ರೂ. 7 ಲಕ್ಷದ ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ: ಕೇಂದ್ರ ಹಣಕಾಸು ಸಚಿವೆ

ನವದೆಹಲಿ: ಕೇಂದ್ರ ಸರ್ಕಾರ ಮಂಡಿಸಿದ 2023-24ನೇ ಸಾಲಿನ ಬಜೆಟ್‌ ನಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದ್ದು ರೂ. 7 ಲಕ್ಷದ ವರೆಗಿನ ಆದಾಯ ಪಡೆಯುವವರಿಗೆ ವಿನಾಯ್ತಿ ನೀಡಿದೆ. 9 ಲಕ್ಷ ರೂಪಾಯಿ ಆದಾಯ ಪಡೆಯುವವರು ರೂ. 45 ಸಾವಿರ ರೂಪಾಯಿ ತೆರಿಗೆ ಕಟ್ಟಬೇಕಾಗಿದೆ.

ಈಗ ಹೊಸ ತೆರಿಗೆ ವ್ಯವಸ್ಥೆಯಲ್ಲಿ ವಾರ್ಷಿಕ ಆದಾಯ 7 ಲಕ್ಷದವರೆಗೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಆದರೆ ತೆರಿಗೆ ವಿನಾಯಿತಿ ಪಡೆಯುವವರು ಸಂಬಂಧಿಸಿದಂತೆ ದಾಖಲೆಗಳನ್ನು ಸಲ್ಲಿಸಬೇಕಿದೆ. ಉದಾ: ಮನೆ ಬಾಡಿಗೆ ಕಟ್ಟುವ ಮಾಹಿತಿಯನ್ನು ಒದಗಿಸಬೇಕು.

ತೆರಿಗೆ ಸ್ಲ್ಯಾಬ್ 6 ರಿಂದ 5 ಕ್ಕೆ: ರೂ. 2.5 ಲಕ್ಷದಿಂದ ಪ್ರಾರಂಭವಾಗುವ 6 ಆದಾಯ ಸ್ಲ್ಯಾಬ್‌ಗಳೊಂದಿಗೆ ಹಿಂದಿನ 2020ರಲ್ಲಿ ಹೊಸ ವೈಯಕ್ತಿಕ ಆದಾಯ ತೆರಿಗೆ ಪದ್ಧತಿಯನ್ನು ಪರಿಚಯಿಸಿದ್ದೆ. ಈ ವ್ಯವಸ್ಥೆಯಲ್ಲಿ ಈ ಬಾರಿ ಹೊಸ ತೆರಿಗೆ ನೀತಿಯನ್ನು ಪ್ರಸ್ತಾಪಿಸುತ್ತಿದ್ದೇನೆ ಎಂದಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಈ ಮೊದಲು ಇದ್ದ ಸ್ಲ್ಯಾಬ್‌ಗಳ ಸಂಖ್ಯೆಯನ್ನು 5ಕ್ಕೆ ಇಳಿಸಿ ಮತ್ತು ತೆರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷಕ್ಕೆ ಏರಿಕೆ ಮಾಡಿದ್ದೇನೆ ಘೋಷಿಸಿದರು.

ಹೊಸ ತೆರಿಗೆ ಪದ್ಧತಿಯಲ್ಲಿಯಡಿ

ರೂ 0 ರಿಂದ ರೂ 3 ಲಕ್ಷದವರೆಗೆ – 0%

ರೂ 3 ರಿಂದ 6 ಲಕ್ಷದವರೆಗೆ – 5%

ರೂ 6 ರಿಂದ 9 ಲಕ್ಷದವರೆಗೆ – 10%

ರೂ 9 ರಿಂದ 12 ಲಕ್ಷದವರೆಗೆ – 15%

ರೂ 12 ರಿಂದ 15 ಲಕ್ಷದವರೆಗೆ – 20%

15 ಲಕ್ಷದ ಮೇಲೆ – 30%

ಮಧ್ಯಮ ವರ್ಗದ ಜನರು ತೆರಿಗೆ ಪಾವತಿ ಮಿತಿಯನ್ನು ಏರಿಕೆ ಮಾಡಲಾಗಿದೆ. ಇದೀಗ ವೇತನ ಪಡೆಯುವ ವರ್ಗ 7 ಲಕ್ಷ ರೂಪಾಯಿ ವರೆಗೆ ಯಾವುದೇ ತೆರಿಗೆ ಪಾವತಿ ಮಾಡುವಂತಿಲ್ಲ. ಇದುವರೆಗೆ 5 ಲಕ್ಷ ರೂಪಾಯಿ ವರೆಗೆ ಮಾತ್ರ ಆದಾಯ ತೆರಿಗೆ ವಿನಾಯಿತಿ ಮಾಡಲಾಗಿತ್ತು. ಇದೀಗ ಈ ಮಿತಿಯನ್ನು ಹೆಚ್ಚಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *