ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಸಂಗೊಳ್ಳಿ ರಾಯಣ್ಣ ಮಹಾ ಸೇನಾನಿ. ಅವರ ಸ್ಮರಣೆ ಮಾಡುವುದು ನಮ್ಮ ಕರ್ತವ್ಯ. ಸುಭಾಷ್ ಚಂದ್ರ ಬೋಸ್ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರವನ್ನು ಪ್ರತಿಯೊಂದು ಸರ್ಕಾರಿ ಶಾಲಾ ಕಾಲೇಜಿನಲ್ಲಿ ಕಡ್ಡಾಯವಾಗಿ ಇಡಬೇಕು ಎಂದು ಇಂದಿನಿಂದಲೇ ಆದೇಶ ಮಾಡುತ್ತಿದ್ದೇನೆ ಘೋಷಿಸಿದರು.
ದೇವರಾಜ ಅರಸು ವೃತ್ತ(ಖೋಡೆ ಸರ್ಕಲ್)ದ ಬಳಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ಕಾರ್ಯಕ್ರಮ ನಡೆದಿದ್ದು, ಇಂದು 192ನೇ ಸ್ಮರಣೆ ಅಂಗವಾಗಿ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು.
ಇದನ್ನು ಓದಿ : ಗಣರಾಜ್ಯೋತ್ಸವ ಆಚರಣೆ; 405 ಅಡಿ ಎತ್ತರದ ಧ್ವಜಸ್ತಂಭದಲ್ಲಿ ತ್ರಿವರ್ಣ ಧ್ವಜಾರೋಹಣ
ಕರ್ನಾಟಕದಲ್ಲಿ ಮೊದಲ ಸ್ವಾತಂತ್ರ್ಯ ಕಹಳೆಯನ್ನು ಊದಿದ ಸಂಗೊಳ್ಳಿ ರಾಯಣ್ಣ. ಸ್ವಾತಂತ್ರ್ಯ ಬಂದ ದಿನ ಅವರು ಜನ್ಮದಿನ ಹಾಗೂ ಗಣರಾಜ್ಯೋತ್ಸವದ ದಿನ ಅವರನ್ನು ನೇಣಿಗೆ ಹಾಕಿದ್ದು. ಈ ಎರಡು ದಿನ ಬಹಳ ವಿಶೇಷವಾದ ದಿನ. ಎಂದರು. ರಾಯಣ್ಣನ ಹೆಸರಿನಲ್ಲಿ 184 ಕೋಟಿ ರೂ. ವೆಚ್ಚದಲ್ಲಿ ರೆಸಿಡೆನ್ಸಿಯಲ್ ಶಾಲೆ ಮಾಡಿದ್ದೇವೆ. ಬೆಳಗಾವಿ ಸುವರ್ಣಸೌಧದಲ್ಲಿ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಯನ್ನು ನಿರ್ಮಿಸಲಾಗುತ್ತಿದೆ ಎಂದರು.
ಬಡತನದಲ್ಲಿ ಹುಟ್ಟಿದ ಸಂಗೊಳ್ಳಿ ರಾಯಣ್ಣ ಸ್ವಾವಲಂಬಿಯಾಗಿ ಜೀವಿಸಿದ್ದರು. ಭಯ ಮುಕ್ತವಾಗಿ ಬದುಕಿದ ಅವರನ್ನು, ರಾಣಿ ಚೆನ್ನಮ್ಮ ಕಿಚ್ಚಿಗೆ ಸಂಪೂರ್ಣವಾಗಿ ಬೆಂಬಲಕ್ಕೆ ನಿಂತರು. ಸಾವಿನ ನಂತರವೂ ಸಾಧನೆ ಅಜರಾಮರವಾಗಿರುತ್ತದೆ ಎಂದು ವಿವೇಕಾನಂದ ಅವರು ಹೇಳಿದ್ದಾರೆ ಎಂದು ಉಲ್ಲೇಖಿಸಿದರು.
ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮಾತನಾಡಿ, ಬಸವರಾಜ ಬೊಮ್ಮಾಯಿ ಅಜಾತ ಶತ್ರು. ಎಸ್.ಆರ್. ಬೊಮ್ಮಾಯಿ ನನ್ನ ಜೊತೆ ಶಾಸನ ಸಭೆಯಲ್ಲಿ ಇದ್ದವರು. ಸಿದ್ದರಾಮಯ್ಯ ಒಬ್ಬರು ಪ್ರಬುದ್ಧ ರಾಜಕಾರಣಿ. ಹಿಂದೆ ಒಳ್ಳೆಯ ಅಭ್ಯರ್ಥಿಗಳು ಪಾರ್ಲಿಮೆಂಟ್ನಲ್ಲಿ ಇರಬೇಕು ಎಂದು ಅಭ್ಯರ್ಥಿಗಳನ್ನೇ ಹಾಕುತ್ತಿರಲಿಲ್ಲ. ಆ ರೀತಿಯ ವಾತಾವರಣದ ಅವಶ್ಯಕತೆ ಇದೆ ಎಂದ ಅವರು, ಸದನದಲ್ಲಿ 10 ಜನ ಅವಿರೋಧವಾಗಿ ಆಯ್ಕೆಯಾಗಬೇಕೆಂದು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರು.
ಇದನ್ನು ಓದಿ: ಅಂಗನವಾಡಿ ನೌಕರರ ಪ್ರತಿಭಟನೆ 4ನೇ ದಿನಕ್ಕೆ: ಗಣರಾಜ್ಯೋತ್ಸವ ಆಚರಣೆ – ನ್ಯಾ. ನಾಗಮೋಹನ್ ದಾಸ್ ಭಾಗಿ
ಅಂಗನವಾಡಿ ಕಾರ್ಯಕರ್ತರ ಸಮಸ್ಯೆ ಬಗೆಹರಿಸಿ:
ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ನಡೆಯುತ್ತಿರು ಅನಿರ್ದಿಷ್ಟಾವಧಿ ಹೋರಾಟದ ಬಗ್ಗೆ ಉಲ್ಲೇಖಿಸಿದ ವಾಟಾಳ್ ನಾಗರಾಜ್, ಅಂಗನವಾಡಿ ಕಾರ್ಯಕರ್ತರು ಹಗಲು ರಾತ್ರಿ ಕುಳಿತು ಪ್ರತಿಭಟನೆ ಮಾಡುತ್ತಿದ್ದಾರೆ. ಅವರಿಗೆ ಶೌಚಾಲಯವಿಲ್ಲ, ಏನು ಇಲ್ಲ. ಅವರನ್ನು ಕರೆದು ಮಾತನಾಡಿಸಿ, ಸರ್ಕಾರ ಸಹಾಯ ಮಾಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಚಿವ ಎಂ.ಟಿ.ಬಿ. ನಾಗರಾಜ್, ಮಾಜಿ ಸಚಿವ ಹೆಚ್.ಎಂ. ರೇವಣ್ಣ, ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮೊದಲಾದವರು ಉಪಸ್ಥಿತರಿದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