ಅಪೂರ್ಣವಾಗುಳಿದ ಮಹಿಳಾ ‘ಸಮಾನತೆಯೆಡೆಗೆ’ ಅಜೆಂಡಾಗಳ ಚರ್ಚೆಗೆ ಮತ್ತು ವೀಣಾ ದಿ ಆತ್ಮಕತೆ ಬಿಡುಗಡೆಗೆ ಬನ್ನಿ !

ನಾಳೆ ಅಂದರೆ ಜುಲೈ 31, 2023 (ಸೋಮವಾರ) ದಂದು  “ ‘ಸಮಾನತೆಯೆಡೆಗೆ’ ವರದಿಯ ಅಪೂರ್ಣವಾಗುಳಿದ ಕಾರ್ಯಸೂಚಿಗಳು” – ಈ ವಿಷಯದ ಕುರಿತು ಯನ್ನು ಹಮ್ಮಿಕೊಳ್ಳಲಾಗಿದೆ. ಇದರ ಜತೆಗೆ ಆ ಸಮಿತಿಯ ಕಾರ್ಯದರ್ಶಿಯಾಗಿ ಪ್ರಧಾನ ಪಾತ್ರ ನಿರ್ವಹಿಸಿದ ಡಾ.ವೀಣಾ ಮಜುಂದಾರ್ ರವರ ಆತ್ಮಕತೆಯ ಕನ್ನಡ ಅನುವಾದ ‘ಉರುಳುವ ಕಲ್ಲಿನ ನೆನಪಿನ ಸುರುಳಿ’ ಪುಸ್ತಕ ಬಿಡುಗಡೆಯ ಕಾರ್ಯಕ್ರಮವೂ ಇರುತ್ತದೆ. ಬೆಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರ ಮತ್ತು ಕ್ರಿಯಾ ಮಾಧ್ಯಮ  ಈ ಕಾರ್ಯಕ್ರಮವನ್ನು ಬೆಂಗಳೂರು ವಿಶ್ವವಿದ್ಯಾಲಯದ ಮೈಸೂರು ರಸ್ತೆ (ನಾಗರಭಾವಿ) ಯಲ್ಲಿರುವ ಜ್ಞಾನಭಾರತಿ ಕ್ಯಾಂಪಸಿನಲ್ಲಿ ಇರುವ ಸೆನೆಟ್ ಹಾಲ್‌ ನಲ್ಲಿ ಮಧ್ಯಾಹ್ನ 2 ಗಂಟೆಗೆ ಆಯೋಜಿಸಿದೆ ಎಂದು ಸಂಘಟಕರು ತಿಳಿಸಿದ್ದಾರೆ.

‘ಸಮಾನತೆಯೆಡೆಗೆ’ ವರದಿಯು,  1974 ರಲ್ಲಿ ಭಾರತದ ಮಹಿಳೆಯರ ಸ್ಥಿತಿಗತಿಯ ಸಮಿತಿಯ ಆಶ್ರಯದಲ್ಲಿ ಮತ್ತು ಡಾ ವೀಣಾ ಮಜುಂದಾರ್ ಅವರ ಸಮರ್ಥ ನಾಯಕತ್ವದ ಅಡಿಯಲ್ಲಿ ಭಾರತೀಯ ಮಹಿಳಾ ಚಳುವಳಿ ಮತ್ತು ಸ್ವತಂತ್ರ ಭಾರತದಲ್ಲಿ ಮಹಿಳಾ ಅಧ್ಯಯನದ ಅಡಿಪಾಯವನ್ನು ಹಾಕಿತು. ದಶಕಗಳಿಂದ ಲಿಂಗ-ನ್ಯಾಯವಿರುವ ಸಮಾಜಕ್ಕೆ ಸಾಂವಿಧಾನಿಕ ಖಾತರಿಯನ್ನು ಹೊಂದಿದ್ದರೂ, ‘ಲಿಂಗ ಮಸೂರ’ (ಜೆಂಡರ್ ಲೆನ್ಸ್) ದ ಮೂಲಕ ಅಭಿವೃದ್ಧಿ ಮತ್ತು ಪ್ರಜಾಪ್ರಭುತ್ವದ ಮೇಲೆ ಕೇಂದ್ರೀಕರಿಸುವ ಮೂಲಕ ಸ್ವತಂತ್ರ ಭಾರತದಲ್ಲಿ ಹದಗೆಡುತ್ತಿರುವ ಮಹಿಳೆಯರ ಸ್ಥಿತಿಗತಿಯತ್ತ ವರದಿಯು ಸಮಾಜದ ಕಣ್ಣು ತೆರೆಸಿತು.  “ಸಮಾನತೆಯೆಡೆಗೆ” ವರದಿಯ ಸುವರ್ಣ ಮಹೋತ್ಸವ ವರ್ಷದ ಆರಂಭದಲ್ಲಿ, ಈ ವರದಿಯಲ್ಲಿ ಎತ್ತಿ ತೋರಿಸಿರುವ ಅಸಮಾನತೆಗಳನ್ನು ಪರಿಹರಿಸುವಲ್ಲಿ ನಾವು ಎಷ್ಟು ಪ್ರಗತಿ ಸಾಧಿಸಿದ್ದೇವೆ ಎಂಬುದನ್ನು ಅನ್ವೇಷಿಸುವ ಪ್ರಯತ್ನವನ್ನು ಈ ರಾಷ್ಟ್ರೀಯ ವಿಚಾರ ಸಂಕಿರಣ/ಸಮಾಲೋಚನೆ ಮಾಡುತ್ತದೆ.

ಇಳಿಮುಖವಾಗುತ್ತಿರುವ ಲಿಂಗ ಅನುಪಾತ (ಕಾಣೆಯಾಗುತ್ತಿರುವ ಮಹಿಳೆಯರು), ಹೆಚ್ಚುತ್ತಿರುವ ಲಿಂಗ ಆಧಾರಿತ ಹಿಂಸಾಚಾರ, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದಂತಹ ಮೂಲಭೂತ ಅವಶ್ಯಕತೆಗಳನ್ನು ಪ್ರವೇಶಿಸುವಲ್ಲಿ ಲಿಂಗ ಅಸಮಾನತೆಯ ಸಮಸ್ಯೆಗಳನ್ನು ವರದಿಯು ಮುನ್ನೆಲೆಗೆ ತಂದಿದೆ. “ಸಮಾನತೆಯೆಡೆಗೆ” ವರದಿಯು ಭಾರತದಲ್ಲಿ ಲಿಂಗ-ಸಂವೇದನೆಯಿರುವ ನೀತಿ-ನಿರೂಪಣೆಗೆ ಅಡಿಪಾಯವನ್ನು ಹಾಕಿತು. ಮಹಿಳಾ ದೃಷ್ಟಿಕೋನದಿಂದ ಮಹಿಳಾ-ಕೇಂದ್ರಿತ ಸಂಶೋಧನೆಯನ್ನು ಹೆಚ್ಚಿಸಲು ಮಹಿಳಾ ಅಧ್ಯಯನವನ್ನು ಶೈಕ್ಷಣಿಕ ಶಿಸ್ತಾಗಿ ಹೊಂದುವ ಅಗತ್ಯ ಮತ್ತು ಪ್ರಾಮುಖ್ಯತೆಯನ್ನು ಸರ್ಕಾರ ಮತ್ತು ನಾಗರಿಕ ಸಮಾಜವು ಅರಿತುಕೊಳ್ಳುವಂತೆ ಮಾಡಿತು. ಮತ್ತು ‘ಲಿಂಗ’ ವನ್ನು ಸಂಶೋಧನೆ ಮತ್ತು ನೀತಿ-ನಿರೂಪಣೆಗೆ ಒಂದು ವಿಶ್ಲೇಷಣಾತ್ಮಕ  ಆಯಾಮವಾಗಿ ಸ್ಥಾಪಿಸಿತು.

ಲಿಂಗ-ಸಮಾನತೆ ಎಂಬುದು ಸ್ವತಃ ಒಂದು ಗುರಿಗಿಂತ ಹೆಚ್ಚಿನದಾಗಿದೆ ಎಂದು ನಾವು ಒಪ್ಪಿಕೊಂಡರೂ, ಬಡತನವನ್ನು ಕಡಿಮೆ ಮಾಡುವ, ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಮತ್ತು ಉತ್ತಮ ಆಡಳಿತವನ್ನು ನಿರ್ಮಿಸುವ ಸವಾಲನ್ನು ಎದುರಿಸಲು ಇದು ಪೂರ್ವ ಷರತ್ತೂ ಆಗಿದೆ. ಆದಾಗ್ಯೂ, ಮಹಿಳಾ ಚಳುವಳಿ, ಸಾರ್ವಜನಿಕ ನೀತಿ ಮತ್ತು ಸಾಮಾಜಿಕ ಕ್ರಿಯೆಯ ದಶಕಗಳಷ್ಟು  ದೀರ್ಘ ಉಪಕ್ರಮಗಳ ಹೊರತಾಗಿಯೂ; ಶಿಶು ಮರಣ ಪ್ರಮಾಣ (IMR) ಮತ್ತು ತಾಯಂದಿರ ಮರಣ ಪ್ರಮಾಣ (MMR) ,(ಮಹಿಳಾ) ಆರೋಗ್ಯ ವಿಮೆ, ಮೊಬೈಲ್ ಫೋನ್‌ಗಳನ್ನು ಹೊಂದುವುದು, ಆಧುನಿಕ ಗರ್ಭನಿರೋಧಕ ಬಳಕೆ, ರಕ್ತಹೀನತೆ (ಗರ್ಭಿಣಿ ಮತ್ತು ಗರ್ಭಿಣಿಯರಲ್ಲದ ಮಹಿಳೆಯರು), ಬಾಲ್ಯ ವಿವಾಹ (ಹೆಣ್ಣು <18), ಮತ್ತು ನಿಕಟ ಸಂಗಾತಿಗಳ ಹಿಂಸೆ (ದೈಹಿಕ ಅಥವಾ ಲೈಂಗಿಕ) – ಈ   ಮೂಲಭೂತ ವಿಷಯಗಳಲ್ಲಿ ಭಾರತವು ವಿಶ್ವಸಂಸ್ಥೆ ನಿಗದಿ ಪಡಿಸಿದ ಸುಸ್ಥಿರ ಬೆಳವಣಿಗೆಯ (SDG) ಗುರಿಗಳನ್ನು ಪೂರೈಸಲು ಇನ್ನೂ ಹೆಣಗಾಡುತ್ತಿದೆ,

ಈ ಸಂದರ್ಭದಲ್ಲಿ, ಈ ಕೆಳಗಿನ ವಿಷಯಗಳ ಒಳಗೊಂಡು  ಈ ಒಂದು ದಿನದ ಸೆಮಿನಾರ್ ಮತ್ತು ಪ್ಯಾನಲ್ ಚರ್ಚೆಯನ್ನು ಮಾಡಲಿದೆ :

* ‘ಸಮಾನತೆಯೆಡೆಗೆ’ ವರದಿ ಎತ್ತಿರುವ ವಿಷಯಗಳಿಗೆ ಭಾರತದ ಮಹಿಳಾ ಚಳುವಳಿಯ ಪ್ರತಿಕ್ರಿಯೆಗಳು

* ‘ಸಮಾನತೆಯೆಡೆಗೆ’ ವರದಿಯ ಪ್ರಕಟಣೆಯ ನಂತರ, ನಾವು ಎಷ್ಟು ಪ್ರಗತಿ ಸಾಧಿಸಿದ್ದೇವೆ ಮತ್ತು ಇನ್ನೂ ಎಷ್ಟು ಪ್ರಗತಿ ಸಾಧಿಸಲಿದೆ ?

* ಸಮಕಾಲೀನ ಭಾರತದಲ್ಲಿ ಲಿಂಗ ನೀತಿ-ನಿರೂಪಣೆಯಲ್ಲಿ ‘ಸಮಾನತೆಯೆಡೆಗೆ’ ವರದಿಯ ಪ್ರಭಾವ

*SDG ಗುರಿಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಮತ್ತು ಸಾಧಿಸುವಲ್ಲಿ ‘ಸಮಾನತೆಯೆಡೆಗೆ’ ವರದಿಯ ಪ್ರಸ್ತುತತೆ

ಕೃತಿಯ ಜೊತೆಗೆ (“ಸಮಾನತೆಯ ಕಡೆಗೆ”), ಈ ಸೆಮಿನಾರ್ ಅದರ ಕರ್ತೃ ವಿಗೂ ಗೌರವ ವ್ಯಕ್ತಪಡಿಸಲಿದೆ: ಪ್ರೊ ವೀಣಾ ಮಜುಂದಾರ್ ಅವರನ್ನು ಮಹಿಳಾ ಚಳುವಳಿಯ ಎಲ್ಲಾ ಒಡನಾಡಿಗಳು “ವೀಣಾ ದಿ” ಎಂದು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ. ಡಾ. ಎನ್. ಗಾಯತ್ರಿ ಅನುವಾದಿಸಿದ ಡಾ. ವೀಣಾ ಮಜುಂದಾರ್ ಅವರ ಪ್ರಸಿದ್ಧ ಆತ್ಮಚರಿತ್ರೆ “ಮೆಮೊರೀಸ್ ಆಫ್ ರೋಲಿಂಗ್ ಸ್ಟೋನ್” ನ ಕನ್ನಡ ಅನುವಾದ ‘ಉರುಳುವ ಕಲ್ಲಿನ ನೆನಪಿನ ಸುರುಳಿ’ ವನ್ನು ಲೋಕಾರ್ಪಣೆ ಮಾಡುವಲ್ಲಿ, ಮಹಿಳಾ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾನಿಲಯ, ಮತ್ತು ಕ್ರಿಯಾ ಮಾಧ್ಯಮ – ಈ ಎರಡೂ ಸಂಸ್ಥೆಗಳಿಗೆ  ಅಪಾರ ಹೆಮ್ಮೆಯಿದೆ.  ಮಹಿಳಾ ಅಧ್ಯಯನದ ಕ್ಲಾಸಿಕ್ ‌ಗಳನ್ನು ಕನ್ನಡ ಓದುಗರಿಗೆ ಪರಿಚಯಿಸುವ ಡಾ. ಎನ್. ಗಾಯತ್ರಿಯವರ ನಿರಂತರ ಮಿಷನ್ ನ ಭಾಗವಾಗಿ ಈ ಪುಸ್ತಕ ಪ್ರಕಟವಾಗುತ್ತಿದೆ

ಪ್ರೊ. ಜಯಕರ್ ಎಸ್.ಎಮ್ (ಉಪಕುಲಪತಿಗಳು, ಬೆಂಗಳೂರು ವಿಶ್ವವಿದ್ಯಾಲಯ) ಮುಖ್ಯ ಅತಿಥಿಗಳಾಗಿರುತ್ತಾರೆ. ಕಾರ್ಯಕ್ರಮದ  ಪ್ರಸ್ತಾವನೆಯನ್ನು  ಡಾ|| ಸುಧೀಷ್ಣ ಮುಖರ್ಜಿ (ಅಸೋಸಿಯೇಟ್ ಪ್ರಾಧ್ಯಾಪಕರು, ಮಹಿಳಾ ಅಧ್ಯಯನ ಕೇಂದ್ರ, ಬೆಂ.ವಿ ವಿ) ಮಾಡಲಿದ್ದಾರೆ.  ಡಾ|| ಎಂ. ಸಿದ್ದಪ್ಪ (ಸಂಯೋಜಕರು, ಮಹಿಳಾ ಅಧ್ಯಯನ ಕೇಂದ್ರ, ಬೆಂ. ವಿ ವಿ) ಎಲ್ಲರನ್ನು ಸ್ವಾಗತಿಸಲಿದ್ದಾರೆ.

ಡಾ.ವೀಣಾ ಮಜುಂದಾರ್ ಅವರ ಪುತ್ರಿಯರಾದ ಡಾ.ಇಂದ್ರಾಣಿ ಮಜುಂದಾರ್, ಶಾಶ್ವತಿ ಮಜುಂದಾರ್ ಮತ್ತು ರಂಜನಿ ಮಜುಂದಾರ್ ಅವರು ಜಂಟಿಯಾಗಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.  ಪುಸ್ತಕ ಪರಿಚಯವನ್ನು ಡಾ|| ಕೆ.ಎಸ್. ವೈಶಾಲಿ (ಇಂಗ್ಲಿಷ್ ವಿಭಾಗ, ಬೆಂ.ವಿ.ವಿ) ಮಾಡಿಕೊಡಲಿದ್ದಾರೆ.  ಡಾ|| ಎನ್. ಗಾಯತ್ರಿ ಅನುವಾದಕರ ಮಾತುಗಳನ್ನು ಆಡಲಿದ್ದಾರೆ. ಪುಸ್ತಕ ಪ್ರಕಾಶಕರ ಪರವಾಗಿ  ಕೆ. ಎಸ್. ವಿಮಲ (ನಿರ್ದೇಶಕರು, ಕ್ರಿಯಾ ಮಾಧ್ಯಮ) ಮಾತನಾಡಲಿದ್ದಾರೆ.

“ ‘ಸಮಾನತೆಯೆಡೆಗೆ’ ವರದಿಯ ಅಪೂರ್ಣವಾಗುಳಿದ ಕಾರ್ಯಸೂಚಿಗಳು” ವಿಷಯದ ಕುರಿತು ವಿಚಾರ ಸಂಕಿರಣ/ಪ್ಯಾನೆಲ್ ಚರ್ಚೆಯಲ್ಲಿ ಪ್ರೊ. ಆರ್. ಇಂದಿರಾ (ಸಂದರ್ಶಕ ಪ್ರಾಧ್ಯಾಪಕರು, ಅಂಬೇಡ್ಕರ್ ಅಧ್ಯಯನ ಕೇಂದ್ರ, ಮೈಸೂರು), ಪ್ರೊ. ಇಂದ್ರಾಣಿ ಮಜುಂದಾರ್ (ಮಹಿಳಾ ಅಭಿವೃದ್ಧಿ ಅಧ್ಯಯನ ಕೇಂದ್ರ, ನವದೆಹಲಿ), ಡಾ|| ದು. ಸರಸ್ವತಿ (ಲೇಖಕಿ ಮತ್ತು ಸಾಮಾಜಿಕ ಕಾರ್ಯಕರ್ತೆ) ಭಾಗವಹಿಸಲಿದ್ದಾರೆ. ಪ್ರೊ. ಆರ್. ಇಂದಿರಾ ಅಧ್ಯಕ್ಷತೆ  ವಹಿಸಲಿದ್ದಾರೆ.

ಪ್ರೊ. ವೆಂಕಟೇಶ್, (ಮ.ಅ.ಕೇಂದ್ರ, ಬೆಂ.ವಿ.ವಿ) ವಂದನಾರ್ಪಣೆ  ಮಾಡಲಿದ್ದಾರೆ.  ಪ್ರೊ. ಎಸ್. ಸಿದ್ದಪ್ಪ (ಸಂಯೋಜಕರು ಮಹಿಳಾ ಅಧ್ಯಯನ ಕೇಂದ್ರ) ಮತ್ತು  ಶ್ರೀ.ವಸಂತ ರಾಜ್ ಎನ್.ಕೆ   (ನಿರ್ದೇಶಕರು, ಕ್ರಿಯಾ ಮಾಧ್ಯಮ) ಉಪಸ್ಥಿತರಿರುತ್ತಾರೆ.

 

 

 

 

 

Donate Janashakthi Media

Leave a Reply

Your email address will not be published. Required fields are marked *