ಬೆಂಗಳೂರು : ಕರುನಾಡಿನಲ್ಲಿ ಆರ್ಭಟಿಸುತ್ತಿರುವ ಕೊರೊನಾ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದ್ದು, “ಸರ್ಕಾರ ಒಂದಿಡೀ ವರ್ಷದಲ್ಲಿ ಪಾಠ ಕಲಿಯಲಿಲ್ಲ” ಎಂದು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.
ಈ ಬಗ್ಗೆ ರಾಜ್ಯ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಖಾತೆ ಮೂಲಕ ಟ್ವೀಟ್ ಮಾಡಿ” ಬೆಡ್, ಆಕ್ಸಿಜನ್, ಔಷಧ, ವೈದ್ಯರ ಕೊರತೆ. ಸಮಸ್ಯೆಗಳು ಕಳೆದ ವರ್ಷ ಎನಿತ್ತೋ ಅದೇ ಮರುಕಳಿಸಿದೆ ಎಂದಿದೆ. ಅಲ್ಲದೆ ಸರ್ಕಾರದ ಹೇಳಿಕೆಗಳೂ ಸಹ ಕಳೆದ ವರ್ಷ ಏನು ಹೇಳಿದ್ದರೋ ಅದನ್ನೇ ಪುನಃರುಚ್ಚರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಬೆಡ್, ಆಕ್ಸಿಜನ್, ಔಷಧ, ವೈದ್ಯರ ಕೊರತೆ.
ಸಮಸ್ಯೆಗಳು ಕಳೆದ ವರ್ಷ ಎನಿತ್ತೋ ಅದೇ ಮರುಕಳಿಸಿದೆ.ಸರ್ಕಾರದ ಹೇಳಿಕೆಗಳೂ ಸಹ ಕಳೆದ ವರ್ಷ ಏನು ಹೇಳಿದ್ದರೋ ಅದನ್ನೇ ಪುನಃರುಚ್ಚರಿಸುತ್ತಿದ್ದಾರೆ.
ಒಂದಿಡೀ ವರ್ಷದಲ್ಲಿ ಪಾಠ ಕಲಿಯಲಿಲ್ಲ, ಯಾವುದೇ ಸಿದ್ಧತೆ ಮಾಡಿಕೊಳ್ಳಲಿಲ್ಲ,
ಎಲ್ಲಿ ಗೆಣಸು ಕೀಳುತ್ತಿತ್ತು @BJP4Karnataka ಸರ್ಕಾರ?— Karnataka Congress (@INCKarnataka) April 19, 2021
ಒಂದಿಡೀ ವರ್ಷದಲ್ಲಿ ಪಾಠ ಕಲಿಯಲಿಲ್ಲ, ಯಾವುದೇ ಸಿದ್ಧತೆ ಮಾಡಿಕೊಳ್ಳಲಿಲ್ಲ, ಎಲ್ಲಿ ಗೆಣಸು ಕೀಳುತ್ತಿತ್ತು ಬಿಜೆಪಿ ಸರ್ಕಾರ? ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಹೊಸ ಕೊರೊನಾ ಪ್ರಕರಣಗಳು ಒಂದೇ ವಾರದದಲ್ಲಿ ದ್ವಿಗುಣಗೊಂಡಿದೆ. ಕಳೆದ ಮೂರು ದಿನಗಳಲ್ಲಿ ಅರ್ಧ ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. ಭಾನುವಾರ ಒಂದೇ ದಿನ ರಾಜ್ಯದಲ್ಲಿ 19067 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು ಬೆಡ್, ಆಕ್ಸಿಜನ್, ಔಷಧ, ವೈದ್ಯರ ಕೊರತೆ ಎದ್ದು ಕಾಣುತ್ತಿದೆ.