ಸಂತ್ರಸ್ತರಿಗೆ ತಲುಪದ ಮಳೆ ಹಾನಿ ಪರಿಹಾರ; ಕೇವಲ ಪ್ರಮಾಣ ಪತ್ರ ಕೊಟ್ಟು ಸುಮ್ಮನಾದ ಬಿಬಿಎಂಪಿ

ಬೆಂಗಳೂರು: ನಗರದಲ್ಲಿ ಅಕ್ಟೋಬರ್ 2 ಮತ್ತು 3 ರಂದು ಸುರಿದ ಭಾರೀ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ಅಪಾರ ನಷ್ಟವುಂಟಾಗಿದ್ದವು. ಮಳೆಯಿಂದ ಮನೆಗಳೊಳಗೆ ನೀರು ನುಗ್ಗಿ ಗೃಹೋಪಯೋಗಿ ವಸ್ತುಗಳು, ಬಟ್ಟೆ ಹಾಗೂ ಇನ್ನಿತರ ವಸ್ತುಗಳು ಹಾನಿಯಾಗಿತ್ತು. ಹೀಗೆ ನಷ್ಟವುಂಟಾದವರಿಗೆ ಬಿಬಿಎಂಪಿಯಿಂದ ಪರಿಹಾರ ಘೋಷಿಸಲಾಗಿತ್ತು.

ಆದರೆ, ಮಳೆ ಹಾನಿಗೊಳಗಾದವರಿಗೆ ಪ್ರಮಾಣ ಪತ್ರವನ್ನೂ ಬಿಬಿಎಂಪಿ ನೀಡಿತ್ತು. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ, ಗೋವಿಂದರಾಜ ನಗರ ಕ್ಷೇತ್ರದ ಒಟ್ಟು 717 ಜನ ಸಂತ್ರಸ್ತರ ಪಟ್ಟಿಯನ್ನು ತಯಾರಿಸಲಾಗಿತ್ತು. ಅವರಿಗೆ ತಲಾ 10 ಸಾವಿರ ರೂಪಾಯಿ ಪರಿಹಾರವನ್ನು ಬಿಬಿಎಂಪಿ ಘೋಷಣೆ ಮಾಡಿತ್ತು. ಆದರೆ ಈವರೆಗೂ ಯಾರಿಗೂ ಪರಿಹಾರ ಸಿಕ್ಕಿಲ್ಲ.

ಬಿಬಿಎಂಪಿ ಸಿದ್ಧಪಡಿಸಿದ ಪಟ್ಟಿಯಲ್ಲಿರುವ ಸಂತ್ರಸ್ತರಿಗೆ ಹಂಚಲೆಂದು ₹ 71,70,000 ಅನುದಾನಕ್ಕೆ ಅನುಮೋದನೆ ನೀಡಲಾಗಿತ್ತು. ಆದರೆ ಈವರೆಗೆ ಪರಿಹಾರ ಮಾತ್ರ ಸಂತ್ರಸ್ತರಿಗೆ ಸಿಕ್ಕಿಲ್ಲ. ಕೇವಲ ರಾಜಕೀಯಕ್ಕಾಗಿ ಪರಿಹಾರ ಘೋಷಿಸಿದ ಆರೋಪ ಎದುರಾಗಿದೆ. ಕೇವಲ ಪ್ರಮಾಣ ಪತ್ರ ನೀಡಿ ಬಿಬಿಎಂಪಿ ಸುಮ್ಮನಾಗಿದೆ. ಇದರೊಂದಿಗೆ ಅಸಲಿ ಸಂತ್ರಸ್ತರ ಹೆಸರು ಪರಿಹಾರದ ಪಟ್ಟಿಯಲ್ಲಿಲ್ಲ ಎಂದು ಗಂಭೀರ ಆರೋಪ ಮಾಡಲಾಗಿದೆ. ಆರ್ ಆರ್ ನಗರದಲ್ಲಿ ಹಸು ಕಳೆದುಕೊಂಡವರಿಗೆ ಪ್ರತಿ ಹಸುವಿಗೆ 30 ಸಾವಿರ ಪರಿಹಾರವನ್ನು ಬಿಬಿಎಂಪಿ ಘೋಷಣೆ ಮಾಡಿತ್ತು. ಆದರೆ ಪರಿಹಾರದ ಹಣ ಇದುವರೆಗೆ ಯಾವ ಸಂತ್ರಸ್ತರಿಗೂ ತಲುಪಿಲ್ಲ.

Donate Janashakthi Media

Leave a Reply

Your email address will not be published. Required fields are marked *