ಇಂದು ಸಚಿನ್‌ ಜನ್ಮದಿನ: ಪ್ಲಾಸ್ಮಾ ದಾನ ಮಾಡಲು ನಿರ್ಧಾರ

ಮುಂಬಯಿ: ಇಂದು 48ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ತಮ್ಮ ಅನುಯಾಯಿಗಳು ಮತ್ತು ಹಿತೈಷಿಗಳಿಗೆ ಶುಭಾಶಯ ಕೋರಿದ್ದಾರೆ.

ಈ ಬಗ್ಗೆ ಟ್ವೀಟರ್‌ ನಲ್ಲಿ ವಿಡಿಯೋ ಸಂದೇಶವನ್ನು ನೀಡಿದ ಸಚಿನ್‌ ನಾನು ಸಂದೇಶವನ್ನು ನೀಡಲು ಬಯಸುತ್ತೇನೆ. ಅದನ್ನು ನೀಡಲು ವೈದ್ಯರು ಹೇಳಿದ್ದಾರೆ. ಕಳೆದ ವರ್ಷ, ನಾನು ಪ್ಲಾಸ್ಮಾ ದಾನ ಕೇಂದ್ರವನ್ನು ಉದ್ಘಾಟಿಸಿದ್ದೆ ಮತ್ತು ಅವರ ಸಂದೇಶ, ಸರಿಯಾದ ಸಮಯದಲ್ಲಿ ಪ್ಲಾಸ್ಮಾವನ್ನು ನೀಡಿದರೆ, ರೋಗಿಗಳು ವೇಗವಾಗಿ ಚೇತರಿಸಿಕೊಳ್ಳಬಹುದು. ನಾನು ಕೋವಿಡ್‌ ಸೋಂಕಿತರಿಗೆ ಪ್ಲಾಸ್ಮಾ ದಾನ ಮಾಡಲಿದ್ದೇನೆ. ಹಾಗೆಯೇ ಯಾರೆಲ್ಲಾ ಸಾಧ್ಯವೋ ಅವರು ತಪ್ಪದೇ ಪ್ಲಾಸ್ಮಾ ಹಾಗೂ ರಕ್ತವನ್ನು ದಾನ ಮಾಡಬೇಕೆಂದು ವಿನಂತಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಕಳೆದ ತಿಂಗಳಷ್ಟೇ ನಾನು ಕೋವಿಡ್‌ ಸೋಂಕಿನಿಂದ ಬಳಲಿ ಸತತ 21 ದಿನಗಳ ಚಿಕಿತ್ಸೆ ಮತ್ತು ಪ್ರತ್ಯೇಕ ವಾಸದಿಂದ ಸಾಕಷ್ಟು ಅನುಭವವಾಗಿದೆ. ಈ ಸಂದರ್ಭದಲ್ಲಿ ನನ್ನನ್ನು ಆರೈಕೆ ಮಾಡಿದ ವೈದ್ಯರು, ಆಸ್ಪತ್ರೆಯ ಸಿಬ್ಬಂದಿಗಳಿಗೂ ಹೃತ್ಪೂರ್ವಕ ಧನ್ಯವಾದʼʼವನ್ನು ಅರ್ಪಿಸಿದರು.

ʻʻಕಳೆದ ವರ್ಷ ಪ್ಲಾಸ್ಮಾ ದಾನ ಕೇಂದ್ರವನ್ನು ಉದ್ಘಾಟನೆ ಮಾಡಿದ್ದೆ. ವೈದ್ಯರೊಂದಿಗೆ ಚರ್ಚಿಸುವ ಸಂದರ್ಭದಲ್ಲಿ ನಾನು ಗುಣಮುಖರಾದ ನಂತರ ಪ್ಲಾಸ್ಮಾ ದಾನ ಮಾಡುವುದರಿಂದ ರೋಗಿಗಳು ತುಂಬಾ ಬೇಗನೇ ಚೇತರಿಸಿಕೊಳ್ಳಲಿದ್ದಾರೆ ಎಂದರು. ಅದೇ ನಾನು ಸಹ ಪ್ಲಾಸ್ಮಾ ದಾನ ಮಾಡಲು ನಿರ್ಧರಿಸಿದೆ. ಈಗಾಗಲೇ ಈ ಬಗ್ಗೆ ವೈದ್ಯರಲ್ಲಿಯೂ ಚರ್ಚಿಸಿರುವೆʼʼ ಎಂದು ಸಚಿನ್‌ ತೆಂಡೂಲ್ಕರ್‌ ಹೇಳಿದರು.

ಸಚಿನ್‌ ತೆಂಡೂಲ್ಕರ್‌ ಅವರ ಜನ್ಮದಿನಕ್ಕೆ ವೆಂಕಟೇಶ್‌ ಪ್ರಸಾದ್‌, ವಿವಿಎಸ್‌ ಲಕ್ಷ್ಮಣ್‌, ವಿರಾಟ್‌ ಕೊಯ್ಲಿ, ರವಿಶಾಸ್ತ್ರಿ, ಯುವರಾಜ್‌ ಸಿಂಗ್‌, ಸುರೇಶ್‌ ರೈನಾ, ಸೌರವ್‌ ಗಂಗೂಲಿ, ಸುದರ್ಶನ್‌ ಪಟ್ನಾಯಕ್‌, ದೀಪಾ ಕರ್ಮಾಕರ್‌, ದೊಡ್ಡ ಗಣೇಶ್‌, ನಟ ಚಿರಂಜೀವಿ, ಮಹೇಶ್‌ ಬಾಬು, ವೆಂಕಟೇಶ್‌, ಬಿಸಿಸಿಐ ಮತ್ತು  ಕ್ರಿಕೆಟ್‌ ಅಭಿಮಾನಿಗಳು ಒಳಗೊಂಡು ಕ್ರಿಕೆಟ್‌ ದಿಗ್ಗಜರು, ಸಿನಿಮಾ ರಂಗ ಸೇರಿದಂತೆ ಹಲವರು ಶುಭಾಶಯಗಳನ್ನು ಕೋರಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *