ಅತ್ಯಾಚಾರ ಪ್ರಕರಣ: ಸಚಿವರ ಮಗನ ವಿರುದ್ಧ ಆರೋಪಿಸಿದ ಯುವತಿ ಮೇಲೆ ಮಸಿ ದಾಳಿ

  • ಯುವತಿ ಮೇಲೆ ಮಸಿ ದಾಳಿಯಲ್ಲಿ ಇಬ್ಬರು ಭಾಗಿ
  • ರಾಜಸ್ಥಾನದ ಸಚಿವ ಮಹೇಶ್ ಜೋಶಿ ಪುತ್ರ ರೋಹಿತ್‌ ಜೋಶಿ ಆರೋಪ
  • ನ್ಯಾಯಾಲಯದ ಜಾಮೀನು ನಂತರ ಪೊಲೀಸರ ಎದುರು ಹಾಜರಾದ ಆರೋಪಿ

ನವದೆಹಲಿ: ರಾಜಸ್ಥಾನದ ಸಚಿವ ಮಹೇಶ್ ಜೋಶಿ ಪುತ್ರನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಕಾರಣ, ದಕ್ಷಿಣ ದೆಹಲಿಯ ಕಾಳಿಂದಿ ಕುಂಜ್ ರಸ್ತೆಯ ಬಳಿ ತನ್ನ ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಯುವತಿಯ ಮೇಲೆ ಮಸಿ ದಾಳಿ ನಡೆದಿದೆ.

ಸಚಿವರ ಮಗ ರೋಹಿತ್‌ ಜೋಶಿ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿರುವ 23 ವರ್ಷದ ಯುವತಿಯು ದೂರು ದಾಖಲಿಸಿದ್ದಾಳೆ. ಮಸಿ ದಾಳಿಯಲ್ಲಿ ಇಬ್ಬರು ಪುರುಷರು ಭಾಗಿಯಾಗಿದ್ದಾರೆ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಕೂಡಲೆ ಆಕೆಯನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ಕರೆದುಕೊಂಡು ಹೋಗಿ ಕೂಲಂಕುಷವಾಗಿ ಪರೀಕ್ಷಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಫೇಸ್‌ಬುಕ್‌ನಲ್ಲಿ ರೋಹಿತ್ ಜೋಶಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದೆ. ಅಂದಿನಿಂದ ಅವರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಮಹಿಳೆ ಹೇಳಿದ್ದು, ಕಳೆದ ವರ್ಷ ಜನವರಿ ತಿಂಗಳಲ್ಲಿ ಹಲವು ಬಾರಿ ಅತ್ಯಾಚಾರವೆಸಿಗಿದ್ದಾನೆ ಎಂದು ಆತನ ವಿರುದ್ಧ ದೆಹಲಿಯಲ್ಲಿ ಅಪಹರಣ ಮತ್ತು ಅತ್ಯಾಚಾರ ಪ್ರಕರಣ ದಾಖಲು ಮಾಡಿದ್ದಾಳೆ.

ಕಳೆದ ತಿಂಗಳು ರೋಹಿತ್ ಜೋಶಿಯನ್ನು ಬಂಧಿಸಲು ಪೊಲೀಸ್ ತಂಡವನ್ನು ಜೈಪುರಕ್ಕೆ ಕಳುಹಿಸಲಾಗಿತ್ತು. ಆದರೆ ಸಚಿವರ ಪುತ್ರ ಮನೆಯಲ್ಲಿರಲಿಲ್ಲ. ದೆಹಲಿ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದ ನಂತರ ಆರೋಪಿ ರೋಹಿತ್ ಜೋಶಿ ದೆಹಲಿ ಪೊಲೀಸರ ಎದುರು ಹಾಜರಾಗಿದ್ದರು.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಚಿವ ಮಹೇಶ್ ಜೋಶಿ ವಿರುದ್ಧ ಯಾವುದೇ ಆರೋಪಗಳು ಇಲ್ಲದಿರುವುದರಿಂದ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲವೆಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *