ಸುಪ್ರೀಂ ನೇಮಿಸಿರುವ ತಜ್ಞರ ಸಮಿತಿಯಲ್ಲಿರುವ ಸದಸ್ಯರು ಯಾರು?

ನವದೆಹಲಿ ಜ 12 : ಸುಪ್ರೀಂ‌ಕೋರ್ಟ್ ಕೃಷಿ‌ಕಾಯ್ದೆಗಳಿಗೆ ಸಂಬಂಧಿಸಿದಂತೆ‌ ಸಲಹೆ‌ ನೀಡಲು ನೇಮಿಸಿರುವ ಸಮಿತಿಯ ಸದಸ್ಯರ ಪಟ್ಟಿ ಇಲ್ಲಿದೆ ನೋಡಿ.

ಈ ಪೈಕಿ‌ ಮೊದಲ ಹೆಸರು ಭೂಪಿಂದರ್ ಸಿಂಗ್ ಮಾನ್. ಈತ BKU ಎಂಬ ಒಕ್ಕೂಟದ ಮಾಜಿ ಅಧ್ಯಕ್ಷ. ಹಿಂದೆ ಇವರು ರಾಜ್ಯಸಭಾ ಸದಸ್ಯರೂ ಆಗಿದ್ದರು. ಹರಿಯಾಣ, ಮಹಾರಾಷ್ಟ್ರ, ಬಿಹಾರ, ತಮಿಳುನಾಡಿನ ಕೆಲ ರೈತ ಸಂಘಟನೆಗಳ ಈ ಒಕ್ಕೂಟ ಬಹಿರಂಗವಾಗಿ ಹೊಸದಾಗಿ ಜಾರಿಗೆ ಬಂದಿರುವ ಕೃಷಿ ಕಾಯ್ದೆಗಳನ್ನು ಬೆಂಬಲಿಸಿದೆ. ಸ್ವತಃ ಭೂಪಿಂದರ್ ಸಿಂಗ್ ಮಾನ್, ಕೆಲವು ಸಂಘಟನೆಗಳ‌ ಮುಖಂಡರೊಂದಿಗೆ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿ ಮಾಡಿ, ವಿರೋಧಗಳಿಗೆ ತಲೆಬಾಗಬೇಡಿ, ಕಾನೂನುಗಳನ್ನು ಜಾರಿಗೆ ತನ್ನಿ‌ ಒಂದು ಒತ್ತಾಯಿಸಿ ಬಂದಿದ್ದರು.

ಇನ್ನು ಅಶೋಕ್ ಗುಲಾಟಿ ಎಂಬ ಹೆಸರಿದೆಯಲ್ಲ, ಹೊಸ ಕೃಷಿ‌ಕಾಯ್ದೆಗಳ ಹಿಂದಿನ ಮೆದುಳುಗಳಲ್ಲಿ ಇವರೂ ಒಬ್ಬರು. ನೀತಿ‌ಆಯೋಗದ‌ ಅಡಿಯಲ್ಲಿ ಸ್ವತಃ ಪ್ರಧಾನಮಂತ್ರಿಯೇ ಸ್ಥಾಪಿಸಿರುವ ಕೃಷಿ‌ ಟಾಸ್ಕ್ ಫೋರ್ಸ್ ಸದಸ್ಯರು ಈ ಅಶೋಕ್ ಗುಲಾಟಿ ಎಂಬ ಕೃಷಿ ಆರ್ಥಿಕ ತಜ್ಞ. ಅಷ್ಟು ಮಾತ್ರವಲ್ಲ, ಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಿರುವವರು, ದಾರಿತಪ್ಪಿಸಲ್ಪಟ್ಟ‌ ರೈತರು. ಸರ್ಕಾರ ಇದಕ್ಕೆ ಬೆಲೆಕೊಡದೆ ಕಾಯ್ದೆಗಳನ್ನು ಜಾರಿಗೆ ತರಬೇಕು. ಸುಧಾರಣೆಯ ಹಾದಿಯಲ್ಲಿ ಇದು ಸರಿಯಾದ ಹೆಜ್ಜೆ ಎಂದು‌ ಬಲವಾಗಿ ಸಮರ್ಥಿಸಿಕೊಂಡವರು.

ಹುಶ್, ಮಿಕ್ಕವರ ಕಥೆ ಏನೋ ಗೊತ್ತಿಲ್ಲ. ಈ ಕಮಿಟಿ ಸುಪ್ರೀಂಕೋರ್ಟಿಗೆ ಏನು ವರದಿ‌ ನೀಡಬಹುದು ಎಂದು ಹೈಸ್ಕೂಲ್ ಮಕ್ಕಳೂ ಊಹಿಸಬಹುದು. ತಜ್ಞರ ವರದಿ ಆಧಾರದಲ್ಲಿ ಸುಪ್ರೀಂಕೋರ್ಟ್ ಸಹ ತನ್ನ ಫರ್ಮಾನು ಹೊರಡಿಸಬಹುದು. ಅಲ್ಲಿಯವರೆಗೆ ಕೃಷಿ‌ ಮಸೂದೆಗಳಿಗೆ ತಡೆ ನೀಡಲಾಗಿದೆ ಅಷ್ಟೆ. ಇತ್ತ ಕೋರ್ಟ್ ಮೂಲಕ ಕಾನೂನ್ನು ತಡೆದು ಮೋದಿಗೆ ಮುಖಭಂಗ ಮಾಡಿ, ಜೊತೆಗೆ ರೈತರ ಹೋರಾಟಕ್ಕೂ ಸುಪ್ರೀ ಬ್ರೆಕ್ ಹಾಕುವ ಸೂಚನೆ ನೀಡಿದೆ. ಇದರ ಹಿಂದೆ RSS ಅಜೆಂಡಾ ಇದೆ ಎಂಬುದು ತಜ್ಞರ ಅಭಿಪ್ರಾಯ.

ಈ ನಡುವೆ ರೈತರು ಸುಪ್ರೀಂ ರೈತರ ಬಗೆಗಿನ ಕಳಕಳಿಗೆ ಧನ್ಯವಾದ ತಿಳಿಸಿದೆ. ಆದರೆ ಕೋರ್ಟ್ ಮಾಡಿರುವ ಸಮಿತಿಯನ್ನು ಅವರು ಒಪ್ಪಿಲ್ಲ. ಹೋರಾಟವನ್ನು ಮುಂದುವರೆಸುವುದಾಗಿ ಹಾಗೂ ಜನವರಿ 26 ರ ರೈತರ ಹೋರಾಟವನ್ನು ತೀವ್ರಗೊಳಿಸುವುದಾಗಿ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *