ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆರ್‌ಎಸ್‌ಎಸ್‌ ಸಭೆ; ಜಾಗೃತ ನಾಗರಿಕರು ಕರ್ನಾಟಕ ಸಂಘಟನೆ ಆರೋಪ

ಬೆಂಗಳೂರು : ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿಯಲ್ಲಿ ದಿನಾಂಕ 18-07-2024 ರಂದು ಆರ್‌ಎಸ್‌ಎಸ್‌ ಸಭೆಯನ್ನು ನಡೆಸಲಾಗಿದ್ದು ಅದನ್ನು ಅಲ್ಲಿನ ಆಡಳಿತ ಸಮರ್ಥನೆ ಮಾಡಿಕೊಂಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ವಿಧ್ವವಿದ್ಯಾಲಯದ ಪ್ರಾರಂಭದಿಂದಲೂ ಅಲ್ಲಿ ಆರ್. ಎಸ್. ಎಸ್‌ ತನ್ನ ಅಕ್ರಮ ಚಟುವಟಿಕಗಳನ್ನು ನಡೆಸುತ್ತಿರುವುದು ವರದಿಯಾಗುತ್ತಲೇ ಇದೆ. ವಿಶ್ವವಿದ್ಯಾಲಯವೊಂದರಲ್ಲಿ ಈ ತೆರನ ಚಟುವಟಿಕೆಗಳನ್ನು ನಡೆಸುವುದು ಸರಿಯಲ್ಲವೆಂದು ಸ್ಥಳೀಯರು ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಆದರೆ ಸಂಘದ ಕಾರ್ಯಕರ್ತರಂತೆ ವರ್ತಿಸುತ್ತಿರುವ ಆಡಳಿತ ಮಂಡಳಿಯವರು ಕೇಂದ್ರದಲ್ಲಿ ಬಿಜೆಪಿ ಸರಕಾರ ಇದೆ ಎಂಬ ಧೈರ್ಯದಲ್ಲಿ ತಮ್ಮ ಚಟುವಟಿಕೆಗಳನ್ನು ಯಾವ ಎಗ್ಗೂ ಇಲ್ಲದೇ ನಡೆಸಿಕೊಂಡು ಬರುತ್ತಿರುವುದರ ಸೂಚನೆ ಮೊನ್ನೆ ನಡೆದಿದೆ ಎಂದು ವರದಿಯಾದ ಕಾರ್ಯಕ್ರಮ ಎಂದು ಜಾಗೃತ ನಾಗರಿಕರು ಕರ್ನಾಟಕ ಸಂಘಟನೆ ತಿಳಿಸಿದೆ.

ಈ ಕುರಿತು ಹಿರಿಯ ಸಾಹಿತಿ ಪ್ರೊ.ಕೆ..ಮರುಳಸಿದ್ದಪ್ಪ,ಡಾ.ಜಿ.ರಾಮಕೃಷ್ಣ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ವಿಜಯಾ, ಬಿ.ಶ್ರೀಪಾದ ಭಟ್, ಕೆ.ಎಸ್.ವಿಮಲಾ, ಟಿ.ಸುರೇಂದ್ರ ರಾವ್, ಡಾ.ಮೀನಾಕ್ಷಿ ಬಾಳಿ, ಬಿ.ಎನ್.ಯೋಗಾನಂದ, ಡಾ.ಎನ್‌.ಗಾಯತ್ರಿ, ಜಾಣಗೆರೆ ವೆಂಕಟರಾಮಯ್ಯ ಜಂಟಿ ಹೇಳಿಕೆ ನೀಡಿದದಾರೆ.

ಕೇಂದ್ರೀಯ ವಿಶ್ವವಿದ್ಯಾಲಯವನ್ನು ಕೋಮುವಾದದ ಆಡಂಬೋಲ ಮಾಡಲು ಹೊರಟಿರುವ ಅಲ್ಲಿನ ಆಡಳಿತ ಮಂಡಳಿಯ ಈ ಕುಕೃತ್ಯ ಶೈಕ್ಷಣಿಕ ವಲಯದ ಮಹಾ ದುರಂತವಾಗಿದೆ. ವಿ.ವಿ.ಯಲ್ಲಿ ಸಂಘಿಗಳ ಸಭೆ, ಚಟುವಟಿಕೆ ನಡೆಸುವುದು, ಸಂಘದ ಗೀತೆಯಾಗಿರುವ ನಮಸ್ತೇ ಸದಾ ವತ್ಸಲೇ ಹಾಡಿಸುವುದು ದೇಶದ ಸಂವಿಧಾನಕ್ಕೆ ಮಾಡುತ್ತಿರುವ ಅಪಚಾರವೇ ಆಗಿದೆ. ವಿ.ವಿ.ಯಲ್ಲಿ ಉನ್ನತ ಮಟ್ಟದ ಶೈಕ್ಷಣೀಕ ಚಟುವಟಿಕೆಗಳು, ಜನೋಪಯೋಗಿ ಸಂಶೋಧನೆಗಳು, ವರ್ತಮಾನದ ತಲ್ಲಣಗಳ ಕುರಿತು ರಾಷ್ಟ್ರ, ಅಂತರ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ, ಚಿಂತನ ಮಂಥನಗಳನ್ನು ನಡೆಸುವುದು ಅದರ ಶ್ರೇಯಸ್ಸಿಗೆ ಅಗತ್ಯವಾದ ಚಟುವಟಿಕೆಗಳಾಗಿರುತ್ತವೆ. ಅದರಿಂದ ವಿದ್ಯಾರ್ಥಿಗಳ ಬೆಳವಣಿಗೆಯಾಗುತ್ತದೆ.

ಇದನ್ನು ಓದಿ : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ: ಬಿ ನಾಗೇಂದ್ರಗೆ ಆಗಸ್ಟ್‌ 3ರ ವರೆಗೆ ನ್ಯಾಯಾಂಗ ಬಂಧನ

ಆದರೆ ಇಲ್ಲಿ ಸಂಕುಚಿತ ಮನಃಸ್ಥಿತಿಯನ್ನು ಮೂಡಿಸುವ, ಧರ್ಮದ್ವೇಷ, ಹಗೆತನ, ದೇಶದ ಸಂವಿಧಾನ ಎಂದಿಗೂ ಒಪ್ಪಲಾರದ ಕೋಮುದ್ವೇಷಗಳನ್ನು ತುಂಬುವ ಆರ್. ಎಸ್. ಎಸ್. ಪ್ರತಿಪಾದಿಸುವ ದೇಶ ವಿಭಜಕ ವಿಧ್ವಂಸಕ ಕೃತ್ಯಗಳು ನಡೆಯುತ್ತಿವೆ ಎಂಬುದು ಮತ್ತೆ ಮತ್ತೆ ದೃಢಪಡುತ್ತಿದೆ. ಈ ಮೊದಲೇ ಇಂಥಹ ಚಟುವಟಿಕೆಗಳು ನಡೆದಾಗ ಸ್ಥಳೀಯ ಸಂವಿಧಾನ ಪರ, ಪ್ರಗತಿಶೀಲರು ಬೃಹತ್‌ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದ್ದರು. ಸ್ವಲ್ಪ ದಿನ ಸಮ್ಮನಿದ್ದಂತೆ ನಟಿಸಿ ಮತ್ತೀಗ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂಬ ಕಾರಣಕ್ಕೆ ತಮ್ಮ ಚಟುವಟಿಕೆಗಳನ್ನು ಶುರು ಮಾಡಿರುವುದು ಖಂಡನೀಯ.

ಕೇಂದ್ರೀಯ ವಿಶ್ವವಿದ್ಯಾಲಯ ದೇಶದ ಆಸ್ಥಿಯೇ ಹೋರತೂ ಯಾವುದೇ ಒಂದು ಪಕ್ಷದ ಅಥವಾ ಕೋಮುವಾದೀ ಸಿದ್ದಾಂತವನ್ನು ಪ್ರತಿಪಾದಿಸುವ ಸಂಘಿಗಳ ಆಸ್ತಿಯಲ್ಲ. 140 ಕೋಟಿ ಜನರ ಪ್ರಾತಿನಿಧಿಕ ಸಂಸ್ಥೆಯಾಗಿ ದೇಶದ ಸಂವಿಧಾನದ ಅಡಿಯಲ್ಲಿ ಕೆಲಸ ನಿರ್ವಹಿಸಬೇಕೇ ಹೊರತೂ ಕೇಶವ ಕೃಪಾ ಅಥವಾ ನಾಗಪುರದ ಕಛೇರಿಯಾಗಿ ಅಲ್ಲ ಎಂಬುದನ್ನು ನಾಡಿನ ಪ್ರಜ್ಞಾವಂತ ಜನರ ಪರವಾಗಿ ಜಾಗೃತ ನಾಗರಿಕರು ಕರ್ನಾಟಕ ಹೇಳ ಬಯಸುಯತ್ತದೆ. ಕಲ್ಬುರ್ಗಿಯ ಪ್ರಜ್ಞಾವಂತ ಜನರು ಕೋಮುವಾದಿ ಸಂಘಿಗಳ ಹುನ್ನಾರಿನ ವಿರುದ್ಧ ನಡೆಸುವ ಎಲ್ಲ ಸಂವಿಧಾನ ಪರ, ನಿಜ ಭಾರತದ ಉಳಿವಿನ ಪರವಾದ ಎಲ್ಲ ಕೆಲಸಗಳು, ಮತ್ತು ಪ್ರತಿಭಟನೆಗೆ ಬೆಂಬಲ ಸೂಚಿಸುತ್ತದೆ ಎಂದು ತೀಳಿಸಿದೆ.

 

ಇದನ್ನು ನೋಡಿ : ಏಕಾಏಕಿ ಕತ್ತು ಹಿಡಿದು ತಳ್ಳಿದರೆ ನಮ್ಮ ಬದುಕು ಬೀದಿಗೆ ಬರುತ್ತೆ – ಬಿಡಿಎ ಖಾಸಗೀಕರಣದ ವಿರುದ್ಧ ವರ್ತಕರ ಆಕ್ರೋಶ

Donate Janashakthi Media

Leave a Reply

Your email address will not be published. Required fields are marked *