ಬಳ್ಳಾರಿ : ರಾಜ್ಯದ ಎಲ್ಲ ಪ್ರದೇಶಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ 2021ನೇ ಸಾಲಿನಲ್ಲಿ ಸಹಕಾರ ಸಂಘಗಳಿಗೆ/ಸೌಹಾರ್ದ ಸಹಕಾರಿಗಳಿಗೆ ನಡೆಯಬೇಕಾಗಿದ್ದ ಎಲ್ಲ ರೀತಿಯ ಚುನಾವಣೆಗಳನ್ನು ಏ.26ರಿಂದ ಅನ್ವಯವಾಗುವಂತೆ 06 ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ ಜಿಲ್ಲಾ ಸಂಘಗಳ ನೋಂದಣಿ ಅಧಿಕಾರಿ ಹಾಗೂ ಸಹಕಾರಿ ಸಂಘಗಳ ಉಪನಿಬಂಧಕರಾದ ಡಾ.ಸುನಿತಾ ಸಿದ್ರಾಮ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಸಹಕಾರ ಚುನಾವಣಾ ಪ್ರಾಧಿಕಾರದ ಆಯುಕ್ತರು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಕುರಿತು ಸುತ್ತೋಲೆ ಹೊರಡಿಸಿದ್ದು,ಅದರನ್ವಯ ಬಳ್ಳಾರಿ ಜಿಲ್ಲೆಯಲ್ಲಿ 2021ನೇ ಸಾಲಿನಲ್ಲಿ ನಡೆಯಬೇಕಿದ್ದ ಸಹಕಾರ ಸಂಘಗಳಿಗೆ/ಸೌಹಾರ್ದ ಸಹಕಾರಿಗಳಿಗೆ ನಡೆಯಬೇಕಿದ್ದ ಎಲ್ಲಾ ರೀತಿಯ ಚುನಾವಣೆಗಳನ್ನು 06ತಿಂಗಳ ಅವಧಿಯವರಿಗೆ ಅಥವಾ ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ. ನೊಂದಾಯಿತ ಸೊಸೈಟಿಗಳು/ಸಂಘ ಸಂಸ್ಥೆಗಳ (ಅಧ್ಯಕ್ಷರ/ಉಪಾಧ್ಯಕ್ಷರ/ನಿರ್ದೇಶಕರ) ಚುನಾವಣೆಗಳನ್ನು ಮುಂದೂಡಿದ್ದು, ಚುನಾವಣಾ ಪ್ರಕ್ರಿಯೆಗಳನ್ನು ಮುಂದೂಡಲಾಗಿದೆ ಎಂದು ಅವರು ವಿವರಿಸಿದ್ದಾರೆ.