ಮೋದಿ ವರ್ಷಗಳಲ್ಲಿ ಗ್ರಾಮೀಣ ಕಾರ್ಮಿಕರು

ಪ್ರೊ. ಪ್ರಭಾತ್ ಪಟ್ನಾಯಕ್

ಚಿತ್ರ ಕೃಪೆ: ಶಾಂಭವಿ ಥಾಕುರ್, ನ್ಯೂಸ್‍ಲಾಂಡ್ರಿ

ಗ್ರಾಮೀಣ ಶ್ರಮಜೀವಿ ಬಡವರು, ಒಂದೆಡೆಯಲ್ಲಿ ನಿಜಕೂಲಿಯಲ್ಲಿ ಕುಸಿತವನ್ನು ಅನುಭವಿಸುತ್ತಿರುವಾಗಲೇ, ಉದ್ಯೋಗಾವಕಾಶಗಳಲ್ಲಿಯೂ ಕಡಿತವನ್ನು ಎದುರಿಸುತ್ತಿದ್ದಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಿಜಕೂಲಿ ದರಗಳಷ್ಟೇ ಅಲ್ಲ, ಒಟ್ಟಾರೆಯಾಗಿ ನಿಜವಾದ ಗಳಿಕೆಗಳು, ಅಂದರೆ, ಕೆಲಸದ ದಿನಗಳ ಸಂಖ್ಯೆ ಮತ್ತು ನಿಜವಾದ ಕೂಲಿ ದರದ ಗುಣಲಬ್ಧವೂ ಕುಸಿಯುತ್ತಿದೆ. ದುಡಿಯುವ ಬಡವರ ಜೀವನ ಪರಿಸ್ಥಿತಿಗಳು ಮಾತ್ರವಲ್ಲದೆ ನಿಜ ಗಳಿಕೆಯ ಮೇಲೆ ಅವಲಂಬಿತವಾಗಿರುವುದರಿಂದ, ಮೋದಿ ಸರ್ಕಾರವು ಅಧಿಕಾರದಲ್ಲಿದ್ದ ದಶಕವು ಗ್ರಾಮೀಣ ಶ್ರಮಿಕ ಬಡವರ ಜೀವನ ಪರಿಸ್ಥಿತಿಗಳಲ್ಲಿ ಗಮನಾರ್ಹ ಕುಸಿತವನ್ನು ಸ್ಪಷ್ಟವಾಗಿ ಕಂಡಿದೆ; ಜತೆಗೆ ಗ್ರಾಮೀಣ ಬಡವರಿಗೆ ಸಾಮಾಜಿಕ ಭದ್ರತೆಯ ಲಭ್ಯತೆಗಳೂ ಕುಸಿದಿರುವುದನ್ನು ಗಮನದಲ್ಲಿಟ್ಟುಕೊಂಡರೆ, ಈ ವಿಭಾಗವನ್ನು ಎಷ್ಟರ ಮಟ್ಟಿಗೆ ಹಿಂಡಿ-ಹಿಪ್ಪೆ ಮಾಡಲಾಗಿದೆ ಎಂಬುದರ ಸಂಪೂರ್ಣ ಚಿತ್ರಣವನ್ನು ನಾವು ಪಡೆಯುತ್ತೇವೆ. ಬಿಜೆಪಿ ಆಳ್ವಿಕೆಯ ನಿರ್ಲಜ್ಜ ವರ್ಗ ಸ್ವರೂಪ ಇದರಲ್ಲಿ ಸ್ಪಷ್ಟವಾಗುತ್ತದೆ. ಕಾರ್ಮಿಕರು

2014-15 ಮತ್ತು 2022-23ರ ನಡುವೆ ಗ್ರಾಮೀಣ ಭಾರತದಲ್ಲಿನ ನಿಜ ಕೂಲಿ ದರವು ಕೃಷಿ ಕಾರ್ಮಿಕರಿಗಾಗಲಿ ಅಥವಾ ಒಟ್ಟಾರೆಯಾಗಿ ಗ್ರಾಮೀಣ ಕಾರ್ಮಿಕರಿಗಾಗಲೀ ಸುಮಾರಾಗಿ ಏರಿಯೇ ಇಲ್ಲ ಎಂದು ಈಗ ಹಲವಾರು ಸಂಶೋಧಕರು ಖಚಿತಗೊಳಿಸಿದ್ದಾರೆ (ದಾಸ್ ಮತ್ತು ಉಸಾಮಿ, ರಿವ್ಯೂ ಆಫ್‍ ಅಗ್ರೇರಿಯನ್‍ ಸ್ಟಡೀಸ್ , ಜುಲೈ-ಡಿಸೆಂಬರ್ 2023; ದಿ ಟೆಲಿಗ್ರಾಫ್, ಏಪ್ರಿಲ್ 21, 2024 ರಲ್ಲಿ ಒಂದು ಲೇಖನದಲ್ಲಿ ಡ್ರಿಝ್ ಮತ್ತು ಖೇರಾರವರು ಕಂಡುಕೊಂಡ ವಿವರಗಳು ವರದಿಯಾಗಿವೆ). ಅಂತಹ ಅಧ್ಯಯನಗಳಲ್ಲಿ ನಿಜ ಕೂಲಿಯ ಚಲನೆಗಳ ಲೆಕ್ಕಾಚಾರ ಮಾಡಲು ಬಳಸುವ ಬೆಲೆ ಸೂಚ್ಯಂಕಗಳೆಂದರೆ, ಕೃಷಿ ಕಾರ್ಮಿಕರಿಗೆ ಸಂಬಂಧಪಟ್ಟಂತೆ ಕೃಷಿ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕ ಅಥವಾ ಒಟ್ಟಾರೆಯಾಗಿ ಗ್ರಾಮೀಣ ಕಾರ್ಮಿಕರಿಗೆ ಸಂಬಂಧಪಟ್ಟಂತೆ ಗ್ರಾಮೀಣ ಶ್ರಮಿಕರ ಗ್ರಾಹಕ ಬೆಲೆ ಸೂಚ್ಯಂಕ..ಕಾರ್ಮಿಕರು

ಸಮಸ್ಯೆಯೆಂದರೆ, ಈ ಬೆಲೆ ಸೂಚ್ಯಂಕಗಳು 1986-87 ಅನ್ನು ಆಧಾರ ವರ್ಷವಾಗಿ ಹೊಂದಿವೆ, ಅಂದರೆ ಆ ವರ್ಷದಲ್ಲಿನ ಈ ಸಾಮಾಜಿಕ ಗುಂಪಿನ ಬಳಕೆಯ ಸರಕುಗಳ ಬೆಲೆಗಳಲ್ಲಿನ ಏರಿಕೆಯನ್ನು ಅವು ಸೂಚಿಸುತ್ತವೆ. ಈ ಗುಂಪುಗಳು ಬಳಸುವ ಸರಕುಗಳ ಪಟ್ಟಿಯು ಕಾಲಾನಂತರದಲ್ಲಿ ಗಮನಾರ್ಹವಾಗಿ ಬದಲಾಗಿರುವುದರಿಂದ, ಸುಮಾರು ನಾಲ್ಕು ದಶಕಗಳ ಹಿಂದೆ 1986-87ರ ಪಟ್ಟಿಯನ್ನು ತೆಗೆದುಕೊಂಡರೆ, ಇದು ಆ ಗುಂಪಿನ ಮೇಲೆ ಹಣದುಬ್ಬರದ ಪ್ರಭಾವವನ್ನು ಅಳೆಯಲು ಖಂಡಿತವಾಗಿಯೂ ಅಸಮರ್ಪಕವಾಗಿದೆ; ಆದ್ದರಿಂದ ಇತ್ತೀಚಿನ ಬಳಕೆಯ ಪಟ್ಟಿಯನ್ನು ತೆಗೆದುಕೊಳ್ಳುವುದು ಉತ್ತಮ. ಅದಕ್ಕಾಗಿಯೇ ನಾವು ಪ್ರಸ್ತುತ ಚರ್ಚೆಗೆ ಹಣದುಬ್ಬರವನ್ನು ಗಮನಕ್ಕೆ ತಗೊಂಡಿರುವ ನಿಜ ಕೂಲಿಹಣವನ್ನು ಲೆಕ್ಕಹಾಕಲು 2010 ಆಧಾರ ವರ್ಷವಾಗುಳ್ಳ ಗ್ರಾಮೀಣ ಪ್ರದೇಶಗಳ ಗ್ರಾಹಕ ಬೆಲೆ ಸೂಚ್ಯಂಕವನ್ನು ತೆಗೆದುಕೊಳ್ಳುತ್ತೇವೆ, ಅದೂ ಅಧಿಕೃತ ಬೆಲೆ-ಸೂಚ್ಯಂಕವಾಗಿದೆ. ಹಾಗೆ ಮಾಡಿದಾಗ, 2014-15 ಮತ್ತು 2022-23 ರ ನಡುವಿನ ಗ್ರಾಮೀಣ ಕಾರ್ಮಿಕರ ನಿಜಕೂಲಿಯಲ್ಲಿ ಕುಸಿತವನ್ನು ಕಾಣುತ್ತೇವೆ, ನಿಜ ಈ ಕುಸಿತದ ಪ್ರಮಾಣ ಹೆಚ್ಚೇನೂ ಇಲ್ಲ. ಆದರೆ ಕುಸಿತವಂತೂ ಕಾಣುತ್ತದೆ.ಉದಾಹರಣೆಗೆ ಉಳುಮೆಯಲ್ಲಿ ತೊಡಗಿರುವ ಕೃಷಿ ಕಾರ್ಮಿಕರಿಗೆ 2014-15 ಮತ್ತು 2022-23 ರ ನಡುವಿನ ನಿಜ ಕೂಲಿ ದರವು ಅವಧಿಯಲ್ಲಿ ಶೇಕಡಾ 2.7 ರಷ್ಟು ಕಡಿಮೆಯಾಗಿದೆ. ಇತರ ಚಟುವಟಿಕೆಗಳಿಗೆ ಇದೇ ರೀತಿಯ ಲೆಕ್ಕಾಚಾರಗಳನ್ನು ಮಾಡಬಹುದು . ಇದರಿಂದ ಕಳೆದ ದಶಕದಲ್ಲಿ ಗ್ರಾಮೀಣ ಕಾರ್ಮಿಕರ ನೈಜ ನಿಜಕೂಲಿದರಗಳು ವಾಸ್ತವವಾಗಿ ಕುಸಿತವನ್ನೇ ಕಂಡಿವೆ ಎಂಬ ತೀರ್ಮಾನಕ್ಕೆ ಬರಬಹುದು. ಕಾರ್ಮಿಕರು

ಜಿಡಿಪಿ ದರ ಹೆಚ್ಚಳsದ ಗೀಳು ಮತ್ತು ಕಡುಬಡವರು

ಇದು ಗಮನಾರ್ಹವಾದ ತೀರ್ಮಾನವಾಗಿದೆ. ಹಿಂದಿನ ಯಾವುದೇ ಸರ್ಕಾರವು ಜಿಡಿಪಿ ಬೆಳವಣಿಗೆಯ ಬಗ್ಗೆ ಈಗಿನ ಸರ್ಕಾರದಷ್ಟು ಗದ್ದಲವನ್ನು ಮಾಡಿಲ್ಲ, ಆದಾಗ್ಯೂ, ಅದರ ಎಲ್ಲಾ ಗದ್ದಲಗಳ ಹೊರತಾಗಿಯೂ, ಜಿಡಿಪಿ ಬೆಳವಣಿಗೆಯು ಮೋದಿ ವರ್ಷಗಳಲ್ಲಿ ಹಿಂದಿನ ಅವಧಿಗೆ ಹೋಲಿಸಿದರೆ ನಿಜವಾಗಿಯೂ ನಿಧಾನಗೊಂಡಿದೆ. ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುತ್ತಿದೆ ಎಂದು ಮೋದಿಯವರು ಸತತವಾಗಿ ಸಾರುತ್ತಲೇ ಇದ್ದಾರೆ. ಮತ್ತು ಅವರ ಅನುಚರರಂತೂ ಇದನ್ನು ಆಗಲೇ ಸಾಧಿಸಲಾಗಿದೆ ಎಂಬಂತೆ ವರ್ತಿಸುತ್ತಿದ್ದಾರೆ. ಆದರೆ ಪ್ರಧಾನಮಂತ್ರಿಯವರ ಜಿಡಿಪಿ ಬೆಳವಣಿಗೆಯ ಗೀಳು ಏನೇ ಇದ್ದರೂ, ನಿಸ್ಸಂದೇಹವಾಗಿಯೂ ಭಾರತದ ಜನಸಂಖ್ಯೆಯ ಅತ್ಯಂತ ಬಡ ವಿಭಾಗವಾದ ಗ್ರಾಮೀಣ ಶ್ರಮಿಕರ ಜೀವನ ಮಟ್ಟ ಹದಗೆಟ್ಟಿದೆ..ಕಾರ್ಮಿಕರು

ಆದರೆ ಇಷ್ಟೇ ಅಲ್ಲ. 2014 ರಲ್ಲಿ ಅಸ್ತಿತ್ವದಲ್ಲಿದ್ದ ಐದು ಸಾಮಾಜಿಕ ಭದ್ರತಾ ಯೋಜನೆಗಳಾದ ಸಾರ್ವತ್ರಿಕ ವಿತರಣಾ ವ್ಯವಸ್ಥೆ(ಪಿಡಿಎಸ್), ಗ್ರಾಮೀಣ ಉದ್ಯೋಗ ಖಾತ್ರಿ(ಮನರೇಗ), ಹೆರಿಗೆಸೌಲಭ್ಯಗಳು, ಸಾಮಾಜಿಕ ಭದ್ರತಾ ಪಿಂಚಣಿಗಳು ಮತ್ತು ಐಸಿಡಿಎಸ್ ಮೂಲಕ ಮಕ್ಕಳಿಗೆ ಪೋಷಕ ಆಹಾರಮತ್ತು ಮಧ್ಯಾಹ್ನದ ಊಟ ಯೋಜನೆಯಲ್ಲಿ ಪ್ರತಿಯೊಂದನ್ನು ದುರ್ಬಲಗೊಳಿಸಲಾಗಿದೆ ಎಂದು ತಮ್ಮ ಲೇಖನದಲ್ಲಿ ಡ್ರಿಝ್ ಮತ್ತು ಖೇರಾ ಗಮನ ಸೆಳೆದಿದ್ದಾರೆ. ಕಳೆದ ದಶಕದಲ್ಲಿ ಎನ್‌ಡಿಎ ಸರ್ಕಾರ 2011 ರ ಜನಗಣತಿಯ ನಂತರ ಯಾವುದೇ ಜನಗಣತಿ ನಡೆಸದ ಕಾರಣ ಪಿಡಿಎಸ್ ಗೆ ಕೋಟಿಗಟ್ಟಲೆ ಜನರನ್ನು ಸೇರ್ಪಡೆಯಾಗದಂತೆ ಹೊರಗಿಡಲಾಗಿದೆ; ಮನರೇಗ ಅಡಿಯಲ್ಲಿ ಪಾವತಿಸುವ ಕೂಲಿಗಳು ಹಣದುಬ್ಬರಕ್ಕೆ ಅನುಗುಣವಾಗಿ ಏರಿಲ್ಲ ಮತ್ತು ಕೂಲಿ ಪಾವತಿಯಲ್ಲೂ ಅತಿಯಾದ ವಿಳಂಬ ಆಗುತ್ತಿದೆ; ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ ಹಿರಿಯ ನಾಗರಿಕರಿಗೆ ನೀಡುವ ಪಿಂಚಣಿ ಮೊತ್ತವು ತಿಂಗಳಿಗೆ 200 ರೂ.ನ ಹಾಸ್ಯಾಸ್ಪದ ಮಟ್ಟದಲ್ಲೇ ಉಳಿದಿದೆ; ಹೆರಿಗೆ ಸೌಕರ್ಯಗಳನ್ನು ಪ್ರತಿ ಕುಟುಂಬಕ್ಕೆ ಒಂದು ಮಗುವಿಗೆ ಮಾತ್ರ ನಿರ್ಬಂಧಿಸಲಾಗಿದೆ; ಮತ್ತು ಐಸಿಡಿಎಸ್ ಮತ್ತು ಮಧ್ಯಾಹ್ನದ ಊಟ ಯೋಜನೆಗೆ ಕೇಂದ್ರ ಬಜೆಟ್ ನಲ್ಲಿ ಶೇ.40ರಷ್ಟು ಇಳಿಕೆಯಾಗಿದೆ.ಕಾರ್ಮಿಕರು

ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ಅವಧಿಯಲ್ಲಿ ನಿಜಕೂಲಿ ಕಡಿಮೆಯಾಗಿರುವುದಲ್ಲದೆ, ಗ್ರಾಮೀಣ ದುಡಿಯುವ ಬಡವರಿಗೆ ಸಾಮಾಜಿಕ ಭದ್ರತೆ ಪಾವತಿಗಳ ನಿಜಮೌಲ್ಯವೂ ಕಡಿಮೆಯಾಗಿದೆ. ಹೌದು, ಈ ಅವಧಿಯಲ್ಲಿ ಒಂದು ದೊಡ್ಡ ಸಂಖ್ಯೆಯಲ್ಲಿ ಫಲಾನುಭವಿಗಳಿಗೆ ತಿಂಗಳಿಗೆ 5 ಕೆಜಿ ಉಚಿತ ಆಹಾರಧಾನ್ಯಗಳನ್ನು ವರ್ಗಾಯಿಸಲಾಗಿದೆ, ಈ ಯೋಜನೆಯನ್ನು ಮೂಲತಃ ಕೊವಿಡ್ ಸಾಂಕ್ರಾಮಿಕ ಸಮಯದಲ್ಲಿ ಪರಿಚಯಿಸಲಾಯಿತು ಆದರೆ ಈಗ ಅದನ್ನು ಸ್ವಲ್ಪ ಸಮಯದವರೆಗೆ ವಿಸ್ತರಿಸಲಾಗಿದೆ; ಆದರೆ ಇದು ಕಳೆದ ದಶಕದಲ್ಲಿ ಗ್ರಾಮೀಣ ಬಡವರ ಹೆಚ್ಚುತ್ತಿರುವ ಸಂಕಟಗಳನ್ನು ತುಸು ಮಾತ್ರವೇ ಕಡಿಮೆ ಮಾಡಿದೆ.ಕಾರ್ಮಿಕರುi

ಇದನ್ನು ಓದಿ : Select ನರೇಂದ್ರ ಮೋದಿಯವರು ಒಬ್ಬ ಒಳ್ಳೆಯ ನಾಟಕಕಾರ, ಇವೆಂಟ್ ಮ್ಯಾನೇಜರ್ ಅಷ್ಟೇ: ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನರೇಂದ್ರ ಮೋದಿಯವರು ಒಬ್ಬ ಒಳ್ಳೆಯ ನಾಟಕಕಾರ, ಇವೆಂಟ್ ಮ್ಯಾನೇಜರ್ ಅಷ್ಟೇ: ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ

2014ರಿಂದಲೇ ನಿಜಕೂಲಿಯಲ್ಲಿ ಸ್ಥಗಿತತೆ

2014-15ರಲ್ಲಿ ನಿಜ ಕೂಲಿಯ ಚಲನೆಯಲ್ಲಿ ಉಂಟಾದ ತಿರುವು ಸಾಕಷ್ಟು ಗಮನಾರ್ಹವಾಗಿದೆ. ಅಲ್ಲಿಯವರೆಗೂ ನಿಜಕೂಲಿ ದರವು ಸ್ವಲ್ಪ ಸಮಯದಿಂದ ಏರುತ್ತ ಬಂದಿತ್ತು. 2014ರ ನಂತರ ಇದ್ದಕ್ಕಿದ್ದಂತೆ ಅದು ಸ್ಥಗಿತಗೊಂಡಿತು, ಮತ್ತು ಈ ದಶಕದ ಅಂತ್ಯದ ವೇಳೆಗೆ ಕುಸಿದಿದೆ, ಇದರಿಂದ ಒಟ್ಟಾರೆ ಕುಸಿತ ಎದ್ದು ಕಾಣುತ್ತಿದೆ. ಈ ಅವಧಿಯಲ್ಲಿ ಈಗ ಕುಪ್ರಸಿದ್ಧಗೊಂಡಿರುವ ನೋಟುರದ್ಧತಿ ಮತ್ತು ಜಿಎಸ್‌ಟಿಯಂತಹ ಮೋದಿ ಸರ್ಕಾರದ ಆರ್ಥಿಕ ಮೂರ್ಖತನಗಳು ಇದಕ್ಕೆ ಕಾರಣ ಎನ್ನುವಂತಿಲ್ಲ. ನಿಜ, ಅದು ಮತ್ತು ನಂತರ ಬಂದ ಜಿಎಸ್‌ಟಿ ಗ್ರಾಮೀಣ ಶ್ರಮಿಕರ ಸಂಕಟಗಳನ್ನು ಪರಿಸ್ಥಿತಿಯನ್ನು ಹದಗೆಡಿಸಿದವು. ಆದರೆ ನಿಜಕೂಲಿಯಲ್ಲಿ ಸ್ಥಗಿತತೆ 2014-15ರಿಂದಲೇ ಆರಂಭವಾಗಿತ್ತು. ನೋಟುರದ್ಧತಿ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಸಣ್ಣ ಉತ್ಪಾದನಾ ವಲಯದ ಮೇಲೆ ಗಂಭೀರ ಪ್ರತಿಕೂಲ ಪರಿಣಾಮ ಬೀರಿತು ಮತ್ತು ನಿರುದ್ಯೋಗದ ಸೃಷ್ಟಿಗೆ ಕೊಡುಗೆ ನೀಡಿತು, ನಿಜ. ಆದರೆ, ಅದರಿಂದಲೇ 2014-15 ರಲ್ಲಿ ನಿಜಕೂಲಿಯಲ್ಲಿ ಕಂಡುಬಂದ ಸ್ಥಗಿತತೆ ಎಂದು ವಿವರಿಸಲು ಸಾಧ್ಯವಿಲ್ಲ.

