ಆರ್‌ಎಸ್‌ಎಸ್ ವಯನಾಡ್ ಸಂತ್ರಸ್ತರಿಗೆ ಸಹಾಯ ಮಾಡುತ್ತಿದೆ ಎಂದು ಸಂಬಂಧವಿಲ್ಲದ ವಿಡಿಯೋ, ಪೋಟೋಗಳನ್ನು ಹಂಚಿಕೊಂಡಿದ್ದ ಘಟನೆ ಮಾಸುವ ಮುನ್ನವೇ ಆರ್‌ಎಸ್‌ಎಸ್ ಮತ್ತೊಂದು ಎಡವಟ್ಟು ಮಾಡುಕೊಂಡಿದೆ.
ಸಂತ್ರಸ್ತರಿಗೆ ಸಹಾಯ ಮಾಡುವ ಸಂದರ್ಭದಲ್ಲಿ, ಇಬ್ಬರು ಯುವಕರು ಮೃತರಾಗಿದ್ದಾರೆ. ಇವರು ತಮ್ಮ ಪರಿವಾರಕ್ಕೆ ಸೇರಿದವರು ಎಂದು ಸುಳ್ಳು ಹೇಳಿಕೆ ನೀಡಿದೆ ಈ ಕುರಿತು ಪತ್ರಿಕಾ ಹೇಳಿಕೆಯನ್ನು ಗಮನಿಸಬಹುದು.
ಕೇರಳದಿಂದ ದೊರೆತ ಮಾಹಿತಿಯ ಪ್ರಕಾರ ಈ ಮೇಲಿನ ಪತ್ರಿಕಾ ಸುದ್ದಿಯಲ್ಲಿರುವ ಪ್ರಜೀಶ್ ಎಂಬ ಯುವಕ ಆ ಪ್ರದೇಶದ ಡಿ.ವೈ.ಎಫ್.ಐ. ಪದಾಧಿಕಾರಿಯಾಗಿದ್ದು, ರಕ್ಷಣಾ ಕಾರ್ಯದಲ್ಲಿ ನಿರತನಾಗಿದ್ದಾಗ ಮೊದಲ ಕುಸಿತ ಸಂಭವಿಸಿದ ಸಮಯದಲ್ಲೇ ತನ್ನ ಜೀಪು ಚಾಲನೆ ಮಾಡುವಾಗ ಸಾವನ್ನಪ್ಪಿದ್ದಾನೆ. ಅವನ ಹೆಸರನ್ನು ಬಳಸಿ ತನ್ನ ಕಾರ್ಯಕರ್ತ ಎಂದು ಆರ್ ಎಸ್ ಎಸ್ ಹೇಳಿಕೊಳ್ಳುತ್ತಿರುವುದು ಅದು ರಾಷ್ಟ್ರೀಯ ಸುಳ್ಳುಗಾರರ ಸಂಘ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಇದನ್ನೂ ಓದಿ : ಉತ್ತರ ಪ್ರದೇಶ : ಜಲಾವೃತವಾದ ರಸ್ತೆಯಲ್ಲಿ ಬೈಕ್ನಲ್ಲಿ ಬರುತ್ತಿದ್ದ ಮಹಿಳೆಗೆ ಕಿರುಕುಳ ಕೊಟ್ಟ ಪುಂಡರು
ವಯನಾಡ್ ದುರಂತ ಸ್ಥಳದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ವಿತರಿಸುವ ಮೂಲಕ ಹಗಲು-ರಾತ್ರಿ ಸಾಂತ್ವನ ಕಾರ್ಯದಲ್ಲಿ ತೊಡಗಿದೆ ಎಂಬ ವಿಡಿಯೋವೊಂದು ಭಾರೀ ವೈರಲ್ ಆಗಿತ್ತು. ಅದನ್ನು ಫ್ಯಾಕ್ಟ್ ಚೆಕ್ ಮೂಲಕ ಪರಿಶೀಲಿಸಿದಾಗ,
ಆರ್‌ಎಸ್‌ಎಸ್ ಹೆಸರಿನಲ್ಲಿ ಹರಿದಾಡುತ್ತಿರುವ ನಟಿ ನಿಖಿಲಾ ವಿಮಲ್ ಕಾಣಿಸಿಕೊಂಡಿರುವ ವಿಡಿಯೋದ ಸತ್ಯಾಸತ್ಯತೆಯನ್ನು ನೋಡಿದಾಗ, ಈ ವೇಳೆ ಆ ವಿಡಿಯೋ ಡೆಮಾಕ್ರಟಿಕ್ ಯೂಥ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ) ಸಂಘಟನೆಗೆ ಸಂಬಂಧಿಸಿದ್ದು ಎಂದು ತಿಳಿದು ಬಂದಿತ್ತು. “ವಯನಾಡ್‌ಗೆ ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡಲು ಮತ್ತು ರವಾನಿಸಲು ಡಿವೈಎಫ್ಐ ಸ್ಥಾಪಿಸಿದ ಕಣ್ಣೂರಿನ ತಳಿಪರಂಬ ಸಂಗ್ರಹ ಕೇಂದ್ರದಲ್ಲಿ ಸ್ವಯಂ ಸೇವಕರೊಂದಿಗೆ ನಟಿ ನಿಖಿಲಾ ಕೈ ಜೋಡಿಸಿದರು” ಆಗಲೂ ಆರ್‌ಎಸ್‌ಎಸ್ ತನ್ನ ಕೆಲಸ ಎಂದು ಸುಳ್ಳು ಹೇಳಿಕೊಂಡಿತ್ತು.
ಒಟ್ಟಿನಲ್ಲಿ ಆರ್‌ಎಸ್‌ಎಸ್ ಎಂದರೆ ರಾಷ್ಟ್ರೀಯ ಸುಳ್ಳುಗಾರರ ಸಂಘ ಎಂಬುದನ್ನು ಮತ್ತೊಮ್ಮೆ ಸಾಬೀತಾಗಿದೆ.