ಜನವರಿ 26ರಂದು ದೆಹಲಿಯಲ್ಲಿ ರೈತರು ನಡೆಸಿದ ಟ್ರ್ಯಾಕ್ಟರ್ ಪರೇಡ್ ನಲ್ಲಿ ನಡೆದ ಅಹಿತಕರ ಘಟನೆ ಮತ್ತು ಅದರ ಹಿಂದಿರುವ ಷಢ್ಯಂತರಗಳ ಕುರಿತು ಅಸಮಾಧನ ಹೊರಹಾಕಿದ್ದಾರೆ. ದೆಹಲಿಯ ನಡೆಯುತ್ತಿರುವ ವಿದ್ಯಾಮಾನಗಳ ಬಗ್ಗೆ ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಎ.ಆರ್ ಸಿಂಧುರವರು ತಮ್ಮ ಪೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ನಿಜವಾದ “ಯುದ್ಧ” ಈಗ ಶುರುವಿಟ್ಟಿದೆ. ಇಷ್ಟು ದಿನಗಳ ರೈತ ಹೋರಾಟದಿಂದ ಯಾರೆಲ್ಲ ಸ್ಪೂರ್ತಿ ಪಡೆದಿದ್ದರೋ ಅವರೆಲ್ಲರೂ ಜನವರಿ 26 ರ ಘಟನೆಯ ಬೆಳವಣಿಗೆಯಿಂದ ತುಂಬಾ ದುಃಖದಲ್ಲಿ ಮತ್ತು ಆತಂಕದಲ್ಲಿದ್ದಾರೆ. ಖಿನ್ನತೆಗೆ ಒಳಗಾಗಿದ್ದಾರೆ. ಅಂದರೆ, ಈ ರೀತಿಯದ್ದೊಂದು ಘಟಿಸಬಹುದೆಂದು ನೀವು ನಿರೀಕ್ಷಿಸಿರಲಿಲ್ಲ ಅಲ್ಲವೇ?
ಬಿಜೆಪಿ ಮತ್ತು ಆರ್.ಎಸ್.ಎಸ್ ನ ಅಸ್ತಿತ್ವಕ್ಕೆ ಇದು ಕೊನೆಯ ಪ್ರಯತ್ನ. ಪ್ರಭುತ್ವದ ನಿಜವಾದ ಮುಖ ಇದು. ಬಿಕ್ಕಟ್ಟಿನಲ್ಲಿರುವ ಬಂಡವಾಳಶಾಹಿ ಭಾರತದ ಕೃಷಿಯನ್ನು ತನ್ನ ವಶ ಪಡೆದುಕೊಳ್ಳಲು ಛೂಬಿಟ್ಟ ಯುದ್ಧದ ಹೇಯ ಮುಖ ಇದು. ಹೋರಾಟ ನಿರತ ಜನರು ಈಗ ಅತಿಹೆಚ್ಚು ವಿಶ್ವಾಸದಿಂದ ಇರಬೇಕು.
ನಿಜವಾದ ಸಂಘರ್ಷ ಈಗ ಆರಂಭವಾಗಿದೆ. ಆಳುವ ವರ್ಗ ಮತ್ತು ಆರ್.ಎಸ್.ಎಸ್ ಒಂದೆಡೆಯಾದರೆ ಇನ್ನೊಂದು ಕಡೆ ಭಾರತದ ಜನತೆಯ ಜೊತೆಗೆ ಕಾರ್ಮಿಕರು ಮತ್ತು ರೈತರು. ಅವರು ನಮ್ಮ ಮೇಲೆ ಪಿತೂರಿಗಳು, ಮಾಧ್ಯಮ, ಹಣ, ತೋಳ್ಬಲ, ಪೊಲಿಸ್, ಸೇನೆ ಮತ್ತು ಸುಳ್ಳು ಉತ್ಪಾದನಾ ಕಾರ್ಖಾನೆಗಳ ಮೂಲಕ ಕೊಳಕು ಅಸ್ತ್ರಗಳನ್ನು ಉಪಯೋಗಿಸಲಿ.
ನಾವು ಕಾರ್ಮಿಕರು ಮತ್ತು ರೈತರು ಪ್ರತಿಯೊಂದನ್ನು ಉತ್ಪಾದಿಸುವವರು. ನಾವು ನಮ್ಮ ಐಕ್ಯತೆ ಕಾಪಾಡಿಕೊಳ್ಳೋಣ. ನಮ್ಮ ಘನತೆ/ಆತ್ಮಸ್ಥೈರ್ಯ ಕಾಯ್ದುಕೊಳ್ಳೋಣ ಮತ್ತು ಅವರನ್ನು ಎದುರಿಸೋಣ.
ಬಿಜೆಪಿ ಆರ್ ಎಸ್ ಎಸ್ ಮತ್ತು ಸರ್ಕಾರ ಸಂಪೂರ್ಣವಾಗಿ ನಮ್ಮ ವಿರುದ್ಧ ಇವೆ. ನಾವು ಅವರ ವಿರುದ್ಧ ಇದ್ದೇವೆ. ಹಾಗಾಗಿ ಈಗ ಹೋರಾಟದ ಬಗ್ಗೆ ಅತಿಹೆಚ್ಚು ದೃಢವಾದ ನಂಬಿಕೆ ಇರಿಸಬೇಕು.
ಅನು: ಯಮುನಾ ಗಾಂವ್ಕರ್