ಉತ್ತರ ಪ್ರದೇಶ: ಎಲ್ಲೆಡೆ ಬೋರ್ಡ್ ಪರೀಕ್ಷೆಗಳು ನಡೆಯುತ್ತಿವೆ. ಕರ್ನಾಟಕದಲ್ಲೂ ಹತ್ತನೇ ತರಗತಿ ಪರೀಕ್ಷೆ ನಡೆಯುತ್ತಿದೆ. ಇದೇ ರೀತಿ ಯುಪಿ ಬೋರ್ಡ್ 10ನೇ ಮತ್ತು 12ನೇ ಪರೀಕ್ಷೆಯು ನಡೆದಿದೆ. ಪ್ರದೇಶ
ಉತ್ತಮ ಅಂಕ ಪಡೆದು ಪಾಸ್ ಆಗಬೇಕೆಂದ ವಿದ್ಯಾರ್ಥಿಗಳು ಕಷ್ಟ ಪಟ್ಟು ಪಾಸ್ ಮಾಡ್ತಾರೆ. ಇನ್ನೂ ಕೆಲವರು ಕಾಪಿ ಮಾಡಿ ಕೂಡ ಪಾಸ್ ಮಾಡ್ತಾರೆ. ಆದರೆ ಇಲ್ಲಿ ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳನ್ನು ಜೋಡಿಸುವುದಲ್ಲದೇ ಉತ್ತರ ಪತ್ರಿಕೆಗಳಲ್ಲಿ ನೋಟನ್ನು ಜೋಡಿಸಿದ್ದಾರೆ. ಪ್ರದೇಶ
ಯುಪಿ ಬೋರ್ಡ್ 10ನೇ ಮತ್ತು 12ನೇ ಪರೀಕ್ಷೆಯ ಪ್ರತಿಗಳ ಪರಿಶೀಲನೆ ನಡೆಯುತ್ತಿದೆ. ಈ ಸಮಯದಲ್ಲಿ, ಪರೀಕ್ಷಕರು ಈ ಉತ್ತರ ಪತ್ರಿಕೆಗಳಲ್ಲಿ ಅನೇಕ ವಿಷಯಗಳನ್ನು ಕಂಡುಕೊಳ್ಳುತ್ತಿದ್ದಾರೆ. ಕೆಲವು ಉತ್ತರ ಪತ್ರಿಕೆಗಳಲ್ಲಿ 200 ಮತ್ತು 500 ರೂ. ನೋಟುಗಳು ಕಂಡುಬಂದಿವೆ ಮತ್ತು ಇನ್ನು ಕೆಲವು ಉತ್ತರ ಪತ್ರಿಕೆಗಳಲ್ಲಿ ಅಭ್ಯರ್ಥಿಗಳು ಶಿಕ್ಷಕರನ್ನು ಪಾಸ್ ಮಾಡುವಂತೆ ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: ಸರಕಾರೀ ಪಿಂಚಣಿದಾರರಲ್ಲಿ ತಾರತಮ್ಯಕ್ಕೆ ಅನುವು ಮಾಡಿ ಕೊಡುವ ಮಸೂದೆಗೆ ಅಂಗೀಕಾರ
ಉತ್ತರ ಪತ್ರಿಕೆಗಳನ್ನು ಕಂಡು ಆಶ್ಚರ್ಯಚಕಿತರಾದ ಶಿಕ್ಷಕರು
ಉತ್ತರ ಪತ್ರಿಕೆಗಳನ್ನು ಪರಿಶೀಲಿಸುವ ಶಿಕ್ಷಕರೇ ಸ್ವತಃ ವಿದ್ಯಾರ್ಥಿಗಳ ಇಂತಹ ನಡವಳಿಕೆಯನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಯಾಕಂದ್ರೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದರಲ್ಲಿ ಸಾಬೀತು ಪಡಿಸಬೇಕಾದ ತಮ್ಮ ಕೌಶಲ್ಯವನ್ನು ಹೀಗೆ ಉತ್ತರ ಪರೀಕ್ಷೆಗಳಲ್ಲಿ ನೋಟು ಜೋಡಿಸುವುದು ಮತ್ತು ಶಿಕ್ಷಕರಲ್ಲಿ ಕೇಳಿಕೊಳ್ಳುವ ಮೂಲಕ ಸಾಬೀತು ಪಡೆಸಿದ್ದಾರೆ.
ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯುಲ್ಲಿ ಈ ಒಂದು ವಿಭಿನ್ನ ಪ್ರಕರಣ ಬೆಳಕಿಗೆ ಬಂದಿದೆ. 10 ಮತ್ತು 12 ನೇ ತರಗತಿಯ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಸಮಯದಲ್ಲಿ, ಕೆಲವು ಉತ್ತರ ಪತ್ರಿಕೆಗಳಲ್ಲಿ 200 ಮತ್ತು 500 ರೂ.ಗಳ ನೋಟುಗಳು ಕಂಡುಬಂದಿವೆ.
ಬಲ್ಲಿಯಾದಲ್ಲಿ, ಜಿಐಸಿ, ಜಿಜಿಐಸಿ, ಶ್ರೀ ಮುರಳಿ ಮನೋಹರ್ ಟೌನ್ ಇಂಟರ್ ಕಾಲೇಜು ಮತ್ತು ಕುನ್ವರ್ ಸಿಂಗ್ ಇಂಟರ್ ಕಾಲೇಜುಗಳಲ್ಲಿ ಯುಪಿ ಬೋರ್ಡ್ ಪ್ರತಿಗಳ ಮೌಲ್ಯಮಾಪನ ನಡೆಯುತ್ತಿದೆ. ಇಲ್ಲಿಂದ ಬಂದ ಪರೀಕ್ಷಕರು, ವಿದ್ಯಾರ್ಥಿಗಳ ಉತ್ತರ ಪ್ರತಿಯಲ್ಲಿ ಸಿಕ್ಕ ವಸ್ತುಗಳ ಬಗ್ಗೆ ಮತ್ತು ಪಾಸ್ ಮಾಡುವಂತೆ ಮನವಿ ಮಾಡಿರುವ ಬಗ್ಗೆ ತಿಳಿಸಿದ್ದಾರೆ.
ಒಂದು ಪ್ರತಿಯಲ್ಲಿ ವಿದ್ಯಾರ್ಥಿಯೊಬ್ಬರು 200 ರೂಪಾಯಿ ನೋಟನ್ನು ಟೇಪ್ ಜೊತೆ ಅಂಟಿಸಿದ್ದಾರೆ. ಇನ್ನು ಕೆಲವು ಪ್ರತಿಗಳಲ್ಲಿ 200 ಮತ್ತು 500 ರೂಪಾಯಿ ನೋಟುಗಳು ಸಿಲುಕಿಕೊಂಡಿರುವುದು ಕಂಡುಬಂದಿದೆ ಎಂದು ಹೇಳಿದರು. ಇದನ್ನು ಕಂಡು ಎಲ್ಲರೂ ಒಮ್ಮೆ ದಿಗ್ಭ್ರಮೆಗೊಂಡರು ಎಂದು ಮೌಲ್ಯಮಾಪನ ಮಾಡಲು ಬಂದ ಶಿಕ್ಷಕರು ತಿಳಿಸಿದ್ದಾರೆ.
ಗುರೂಜಿ, ದಯವಿಟ್ಟು ನನ್ನನ್ನು ಪಾಸ್ ಮಾಡಿ ಎಂದು ಮನವಿ
ಉತ್ತರ ಪತ್ರಿಕೆಗಳಲ್ಲಿ ನೋಟು ಜೋಡಿಸಿರುವುದಷ್ಟೇ ಅಲ್ಲದೇ, ನನ್ನನ್ನು ಪಾಸ್ ಮಾಡಿ ಎಂದು ಪರಿ ಪರಿಯಾಗಿ ಬೇಡಿಕೊಂಡಿರುವುದು ಕಂಡುಬಂದಿದೆ. ಗುರೂಜಿ, ದಯವಿಟ್ಟು ನನ್ನನ್ನು ಪಾಸ್ ಮಾಡಿ ಎಂದು ಬರೆದಿದ್ದಾರೆ. ಯುಪಿ ಬೋರ್ಡ್ ಪ್ರತಿಗಳನ್ನು ಪರಿಶೀಲಿಸುತ್ತಿದ್ದ ಪರೀಕ್ಷಕರೊಬ್ಬರು, ಹಲವು ಪ್ರತಿಗಳಲ್ಲಿ ಅಭ್ಯರ್ಥಿಗಳು ಗುರೂಜಿ, ದಯವಿಟ್ಟು ನನ್ನನ್ನು ಹೇಗಾದರೂ ಪಾಸ್ ಮಾಡಿ ಎಂದು ಬರೆದಿದ್ದಾರೆ ಎಂದು ಹೇಳಿದರು.
ನಾನು ಪಾಸಾಗದಿದ್ದರೆ ನನ್ನ ವೃತ್ತಿಜೀವನ ಹಾಳಾಗುತ್ತದೆ. ಆದ್ದರಿಂದ ಸರ್ ದಯವಿಟ್ಟು ನನ್ನನ್ನು ಪಾಸ್ ಮಾಡಿಸಿ ಎಂದು ಕೆಲವರು ಬರೆದಿದ್ದಾರೆ.
ಯುಪಿ ಮಂಡಳಿಯ ಶೇಕಡಾ 85 ರಷ್ಟು ಪ್ರತಿಗಳನ್ನು ಮೌಲ್ಯಮಾಪನ ಮಾಡಲಾಗಿದೆ ಮತ್ತು ಇದರ ಆಧಾರದ ಮೇಲೆ ಯುಪಿ ಮಂಡಳಿಯ ಫಲಿತಾಂಶವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಬಹುದು ಎಂದು ಅಂದಾಜಿಸಲಾಗುತ್ತಿದೆ.
ಇದನ್ನೈ ನೋಡಿ: ಚಾತುರ್ವರ್ಣ ಪ್ರತಿಪಾದಿಸುವ ಆರೆಸ್ಸೆಸ್ ಗೆ ಜಾತಿ ವಿನಾಶ ಕುರಿತು ಮಾತನಾಡುವ ನೈತಿಕತೆ ಇದೆಯೇ? Janashakthi Media