ವಿಜಯಪುರ: ಸಾರಿಗೆ ನೌಕರರ ಮುಷ್ಕರಕ್ಕಿಂದು ವಿಜಯಪುರದಲ್ಲಿ ಭಾರೀ ಬೆಂಬಲ ಸಿಕ್ಕಿದೆ. ಈಗ ಸಾರಿಗೆ ನೌಕರರಿಗೆ ಶಾಕ್ ಕೊಡಲು ರಾಜ್ಯ ಸರ್ಕಾರ ಮುಂದಾಗಿದೆ.
ನಾಳೆ ಕೆಲಸಕ್ಕೆ ಹಾಜರಾಗಿ, ಇಲ್ಲವಾದ್ರೆ ವಾಸವಿರುವ ಮನೆ ಖಾಲಿ ಮಾಡಬೇಕೆಂದು ನೋಟಿಸ್ ನಲ್ಲಿ ಸೂಚಿಸಲಾಗಿದೆ. ನೋಟಿಸ್ ನೀಡಿದ ಹಿನ್ನೆಲೆ ಆತಂಕದಿಂದ ನೌಕರರ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.
ನಮ್ಮ ಯಜಮಾನ್ರು ಕೆಲಸಕ್ಕೆ ಹಾಜರಾಗದಿದ್ರೆ ನಾವೇನು ಮಾಡಬೇಕು. ಏಕಾಏಕಿ ಈ ರೀತಿ ಮನೆ ಖಾಲಿ ಮಾಡಿ ಅಂದರೆ ಮಕ್ಕಳನ್ನ ಕಟ್ಟಿಕೊಂಡು ಎಲ್ಲಿಗೆ ಹೋಗಬೇಕು ಎಂದು ಮಹಿಳೆಯರು ಸರ್ಕಾರಕ್ಕೆ ಹಿಡಿ ಶಾಪ ಹಾಕಿದ್ದಾರೆ.
ಇದನ್ನೂ ಓದಿ : ಸಾರಿಗೆ ಮುಷ್ಕರ: ಎರಡನೇ ದಿನವೂ ಸಾರ್ವಜನಿಕ ಸಾರಿಗೆ ಸ್ತಬ್ದ
ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳನ್ನ ಈಡೇರಿಸಿದ್ರೆ ನಾವೇಕೆ ಈ ರೀತಿ ಮಾಡ್ತಿದ್ದೀವಿ. ಈ ಎಲ್ಲ ಗೊಡ್ಡು ಬೆದರಿಕೆಗಳಿಗೆ ನಾವು ಹೆದರಲ್ಲ. ನಮ್ಮವರಾರು ನಾಳೆ ಕೆಲಸಕ್ಕೆ ಹೋಗಲ್ಲಾ ಅಂತಾ ಕಡ್ಡಿ ತುಂಡು ಮಾಡಿದಂತೆ ಹೇಳುತ್ತಿದ್ದಾರೆ ಎಂದು ಗೃಹಿಣಿಯರು ಹೇಳಿದ್ದಾರೆ.