ವಿಂಬಲ್ಡನ್​ ಮಿಶ್ರ ಡಬಲ್ಸ್​: ಅಂತ್ಯಗೊಂಡ ಸಾನಿಯಾ ಮಿರ್ಜಾ ಹೋರಾಟ

ಲಂಡನ್​ನಲ್ಲಿ ನಡೆಯುತ್ತಿರುವ ವಿಂಬಲ್ಡನ್‌ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್​ ಪಂದ್ಯಾವಳಿಯಲ್ಲಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಹೋರಾಟ ಅಂತ್ಯಗೊಂಡಿದೆ. ಈ ಬಾರಿ ಕ್ರೊಯೇಷಿಯಾದ ಆರನೇ ಶ್ರೇಯಾಂಕದ ಮೇಟ್ ಪಾವಿಕ್ ಜೊತೆ ಕಣಕ್ಕಿಳಿದಿದ್ದ ಸಾನಿಯಾ ಮಿರ್ಜಾ ಹಾಲಿ ಚಾಂಪಿಯನ್‌ಗಳಾದ ನೀಲ್ ಸ್ಕುಪ್ಸ್ಕಿ ಮತ್ತು ಡೇಸಿರೇ ಕ್ರಾವ್‌ಜಿಕ್ ವಿರುದ್ಧ ಸೋಲನುಭವಿಸಿದರು.

ನೆನ್ನೆ (ಜುಲೈ 06) ರಾತ್ರಿ ನಡೆದ ಸೆಮಿಫೈನಲ್​ ಪಂದ್ಯವು ಎರಡು ಗಂಟೆ 16 ನಿಮಿಷಗಳು ನಡೆದವು. ಅದರಂತೆ ಮೊದಲ ಸೆಟ್​ನಲ್ಲಿ ಜಯ ಸಾಧಿಸಿದ ಸಾನಿಯಾ ಮಿರ್ಜಾ – ಮೇಟ್‌ ಪಾವಿಕ್ ಜೋಡಿ ವಿರುದ್ದ ಬ್ರಿಟನ್‌ನ ಸ್ಕುಪ್ಸ್ಕಿ ಮತ್ತು ಅಮೆರಿಕನ್ ಕ್ರಾವ್ಜಿಕ್ ವಿರುದ್ಧ 2ನೇ ಸೆಟ್​ನಲ್ಲಿ ಕಂಬ್ಯಾಕ್ ಮಾಡಿದರು. ಇದರ ಬೆನ್ನಲ್ಲೇ ಮೂರನೇ ಸೆಟ್​ ಅನ್ನು ಸಹ ಗೆಲ್ಲುವ ಮೂಲಕ 6-4 5-7 4-6 ಅಂತರದಿಂದ ಜಯ ಸಾಧಿಸಿದರು. ಈ ಮೂಲಕ ಸ್ಕುಪ್ಸ್ಕಿ-ಕ್ರಾವ್ಜಿಕ್ ಜೋಡಿ ಫೈನಲ್ ಪ್ರವೇಶಿಸಿದ್ದಾರೆ.

35 ವರ್ಷದ ಸಾನಿಯಾ ಮಿರ್ಜಾ ಒಟ್ಟಾರೆ ಮೂರು ಮಿಶ್ರ ಡಬಲ್ಸ್ ಟ್ರೋಫಿಗಳನ್ನು ಒಳಗೊಂಡಂತೆ ಆರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ಬಾರಿ ಮಿಶ್ರ ಡಬಲ್ಸ್‌ನಲ್ಲಿ ಕೆರಿಯರ್ ಸ್ಲಾಮ್ ಪೂರ್ಣಗೊಳಿಸುವ ಗುರಿ ಹೊಂದಿದ್ದರು. ಆದರೆ ಸೆಮಿಫೈನಲ್​ನಲ್ಲಿ ಸೋಲುವ ಮೂಲಕ ಮತ್ತೊಮ್ಮೆ ಕಿರೀಟಕ್ಕೆ ಮುತ್ತಿಕ್ಕುವ ಅವಕಾಶ ತಪ್ಪಿದೆ.

ಸಾನಿಯಾ ಮಿರ್ಜಾ 2009ರ ಆಸ್ಟ್ರೇಲಿಯನ್ ಓಪನ್ ಮತ್ತು 2012ರ ಫ್ರೆಂಚ್ ಓಪನ್‌ನಲ್ಲಿ ಮಹೇಶ್ ಭೂಪತಿ ಮತ್ತು 2014ರ ಯುಎಸ್ ಓಪನ್‌ನಲ್ಲಿ ಬ್ರೆಜಿಲಿಯನ್ ಬ್ರೂನೋ ಸೋರೆಸ್ ಅವರೊಂದಿಗೆ ಮಿಶ್ರ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದರು. ಈ ಬಾರಿ ಕೂಡ ಮೇಟ್‌ ಪಾವಿಕ್ ಜೊತೆಗೂಡಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದರು. ಆದರೆ 2ನೇ ಮತ್ತು 3ನೇ ಸೆಟ್​ಗಳ ಪಂದ್ಯದಾಟದಲ್ಲಿ ಕೈಚೆಲ್ಲಿಕೊಂಡರು.

ವಿಶೇಷ ಎಂದರೆ, ಇದು ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಸಾನಿಯಾ ಮಿರ್ಜಾ ಅವರ ಅತ್ಯುತ್ತಮ ಮಿಶ್ರ ಡಬಲ್ಸ್ ಪ್ರದರ್ಶನವಾಗಿದೆ. ಈ ಹಿಂದೆ 2011, 2013 ಮತ್ತು 2015ರಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಈ ಬಾರಿ ಸೆಮಿಫೈನಲ್​ಗೆ ಪ್ರವೇಶ ಕೊಡುವ ಮೂಲಕ ಗಮನ ಸೆಳೆದಿದ್ದರು. ಅಲ್ಲದೆ ಮಿಶ್ರ ಡಬಲ್ಸ್​ನಲ್ಲಿ ಚೊಚ್ಚಲ ಬಾರಿ ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ಗುರಿಯಿಟ್ಟುಕೊಂಡಿದ್ದರು. ಆದರೆ ಅವರ ಕನಸು ಕೂಡ ಕಮರಿದೆ.

ಅಂದಹಾಗೆ ಈ ಹಿಂದೆ ಸಾನಿಯಾ ವಿಂಬಲ್ಡನ್ ಮಹಿಳಾ ಡಬಲ್ಸ್​ನಲ್ಲಿ ಪ್ರಶಸ್ತಿ ಗೆದ್ದಿದ್ದರು. ಮಾರ್ಟಿನಾ ಹಿಂಗಿಸ್ ಜೋಡಿಯೊಂದಿಗೆ 2015 ರಲ್ಲಿ ಸಾನಿಯಾ ಮಹಿಳಾ ಡಬಲ್ಸ್​ನಲ್ಲಿ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು.

Donate Janashakthi Media

Leave a Reply

Your email address will not be published. Required fields are marked *