ಈ ಎರಡೂ ಕ್ರಮಗಳು, ಮತ್ತು ಕೋವಿಡ್ -19 ರ ಹಿನ್ನೆಲೆಯಲ್ಲಿ ಬಂದ ಕರಾಳ ಲಾಕ್‌ಡೌನ್, ಖಂಡಿತವಾಗಿಯೂ ಉತ್ಪಾದನೆಯನ್ನು ಅಡ್ಡಿಪಡಿಸುವಲ್ಲಿ, ನಿರುದ್ಯೋಗವನ್ನು ಉಂಟುಮಾಡುವಲ್ಲಿ ಮತ್ತು ಗ್ರಾಮೀಣ ಬಡವರ ಸಂಕಟಗಳನ್ನು ಹೆಚ್ಚಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿವೆ. ಆದರೆ ಅವು ಅದಾಗಲೇ ಇದ್ದ ಸನ್ನಿವೇಶವನ್ನು ಉಲ್ಬಣಗೊಳಿಸುವ ಅಂಶಗಳು; ಅದು ನವ-ಉದಾರವಾದದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಗ್ರಾಮೀಣ ಭಾರತದಲ್ಲಿ ನಾವು ಗಮನಿಸುವ ನಿಜಕೂಲಿ ಕುಸಿತದ ಪ್ರಾಥಮಿಕ ಕಾರಣ ಅಲ್ಲ. 2008 ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಆಸ್ತಿ ಬೆಲೆಯ ಗುಳ್ಳೆಯ ಕುಸಿತದ ನಂತರ ಉಂಟಾದ ಬಿಕ್ಕಟ್ಟಿನ ಪರಿಣಾಮ, ಯುಪಿಎ ಸರ್ಕಾರವು ವಿಸ್ತರಣಾಕಾರಿ ಹಣಕಾಸಿನ ನಿಲುವನ್ನು ಅಳವಡಿಸಿಕೊಳ್ಳುವ ಮೂಲಕ ಭಾರತದಲ್ಲಿ ಸ್ವಲ್ಪಮಟ್ಟಿಗೆ ತಗ್ಗಿಸಲ್ಲಪಟ್ಟಿತು.ಕಾರ್ಮಿಕರು

ಆದರೆ2014-15ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಇದನ್ನು ಕೈಬಿಡಲಾಯಿತು . ಈ ಸರಕಾರ ನವ-ಉದಾರವಾದಕ್ಕೆ ಪ್ರಿಯವಾದ ಅತ್ಯಂತ ಸಾಂಪ್ರದಾಯಿಕ ಹಣಕಾಸಿನ ನೀತಿಯನ್ನು ಅನುಸರಿಸಲು ಆರಂಭಿಸಿತು. ಇದು ಅರ್ಥವ್ಯವಸ್ಥೆಯಲ್ಲಿ ಒಟ್ಟಾರೆ ಬೇಡಿಕೆಯ ಮಟ್ಟ ಮತ್ತು ಆಮೂಲಕ ಉದ್ಯೋಗದ ಮೇಲೆ ನೇರವಾಗಿ ಪ್ರತಿಕೂಲ ಪರಿಣಾಮವನ್ನು ಬೀರಿತು ಮತ್ತು ಈ ಪ್ರಕ್ರಿಯೆಯಲ್ಲಿ ಅದುವರೆಗೆ ಸ್ವಲ್ಪಮಟ್ಟಿಗೆ ತಡೆಹಿಡಿದಿದ್ದ ನವ-ಉದಾರವಾದದ ಬಿಕ್ಕಟ್ಟಿನ ಪ್ರಭಾವಕ್ಕೆ ಅರ್ಥವ್ಯವಸ್ಥೆಯನ್ನು ಒಡ್ಡಿತು. ಅರ್ಥವ್ಯವಸ್ಥೆಯಲ್ಲಿ ಎಲ್ಲಿ ಉದ್ಯೋಗ ಕಡಿತ ಉಂಟಾದರೂ ಕೊನೆಗೆ ಅದರ ಪರಿಣಾಮ ಕಾಣುವುದು ಗ್ರಾಮೀಣ ವಲಯದಲ್ಲೇ. ಅರ್ಥವ್ಯವಸ್ಥೆಯ ಬೆಳವಣಿಗೆ ದರದಲ್ಲಿ ಕಡಿತ, ವಿಶೇಷವಾಗಿ ಉದ್ಯೋಗದ ಬೆಳವಣಿಗೆಯ ದರದಲ್ಲಿ ಕಡಿತವು ಅಂತಿಮವಾಗಿ ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ಉದ್ಯೋಗಾವಕಾಶಗಳ ಇಳಿಕೆ ಮತ್ತು ನಿಜಕೂಲಿಗಳ ಕಡಿತದ ರೂಪದಲ್ಲಿ ವ್ಯಕ್ತಗೊಳ್ಳುತ್ತದೆ.

