2 ದಿನದಲ್ಲಿ ಮನೆ ತೆರವಿಗೆ ನೋಟಿಸ್ ಜಾರಿ: ತವರಿಗೆ ಮರಳಿದ ಭಾರತದ ಒಲಿಂಪಿಕ್ಸ್ ತಂಡದ ಶೂಟಿಂಗ್ ಕೋಚ್!

ನವದೆಹಲಿ : ಭಾರತಕ್ಕೆ 3 ಪದಕ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ ಭಾರತ ಪಿಸ್ತೂಲ್ ಶೂಟಿಂಗ್ ತಂಡದ ಕೋಚ್ ಸಮರೇಶ್ ಜಂಗ್ ಕೇಂದ್ರದಿಂದ ಮನೆ ನೆಲಸಮಗೊಳಿಸುವ ನೋಟಿಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಮಧ್ಯದಲ್ಲೇ ತವರಿಗೆ ಮರಳಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮನು ಭಾಕರ್ ಮತ್ತು ಸರ್ಬಜಿತ್ ಸಿಂಗ್ ಪಿಸ್ತೂಲ್ ವಿಭಾಗದಲ್ಲಿ ಮೂರು ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಇವರ ಯಶಸ್ಸಿನ ಹಿಂದೆ ಕೋಚ್ ಸಮರೇಶ್ ಜಂಗ್ ಪ್ರಮುಖ ಪಾತ್ರ ವಹಿಸಿದ್ದರು. ಭಾರತ ಪಿಸ್ತೂಲ್ ವಿಭಾಗದಲ್ಲಿ ಇನ್ನೂ ಕೆಲವು ಸ್ಪರ್ಧೆ ಇರುವ ಮಧ್ಯೆಯೇ ತವರಿಗೆ ಮರಳಬೇಕಾಗಿದೆ. ಅದರಲ್ಲೂ ಮನು ಭಾಕರ್ 25 ಮೀ. ಪಿಸ್ತೂಲ್ ವಿಭಾಗದಲ್ಲಿ ಫೈನಲ್ ತಲುಪಿದ್ದು, ಶನಿವಾರ ಮಹತ್ವದ್ದಾಗಿದೆ.

ಇದೇ ವೇಳೆ ಭಾರತ ತಂಡದ ಪಿಸ್ತೂಲ್ ವಿಭಾಗದ ಕೋಚ್ ಆಗಿರುವ ಸಮರೇಶ್ ಜಂಗ್ ಖೈಬರ್ ಪಾಸ್ ಕಾಲೋನಿಯಲ್ಲಿ ರಕ್ಷಣಾ ಇಲಾಖೆಯ ಜಮೀನಿನಲ್ಲಿ ಮನೆ ಹೊಂದಿದ್ದಾರೆ. ಈ ಮನೆ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿಸಲಾಗಿದೆ.

ಇದನ್ನೂ ಓದಿಮನು ಭಾಕರ್ ಹಿಂದೆ ಬಿದ್ದ 40 ಜಾಹಿರಾತು ಕಂಪನಿಗಳು: ಲಕ್ಷದಲ್ಲಿದ್ದ ಆದಾಯ ಕೋಟಿಗೆ ಏರಿಕೆ!

ಅಕ್ರಮವಾಗಿ ನಿರ್ಮಿಸಲಾಗಿರುವ ಮನೆಯನ್ನು 2 ದಿನದಲ್ಲಿ ನೆಲಸಮಗೊಳಿಸಲಾಗುವುದು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ವಸತಿ ಸಚಿವಾಲಯದ ಲ್ಯಾಂಡ್ ಅಂಡ್ ಡೆವಲಪ್ ಮೆಂಟ್ ಕಚೇರಿ ನೋಟಿಸ್ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಸಬರೇಶ್ ಜಂಗ್ ಒಲಿಂಪಿಕ್ಸ್ ಮಧ್ಯದಲ್ಲೇ ತವರಿಗೆ ಮರಳುತ್ತಿದ್ದಾರೆ.

ನನ್ನ ಮನೆ ಯಾಕೆ ನೆಲಸಮ ಮಾಡಲು ನೋಟಿಸ್ ನೀಡಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಕಳೆದ 75 ವರ್ಷಗಳಿಂದ ನಮ್ಮ ಕುಟುಂಬ ವಾಸ ಮಾಡುತ್ತಿದೆ. ಈಗ ದಿಢೀರನೆ ಏಕೆ ನೋಟಿಸ್ ನೀಡಿದೆ. 2 ದಿನದಲ್ಲಿ ಮನೆ ನೆಲಸಮ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಅರ್ಥವಾಗುತ್ತಿಲ್ಲ ಎಂದು ಅರ್ಜುನ ಪ್ರಶಸ್ತಿ ವಿಜೇತ ಸಮರೇಶ್ ಜಂಗ್ ಪ್ರತಿಕ್ರಿಯಿಸಿದ್ದಾರೆ.

Donate Janashakthi Media

One thought on “2 ದಿನದಲ್ಲಿ ಮನೆ ತೆರವಿಗೆ ನೋಟಿಸ್ ಜಾರಿ: ತವರಿಗೆ ಮರಳಿದ ಭಾರತದ ಒಲಿಂಪಿಕ್ಸ್ ತಂಡದ ಶೂಟಿಂಗ್ ಕೋಚ್!

  1. ನಮ್ಮ ದೇಶದಲ್ಲಿ ಎಲ್ಲವು ಹೀಗಿದೆ..

    ಲೂಟಿಕೋರರು ಇಂಗ್ಲೆಂಡ್‌ಗೆ ವಲಸೆ ಹೋಗಿದ್ದಾರೆ…
    ಆದರೆ ಉತ್ತಮ ಒಲಿಂಪಿಕ್ ತರಬೇತುದಾರ ಪ್ಯಾರಿಸ್‌ನಿಂದ ಹಿಂತಿರುಗುತ್ತಿದ್ದಾರೆ. ಕಾರಣ ಭ್ರಷ್ಟ ರಾಜಕಾರಣ

Leave a Reply

Your email address will not be published. Required fields are marked *