ಬೆಂಗಳೂರು: ಕೋವಿಡ್ ರೋಗ ನಿಯಂತ್ರಣದಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್, ಐಸಿಯು ವೆಂಟಿಲೇಟರ್, ಔಷಧಿಗಳ ಕೊರತೆ ದೊಡ್ಡ ಪ್ರಮಾಣದಲ್ಲಿ ಕೊರತೆ ಇದ್ದರೂ ಯಾರು ಪ್ರಶ್ನೆ ಮಾಡಬಾರದಂತೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಬಿಜೆಪಿ ವಿರುದ್ಧ ಆರೋಪಿಸಿದರು.
ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವರು ಹಾಗೂ ಶಾಸಕ ಪ್ರಿಯಾಂಕ ಖರ್ಗೆ ಅವರು ಪಿಎಂ ಕೇರ್ಸ್ ನಿಧಿ ಬಳಕೆ ಮತ್ತು ವಿವರಗಳ ಬಗ್ಗೆಯೂ ಯಾರು ಕೇಳಬಾರದಂತೆ. ಜೊತೆಯಲ್ಲಿ ಪ್ರಧಾನ ಮಂತ್ರಿಗಳ ವಿರುದ್ಧ ಯಾರು ಮಾತನಾಡಬಾರದಂತೆ. ಅದೇ ರೀತಿಯಲ್ಲಿ ಬಿಜೆಪಿ ವಿರೋಧ ಪಕ್ಷವಾಗಿರುವ ರಾಜ್ಯಗಳಲ್ಲಿ ರಾಜ್ಯ ಸರಕಾರದ ಜವಾಬ್ದಾರಿ ಆರೋಪಿಸುವ ಬಿಜೆಪಿಯವರು ಬಿಜೆಪಿ ಅಧಿಕಾರವಿರುವ ರಾಜ್ಯಗಳಲ್ಲಿ ಸರಕಾರದ ವಿರುದ್ಧ ಯಾರೂ ಆರೋಪಿಸಬಾರದೆಂಬ ಬಿಜೆಪಿಯವರು ಅನಾವಶ್ಯಕವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ದೂರಿದರು.
ಇದನ್ನು ಓದಿ: ಕುಸಿದ ಲಸಿಕೆ ಅಭಿಯಾನ – ಲಸಿಕೆ ಕೊರತೆ ಇನ್ನಷ್ಟು ಹೆಚ್ಚಳ ಸಾಧ್ಯತೆ
ಬಿಜೆಪಿಯ ಟೂಲ್ಕಿಟ್ ಪ್ರಚಾರಕರಾಗಿರುವ ಸಿ ಟಿ ರವಿ, ಕೆ ಎಸ್ ಈಶ್ವರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಗಿದ್ದಾರೆ. ಅವರು ಕಾಂಗ್ರೆಸ್ ನವರು ವ್ಯಾಕ್ಸಿನ್ ವಿರೋಧಿ ಎಂದು ಪ್ರಚಾರ ಆರಂಭಿಸಿದ್ದಾರೆ. ಕೇಂದ್ರ ಸರಕಾರ ಹಣ ನೀಡಿದರೂ ಕಾಂಗ್ರೆಸ್ ನವರು ಬಳಸಿಕೊಳ್ಳಲು ಆಗುತ್ತಿಲ್ಲ ಎಂದು ಪ್ರಚಾರ ನಡಸುತ್ತಿದ್ದಾರೆ. ವ್ಯಾಕ್ಸಿನ್ ವಿರೋಧಿ ಟೂಲ್ಕಿಟ್ ಅನ್ನು ಬಿಜೆಪಿ ಅವರು ಪ್ರಾರಂಭ ಮಾಡಿದ್ದಾರೆ ಎಂದು ಪ್ರಿಯಾಂಕ ಖರ್ಗೆ ಅವರು ಆರೋಪಿಸಿದರು.
ಆಡಳಿತ ನಡೆಸುವ ಬಿಜೆಪಿ ಸರಕಾರದ ವಿರುದ್ಧವೇ ಬಿಜೆಪಿಯ ಕೆಲ ಮುಖಂಡರು ಆರೋಪಿಸಿರುವ ಪ್ರಶ್ನೆ ಮಾಡಿರುವ ಬಗ್ಗೆ ವಿವರಿಸಿದ ಪ್ರಿಯಾಂಕ ಖರ್ಗೆ ಅವರು ಹೆಚ್ ವಿಶ್ವನಾಥ್, ಶ್ರೀರಾಮುಲು, ಸಿ ಟಿ ರವಿ, ಜಿ ಎಂ ಸಿದ್ದೇಶ್ವರ್ ಮೊದಲಾದವ ಇತ್ತೀಚಿನ ಹೇಳಿಕೆಗಳನ್ನು ಪ್ರಸ್ತಾಪಿಸಿದರು.
ಇದನ್ನು ಓದಿ: ಲಾಕ್ಡೌನ್ನಿಂದ ರೈತರಿಗೆ 1 ಲಕ್ಷ ಕೋಟಿ ರೂ. ನಷ್ಟ – ಬಡಗಲಪುರ ನಾಗೇಂದ್ರ
ʻʻಕೊರೊನಾ ಪಾಸಿಟಿವ್ ಆದ ಬಿಜೆಪಿ ನಾಯಕರು ಯಾರೂ ಕೂಡ ಸರಕಾರಿ ಆಸ್ಪತೆಯಲ್ಲಿ ಚಿಕಿತ್ಸೆ ಪಡೆದುಕೊಂಡಿಲ್ಲ ಅವರೆಲ್ಲರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇವರಿಗೆ ಸರಕಾರಿ ಆಸ್ಪತ್ರೆಯ ಕಾರ್ಯವಿಧಾನದ ಬಗ್ಗೆಯೇ ಅನುಮಾನವಿದೆ ಎಂದು ಹೇಳಿದರು.
ಬಿಜೆಪಿಯವರು ಅವೈಜ್ಞಾನಿಕವಾದ ಹೇಳಿಕೆಗಳನ್ನು ನೀಡುವ ಮೂಲಕ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಅಪಪ್ರಚಾರ ಮಾಡುವವರೆಗೂ ಸಾವಿನ ಪ್ರಮಾಣ ಹೆಚ್ಚುತ್ತಲೇ ಇರುತ್ತದೆ. ರಾಜ್ಯದಲ್ಲಿ ಮಾತ್ರ ಅಲ್ಲ ದೇಶದಲ್ಲೂ ಅದೇ ಪರಿಸ್ಥಿತಿಯಾಗುತ್ತದೆ. ಇದೇ ರೀತಿ ಸುಳ್ಳು ಹೇಳಿಕೊಂಡು ಇದ್ದರೆ ನಿಮ್ಮ ಅಂತ್ಯವಾಗುತ್ತದೆ ಎಂದು ಪ್ರಿಯಾಂಕ ಖರ್ಗೆ ಆರೋಪಿಸಿದರು.