ನಿಜಗಳಿಕೆಯಲ್ಲೂ ಕುಸಿತ

ನಿಜ ಹೇಳಬೇಕೆಂದರೆ, ಈ ಎರಡು ವಿದ್ಯಮಾನಗಳು, ನಿಜಕೂಲಿಯಲ್ಲಿ ಕಡಿತ ಮತ್ತು ಉದ್ಯೋಗಾವಕಾಶಗಳಲ್ಲಿನ ಕಡಿತ, ಒಟ್ಟಿಗೇ ಬರುತ್ತವೆ. ಅರ್ಥವ್ಯವಸ್ಥೆಯಲ್ಲಿನ ಶ್ರಮ ಮೀಸಲುಗಳ ಸಾಪೇಕ್ಷ ಪ್ರಮಾಣವು ಕಡಿಮೆಯಾಗುತ್ತಿದ್ದರೆ, ಅಂದರೆ ಕಾರ್ಮಿಕರ ಸಂಖ್ಯೆಗೆ ಹೋಲಿಸಿದರೆ ಗ್ರಾಮೀಣ ಮೀಸಲು ಶ್ರಮದ ಗಾತ್ರವು ಕಡಿಮೆಯಾಗುತ್ತಿದ್ದರೆ, ನಿಜಕೂಲಿಯಲ್ಲಿ ಕಡಿತವು ಸಂಭವಿಸುವುದಿಲ್ಲ , ಅಂತಹ ಇಳಿಕೆಯು ಗ್ರಾಮೀಣ ಶ್ರಮ ಮಾರುಕಟ್ಟೆಯನ್ನು ಬಿಗಿಗೊಳಿಸುವ ಮಟ್ಟವನ್ನು ತರುತ್ತದೆ ಮತ್ತು ಆದರಿಂದಾಗಿ, ನಿಜಕೂಲಿಯಲ್ಲಿ ಏರಿಕೆಯಾಗಬಹುದೇ ಹೊರತು ಇಳಿಕೆಯಾಗುವುದಿಲ್ಲ. ಆದ್ದರಿಂದ ನಿಜಕೂಲಿಯಲ್ಲಿನ ಕುಸಿತವು ಗ್ರಾಮೀಣ ಕಾರ್ಮಿಕರ ಗಾತ್ರದಲ್ಲಿನ ಗ್ರಾಮೀಣ ಶ್ರಮ ಮೀಸಲು ಗಾತ್ರದಲ್ಲಿ ಏರಿಕೆಯೊಂದಿಗೆ ಸಂಬಂಧ ಹೊಂದಿರಬೇಕು.ಕಾರ್ಮಿಕರು

ಇದು ಗ್ರಾಮೀಣ ಸಂಕಷ್ಟಕ್ಕೆ ಸಂಬಂಧಿಸಿದಂತೆ ಗಂಭೀರ ಪರಿಣಾಮ ಬೀರುತ್ತದೆ. ಇದರರ್ಥ ಗ್ರಾಮೀಣ ಶ್ರಮಜೀವಿ ಬಡವರು, ಒಂದೆಡೆಯಲ್ಲಿ ನಿಜಕೂಲಿಯಲ್ಲಿ ಕುಸಿತವನ್ನು ಅನುಭವಿಸುತ್ತಿರುವಾಗಲೇ, ಉದ್ಯೋಗಾವಕಾಶಗಳಲ್ಲಿಯೂ ಕಡಿತವನ್ನು ಎದುರಿಸುತ್ತಿದ್ದಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಿಜಕೂಲಿ ದರಗಳಷ್ಟೇ ಅಲ್ಲ, ಒಟ್ಟಾರೆಯಾಗಿ ನಿಜಗಳಿಕೆಗಳು, ಅಂದರೆ, ಕೆಲಸದ ದಿನಗಳ ಸಂಖ್ಯೆ ಮತ್ತು ನಿಜ ಕೂಲಿ ದರದ ಗುಣಲಬ್ಧವೂ ಕುಸಿಯುತ್ತಿದೆ. ದುಡಿಯುವ ಬಡವರ ಜೀವನ ಪರಿಸ್ಥಿತಿಗಳು ನಿಜಕೂಲಿ ದರದ ಮೇಲೆ ಮಾತ್ರವಲ್ಲದೆ ನಿಜ ಗಳಿಕೆಯ ಮೇಲೆ ಅವಲಂಬಿತವಾಗಿರುವುದರಿಂದ, ಮೋದಿ ಸರ್ಕಾರವು ಅಧಿಕಾರದಲ್ಲಿದ್ದ ದಶಕವು ಗ್ರಾಮೀಣ ಶ್ರಮಿಕ ಬಡವರ ಜೀವನ ಪರಿಸ್ಥಿತಿಗಳಲ್ಲಿ ಗಮನಾರ್ಹ ಕುಸಿತವನ್ನು ಸ್ಪಷ್ಟವಾಗಿ ಕಂಡಿದೆ; ಜತೆಗೆ ಗ್ರಾಮೀಣ ಬಡವರಿಗೆ ಸಾಮಾಜಿಕ ಭದ್ರತೆಯ ಲಭ್ಯತೆಗಳೂ ಕುಸಿದಿರುವುದನ್ನು ಗಮನದಲ್ಲಿಟ್ಟುಕೊಂಡರೆ, ಈ ವಿಭಾಗವನ್ನು ಎಷ್ಟರ ಮಟ್ಟಿಗೆ ಹಿಂಡಿ-ಹಿಪ್ಪೆ ಮಾಡಲಾಗಿದೆ ಎಂಬುದರ ಸಂಪೂರ್ಣ ಚಿತ್ರಣವನ್ನು ನಾವು ಪಡೆಯುತ್ತೇವೆ.ಕಾರ್ಮಿಕರು

ಬಿಜೆಪಿ ಆಳ್ವಿಕೆಯ ನಿರ್ಲಜ್ಜ ವರ್ಗ ಸ್ವರೂಪ ಈಗ ಸ್ಪಷ್ಟವಾಗುತ್ತದೆ. ಬಿಜೆಪಿಯ ಅಧಿಕಾರದ ದಶಕದಲ್ಲಿ ದೇಶದ ಏಕಸ್ವಾಮ್ಯ ಬಂಡವಾಳಶಾಹಿಗಳು, ವಿಶೇಷವಾಗಿ ಸರಕಾರದ ಒಲವಿನ ಹೊಸ ಏಕಸ್ವಾಮ್ಯ ಬಂಡವಾಳಶಾಹಿಗಳ ವಿಭಾಗವು ಅಪಾರ ಸಮೃದ್ಧಿಯನ್ನು ಕಂಡಿದ್ದಾರೆೆ; ಇಂದು ಆದಾಯ ಮತ್ತು ಸಂಪತ್ತಿನ ಅಸಮಾನತೆಯ ಪ್ರಮಾಣವು, ಉದಾಹರಣೆಗೆ ದೇಶದ ರಾಷ್ಟ್ರೀಯ ಆದಾಯ ಮತ್ತು ಒಟ್ಟು ಸಂಪತ್ತಿನಲ್ಲಿ ಜನಸಂಖ್ಯೆಯ ಶೇಕಡ 1ರ ಪಾಲಿನಿಂದ ಅಳೆದಾಗ, ಪಿಕೆಟ್ಟಿ ಮತ್ತು ಅವರ ಗುಂಪಿನ ಪ್ರಕಾರ ಸ್ವಾತಂತ್ರ‍್ಯದ ಮೊದಲು, ವಸಾಹತುಶಾಹಿ ಆಡಳಿಗಾರರು ಮತ್ತು ಮಹಾರಾಜರು ಜನರ ಮೇಲೆ ಆಧಿಪತ್ಯ ನಡೆಸುವಾಗ ಇದ್ದುದಕ್ಕಿಂತ ಇಂದು ಹೆಚ್ಚಾಗಿದೆ. ಮತ್ತು ಇದು ನಡೆಯುತ್ತಿರುವಾಗ, ಜನಸಂಖ್ಯೆಯ ಅತ್ಯಂತ ಬಡ ವಿಭಾಗಗಳ ಜನರು, ಅಂದರೆ ಗ್ರಾಮೀಣ ಭಾರತದಲ್ಲಿನ ಕೃಷಿ ಮತ್ತು ಇತರ ಶ್ರಮಿಕರು, ತಮ್ಮ ಸಂಪೂರ್ಣ ಜೀವನಮಟ್ಟವೇ ಹದಗೆಡುತ್ತಿರುವುದನ್ನು ಕಂಡಿದ್ದಾರೆ.ಕಾರ್ಮಿಕರುಕಾರ್ಮಿಕರು

ಇದನ್ನು ನೋಡಿ : ಬಿಜೆಪಿ ಸೋಲಸ್ತೇವೆ – ಮೇ ದಿನಕ್ಕೆ ಕಾರ್ಮಿಕರ ಸಂಕಲ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *