ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಸಂಕಲ್ಪದಿಂದ ಸಿದ್ಧಿ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿತ್ತು. ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಕೇಂದ್ರ ಸಂಸ್ಕೃತಿ ಸಚಿವಾಲಯ ಹಾಗೂ ಭಾರತೀಯ ಕೈಗಾರಿಕೆ ಒಕ್ಕೂಟ (ಸಿಐಐ)ದಿಂದ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದ ಬ್ಯಾನರಿನಲ್ಲಿ ಕನ್ನಡ ಸಂಪೂರ್ಣವಾಗಿ ಮಾಯವಾಗಿರುವುದು ಮತ್ತು ಹಿಂದಿಮಯವಾಗಿತ್ತು. ಇಡೀ ಕಾರ್ಯಕ್ರಮವೇ ಹಿಂದಿಮಯವಾಗಿದ್ದು, ಅಲ್ಲಿ ಕನ್ನಡ ಸಂಪೂರ್ಣವಾಗಿ ಕಡೆಗಣಿಸಲ್ಪಿಟ್ಟಿದೆ.. ಬೆಂಗಳೂರು ಇರುವುದು ಕರ್ನಾಟಕದಲ್ಲಿಯೇ ದೆಹಲಿಯಲ್ಲಿಯೇ ಎಂದು ನೆಟ್ಟಿಗರು, ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವಾಗಲೇ, ಕರ್ನಾಟಕ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕೇಂದ್ರ ನಾಯಕರು ಬಂದಾಗ ಹೀಗೆ ಕನ್ನಡ ಮಾಯವಾಗುವುದು ಹೊಸದೇನಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಮಂದಿ ಟ್ರೋಲ್ ಮಾಡುತ್ತಿದ್ದಾರೆ.
ಏನಿದು ಸಂಕಲ್ಪದಿಂದ ಸಿದ್ದಿ ಸಿದ್ದಿ ಯೋಜನೆ
ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಸಂಕಲ್ಪದಿಂದ ಸಿದ್ಧಿ ಎಂಬ ಹೊಸ ಯೋಜನೆಯನ್ನು ಆರಂಭಿಸಿದೆ. ಇದನ್ನು 2017ರ ಆಗಸ್ಟ್ 21ರಂದು ಚಾಲನೆ ನೀಡಲಾಗಿತ್ತು. ಅಂದಿನಿಂದ 5 ವರ್ಷಗಳವರೆಗೆ ಅಂದರೆ, 2022ರ ಆಗಸ್ಟ್ 21ರವರೆಗಿನ ಯೋಜನೆಯಾಗಿದೆ. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಇಡೀ ಕಾರ್ಯಕ್ರಮದ ಮೇಲ್ವಿಚಾರಣೆ ಮಾಡುತ್ತದೆ.
ಈ ಯೋಜನೆಯಲ್ಲಿ ನವ ಭಾರತ ಚಳವಳಿ ಕಾರ್ಯಕ್ರಮದಲ್ಲಿ ಸರ್ಕಾರವು ಭಾರತದ ನಾಗರಿಕರ ಒಳಿತಿಗಾಗಿ ರಾಷ್ಟ್ರದಾದ್ಯಂತ ಅನೇಕ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಹಮ್ಮಿಕೊಳ್ಳುತ್ತದೆ. ಕಾರ್ಯಕ್ರಮಗಳು ಮತ್ತು ಇತರ ಸಾಮಾಜಿಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಅಧಿಕಾರಿಗಳು ನಾಗರಿಕರಿಗೆ ಭಾರತದಲ್ಲಿನ ಅನೇಕ ಸಮಸ್ಯೆಗಳ ಬಗ್ಗೆ, ವಿಶೇಷವಾಗಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ತಿಳುವಳಿಕೆ ಮತ್ತು ಅರಿವು ಮೂಡಿಸುತ್ತಾರೆ.
ಜಾತಿ ತಾರತಮ್ಯ, ಧರ್ಮ, ಬಡತನ, ಶಿಕ್ಷಣ, ಸ್ವಚ್ಛತೆ ಹೀಗೆ ಹಲವು ವಿಚಾರಗಳನ್ನು ದೇಶದ ಎಲ್ಲ ರೀತಿಯ ಸಮಸ್ಯೆಗಳನ್ನು ತೊಲಗಿಸಲಾಗುತ್ತದೆ. ಯೋಜನೆಯು ದೇಶದ 6-7 ಪ್ರಮುಖ ವಲಯಗಳು ಅಥವಾ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುತ್ತದೆ. ಸ್ವಚ್ಛ ಭಾರತ, ಸಾಕ್ಷರ ಭಾರತ, ಬಡತನ ಮುಕ್ತ, ಭ್ರಷ್ಟಾಚಾರ ಮುಕ್ತ, ಭಯೋತ್ಪಾದನೆ ಮುಕ್ತ, ಕೋಮುವಾದ ಮುಕ್ತ ಮತ್ತು ಜಾತಿ ತಾರತಮ್ಯ ಮುಕ್ತತೆಗೆ ಒತ್ತು ನೀಡುತ್ತದೆ.
ಸರಕಾರ ಸಮೀಕ್ಷೆ ಮಾಡಿ ಯಾವ ಜಾತಿಯಲ್ಲಿ ಅತ್ಯಂತ ಬಡವರು ಇದ್ದಾರೆ ಅನ್ನುವದನ್ನು ಪತ್ತೆ ಹಚ್ಚಿ ಅಂತವರಿಗೆ ಮೀಸಲಾತಿ ಕೊಡಲಿ ಯಾವ ಜಾತಿ ಧರ್ಮ ಬೇಡ ಸರ್ವೇ ಜನಃ ಸುಖಿನೋ ಭವಂತು 🙏🙏🙏🙏🙏