ಸದನದಲ್ಲಿ ತೀವ್ರ ಗದ್ದಲ-ಈಶ್ವರಪ್ಪ ವಜಾಕ್ಕೆ ಕಾಂಗ್ರೆಸ್ ಬಿಗಿಪಟ್ಟು: ವಿಧಾನಸಭೆ ಕಲಾಪ ಮಾರ್ಚ್ 4ಕ್ಕೆ ಮುಂದೂಡಿಕೆ

ಬೆಂಗಳೂರು: ಫೆಬ್ರವರಿ 14ರಿಂದ ಆರಂಭವಾಗಿದ್ದ ಅಧಿವೇಶನದಲ್ಲಿ ಸಚಿವ ಕೆ.ಎಸ್‌.ಈಶ್ವರಪ್ಪ ರಾಜೀನಾಮೆ ನೀಡಬೇಕೆಂದು ಒತ್ತಾಯದಿಂದಾಗಿ ಗದ್ದಲ ಉಂಟಾಗಿದ್ದರಿಂದ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸದನವನ್ನು ಮಾರ್ಚ್ 4ಕ್ಕೆ ಮುಂದೂಡಿದರು.

ಸಭಾಧ್ಯಕ್ಷರು, ‘ಇನ್ನುಳಿದ ಮೂರು ದಿನಗಳ ಕಲಾಪವನ್ನು ವ್ಯರ್ಥ ಮಾಡುವ ಬದಲಿಗೆ ಕಲಾಪವನ್ನು ಇದೇ ಬರುವ ಮಾರ್ಚ್ 4ಕ್ಕೆ ಸೇರುವಂತೆ ಮುಂದೂಡುತ್ತೇನೆ’ ಎಂದು ಹೇಳಿದರು.

ಇಂದು(ಫೆ.22) ಮಧ್ಯಾಹ್ನ ಕಲಾಪ ಆರಂಭವಾದ ತಕ್ಷಣ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಮುಂದುವರಿಸಿದರು.  ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಂದನಾ ನಿರ್ಣಯ ಮಂಡಿಸಿದರು. ನಂತರವೂ ಗದ್ದಲ ಮುಂದುವರಿಯಿತು.

ಕಾಂಗ್ರೆಸ್ ಸದಸ್ಯರ ತೀವ್ರ ಗದ್ದಲದ ನಡುವೆಯೂ ರಾಜ್ಯ ಸರ್ಕಾರ ಅಗತ್ಯ ಪ್ರಮುಖ ವಿಧೇಯಕಗಳನ್ನು ಅಂಗೀಕಾರ ಮಾಡಿಕೊಂಡಿದೆ.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರ ರಾಷ್ಟ್ರಧ್ವಜ ವಿಚಾರದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಅಧಿವೇಶನದ ಮೊದಲ ಎರಡು ದಿನ ಸುಗಮವಾಗಿ ನಡೆಯಿತು. ಮೂರನೇ ದಿನದಿಂದ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಈಶ್ವರಪ್ಪ ಅವರನ್ನು ವಜಾಮಾಡಬೇಕೆಂದು ಇಂದು ಈಶ್ವರಪ್ಪ ವಿರುದ್ಧ ಭಿತ್ತಿಪತ್ರ ಹಿಡಿದು ಧರಣಿ ನಡೆಸಿದ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದವು.

ಸರ್ಕಾರ ಮತ್ತು ಸಭಾಧ್ಯಕ್ಷರು ಎಷ್ಟೇ ಮನವೊಲಿಕೆಗೆ ಪ್ರಯತ್ನಪಟ್ಟರೂ ಪಟ್ಟು ಸಡಿಲಿಸದೇ ಹೋರಾಟ ಮುಂದುವರಿಸಿದ್ದರಿಂದ ಸದನದಲ್ಲಿ ಯಾವುದೇ ಚರ್ಚೆ ನಡೆಯದಂತಾಯಿತು.

Donate Janashakthi Media

Leave a Reply

Your email address will not be published. Required fields are marked *