ಲದು

ಸಾರಿಗೆ ಇಲಾಖೆ ಕೆಲವು ಖಾಸಗಿ ಕಂಪನಿಗಳ ಎಲೆಕ್ಟ್ರಿಕ್‌ ಬೈಕ್, ಟ್ಯಾಕ್ಸಿಗೆ ಅವಕಾಶ ನೀಡಿವೆ. ಇದು ಆಟೋ ಚಾಲಕರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಲಿವೆ. ಹಲವು ವರ್ಷಗಳಿಂದ ನಗರದ ಜನರಿಗೆ ಸೇವೆ ಸಲ್ಲಿಸುತ್ತಿರುವ ಆಟೋ ಚಾಲಕರಿಗೆ ಆಗಬಹುದಾದ ಪರಿಣಾಮಗಳ ಬಗ್ಗೆ ಚಿಂತಿಸದೇ ಏಕಾಏಕಿ ಇಂತಹ ನಿರ್ಧಾರ ಕೈಗೊಂಡ ಸರ್ಕಾರದ ವಿರುದ್ಧ ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.

ಸಿಐಟಿಯು ಸಂಯೋಜಿತ ಆಟೋ ರಿಕ್ಷಾ ಡ್ರೈವರ್ಸ್‌ ಯೂನಿಯನ್‌(ಎಆರ್‌ಡಿಯು) ನೇತೃತ್ವದಲ್ಲಿ ಬೃಹತ್‌ ಜಂಟಿ ವೇದಿಕೆ ರಚಿಸಲಾಗಿದ್ದು, ಈ ವೇದಿಕೆಯಲ್ಲಿ ಬೆಂಗಳೂರಿನಲ್ಲಿರುವ ಎಲ್ಲಾ ಆಟೋ ಸಂಘಟನೆಗಳು ಒಗ್ಗೂಡಿ ವಿಧಾನಸೌಧ ಚಲೋ ನಡೆಸಿದರು.

 

 

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *