ಬಿಜೆಪಿ ಗೆಲುವಿಗಾಗಿ ದೇಶಾದ್ಯಂತ ಬಾಂಬ್‌ ಸ್ಪೋಟ ಮಾಡಿದ್ದ ಆರ್‌ಎಸ್‌ಎಸ್‌: ಮಾಜಿ ಪ್ರಚಾರಕನಿಂದ ಸ್ಪೋಟಕ ಮಾಹಿತಿ ಬಹಿರಂಗ

ಮುಂಬೈ: ಚುನಾವಣೆಯಲ್ಲಿ ಬೆಜೆಪಿಯನ್ನು ಗೆಲ್ಲಿಸುವುದಕ್ಕಾಗಿ ಅನೇಕ ಕಡೆಗಳಲ್ಲಿ
ಆರ್‌ಎಸ್‌ಎಸ್‌ ಮತ್ತು ಅದರ ಅಂಗಸಂಸ್ಥೆಯಾದ ವಿಶ್ವ ಹಿಂದೂ ಪರಿಷತ್ ಹಲವಾರು ಬಾಂಬ್ ಸ್ಫೋಟಗಳನ್ನು ನಡೆಸಿವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮಾಜಿ ಪ್ರಚಾರಕ ಯಶವಂತ್‌ ಶಿಂಧೆ ಸ್ಪೋಟಕ ಮಾಹಿತಿ ನೀಡಿದ್ದಾರೆ. ಈ ಕುರಿತು ಅವರು ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿದ್ದು, ದೇಶದಾದ್ಯಂತ ಭಾರೀ ಸಂಚಲನವನ್ನು ಮೂಡಿಸಿದೆ.

ಆರಸ್ಸೆಸ್ ಮಾಜಿ ಪ್ರಚಾರಕ ಯಶವಂತ್ ಶಿಂಧೆ ವಿಡಿಯೋ ಹೇಳಿಕೆಯಲ್ಲಿ, ಆರ್‌ಎಸ್‌ಎಸ್ ದೇಶಾದ್ಯಂತ ಬಾಂಬ್‌ ಸ್ಫೋಟಗಳನ್ನು ನಡೆಸಿತ್ತು ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಈ ಕುರಿತು ಯಶವಂತ್ ಶಿಂಧೆ ಅವರು ನಾಂದೇಡ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು,ಸ್ಫೋಟಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ತನ್ನ ಬಳಿ ಇರುವುದರಿಂದ ಪ್ರಕರಣದ ಸಾಕ್ಷಿಯಾಗಲು ಸಿದ್ಧ ಎಂದು ಹೇಳಿದ್ದಾರೆ.

ಆರ್‌ಎಸ್‌ಎಸ್‌ ಮಾಜಿ ಪ್ರಚಾರಕರನ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್‌ ನಾಯಕರು ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಕಾಂಗ್ರೆಸ್ ಮುಖ್ಯ ವಕ್ತಾರ ಪವನ್ ಖೇರಾ ಮತ್ತು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಈ ಕುರಿತು ಟ್ವೀಟ್‌ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಯಶವಂತ್ ಶಿಂಧೆ ಅವರು 1995 ರಿಂದ ವಿಶ್ವ ಹಿಂದೂ ಪರಿಷತ್,ಬಜರಂಗದಳ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸದಸ್ಯರಾಗಿದ್ದರು ಎಂದು ಹೇಳಿಕೆಯಲ್ಲಿ ಹೇಳಿದ್ದಾರೆ. ನಾಂದೇಡ್ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ ಹಿಮಾಂಶು ಪಾನ್ಸೆ ಮತ್ತು ಇತರ 20 ಮಂದಿಯೊಂದಿಗೆ ತರಬೇತಿಗೆ ಹಾಜರಾಗಿದ್ದರು ಎಂದು ಅವರು ಹೇಳಿದ್ದಾರೆ.

ಹಿಮಾಂಶು ಪನ್ಸೆ ಅವರನ್ನು ಭೇಟಿಯಾಗಲು ನಾಂದೇಡ್‌ಗೆ ಹಲವು ಬಾರಿ ಹೋಗಿದ್ದು, ಹಾಗೆ ಮಾಡಬೇಡಿ ಎಂದು ಹೇಳಿದ್ದೆ ಎಂದು ಯಶವಂತ್ ಶಿಂಧೆ ಹೇಳಿದ್ದಾರೆ. ಬಿಜೆಪಿಯ ಗೆಲುವಿಗಾಗಿ ಆರೆಸ್ಸೆಸ್ ಈ ಸ್ಫೋಟಗಳನ್ನು ಮಾಡಿದೆ ಎಂದು ಯಶವಂತ್ ಶಿಂಧೆ ಆರೋಪಿಸಿದ್ದಾರೆ.

“ಮಿಥುನ್ ಚಕ್ರವರ್ತಿ” ಎಂದು ಕರೆದುಕೊಳ್ಳುವ ವ್ಯಕ್ತಿಯಿಂದ ತರಬೇತಿ ನೀಡಲಾಗುತ್ತಿತ್ತು. (ನಂತರ ಅವನ ನಿಜವಾದ ಹೆಸರು ರವಿ ದೇವ್ ಮತ್ತು ಅವನು ಬಜರಂಗದಳದ ಕಾರ್ಯಕರ್ತ ಎಂದು ಶಿಂಧೆಗೆ ತಿಳಿಯಿತು). ರಾಕೇಶ್ ಧಾವಡೆ ಎಂಬಾತ ತರಬೇತಿ ನೀಡುವ ಸ್ಥಳಕ್ಕೆ ಆತನನ್ನು ಕರೆತಂದು ವಾಪಸ್ ಕರೆದುಕೊಂಡು ಹೋಗುತ್ತಿದ್ದ. ನಂತರ ಮಾಲೆಗಾಂವ್ 2008ರ ಸ್ಫೋಟ ಪ್ರಕರಣದಲ್ಲಿ ಅದೇ ಧವಡೆ ಬಂಧಿತನಾದ ಎಂದು ಶಿಂಧೆ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *