ಸರಸ್ವತಿ ಪೂಜೆ ವಿರೋಧಿಸಿ ಪ್ರಶಸ್ತಿ ನಿರಾಕರಿಸಿದ ಮರಾಠಿ ಕವಿ

ಮಂಬಯಿ: ಪ್ರಶಸ್ತಿ ಪ್ರಧಾನ ಸಮಾರಂಭದ ವೇದಿಕೆಯಲ್ಲಿ ದೇವಿ ಸರಸ್ವತಿಯ ಭಾವಚಿತ್ರ ಇಟ್ಟು ಪೂಜೆ ಮಾಡಿದ್ದನ್ನು ಖಂಡಿಸಿ ಹಿರಿಯ ಮರಾಠಿ ಕವಿ ಯಶವಂತ್‌ ಮನೋಹರ್‌ ಅವರು ʻಜೀವಮಾನ ಸಾಧನೆʼ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.

ನಾಗ್ಪುರದ ವಿದರ್ಭ ಸಾಹಿತ್ಯ ಸಂಘವು ಯಶವಂತ್‌ ಅವರನ್ನು ಸಂಘದ ಅತಿದೊಡ್ಡ ಪ್ರಶಸ್ತಿಗೆ ಆಯ್ಕೆ ಮಾಡಿತ್ತು.

ʻʻಸರಸ್ವತಿ ಚಿತ್ರವು ಮಹಿಳೆಯರು ಮತ್ತು ಶೂದ್ರರನ್ನು ಶಿಕ್ಷಣದಿಂದ ಹೊರಗೆ ಇಡುವುದರ ಸಂಕೇತವಾಗಿದೆ. ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಧರ್ಮದ ಆಚರಣೆಯನ್ನು ನಾನು ಒಪ್ಪಲಾರೆ. ಹೀಗಾಗಿ ನನ್ನ ಮೌಲ್ಯಗಳೊಂದಿಗೆ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದೇನೆʼʼ ಎಂದು ಯಶವಂತ್‌ ತಿಳಿಸಿದ್ದಾರೆ.

ʻʻನನ್ನ ಬರವಣಿಗೆ ಮತ್ತು ಆಲೋಚನೆಗಳಿಗಾಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಭಾವಿಸಿಕೊಂಡು ಒಪ್ಪಿಗೆ ಸೂಚಿಸಿದ್ದೆ. ಸಮಾರಂಭದಲ್ಲಿ ಸರಸ್ವತಿ ಭಾವಚಿತ್ರ ಇಡುವ ಬದಲು ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರ ಇಡಬಹುದಿತ್ತು. ಈ ಕುರಿತು ಸಂಘದ ಪದಾಧಿಕಾರಿಗಳು ನನ್ನೊಂದಿಗೆ ಚರ್ಚಿಸಲೂ ಇಲ್ಲ. ಒಂದೊಮ್ಮೆ ಅವರು ಈ ಬಗ್ಗೆ ಮಾತನಾಡಿದ್ದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿತ್ತುʼʼ ಎಂದು ಅವರು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *