ಉತ್ತರ ಪ್ರದೇಶದ ಉದ್ಯಮಿ ಮನೆಯಲ್ಲಿ ಐಟಿ ದಾಳಿ: 150 ಕೋಟಿಗೂ ಹೆಚ್ಚು ಹಣ ಪತ್ತೆ

ನವದೆಹಲಿ: ಸುಗಂಧ ದ್ರವ್ಯ ಉದ್ಯಮದ ಭಾಗೀದಾರ ಕಾನ್ಪುರದ ಉದ್ಯಮಿ ಪಿಯೂಷ್ ಜೈನ್ ಅವರ ಮನೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಇದುವರೆಗೆ ₹150 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ದಾಳಿ ಮುಂದುವರೆದಿದ್ದು ಅಕ್ರಮ ಸಂಪತ್ತನ್ನು ಪತ್ತೆ ಹಚ್ಚುತ್ತಿದ್ದಾರೆ.

ನೆನ್ನೆಯಿಂದ ದಾಳಿ ಆರಂಭವಾಗಿದ್ದು, ಇಂದು ಸಹ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ. ಪುಷ್ಕರ್ ಪಾನ್​ ಮಸಾಲಾ ಕಂಪನಿಯ ಮಾಲೀಕ, ಉದ್ಯಮಿ ಪಿಯೂಷ್ ಜೈನ್ ಮನೆ, ಕಚೇರಿ, ಫ್ಯಾಕ್ಟರಿ ಸೇರಿದಂತೆ ಕನೌಜ್​, ಮುಂಬೈ, ಗುಜರಾತ್​ನ ಮನೆ, ಕಚೇರಿ ಸೇರಿ ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ಮಾಡಲಾಗಿದೆ. ಮನೆಯಲ್ಲಿ ಎರಡು ದೊಡ್ಡ ಅಲೆಮಾರದಲ್ಲಿ ಕಂತೆ ಕಂತೆ ಹಣವನ್ನು ಶೇಖರಿಸಿರುವುದು ಮತ್ತೆಯಾಗಿದೆ.  ಹಣದ ಕಂತೆಗಳು ಪ್ಲಾಸ್ಟಿಕ್‌ ಕವರ್‌ ನಲ್ಲಿ ಸುತ್ತಿ ಪಟ್ಟಿಯನ್ನು ಕಟ್ಟಲಾಗಿದೆ.

ಐಟಿ ಮತ್ತು ಜಿಎಸ್‌ಟಿ ಅಧಿಕಾರಿಗಳು ಮನೆಯ ಕೋನೆಯ ತುಂಬಾ ಹಣದ ರಾಶಿಯನ್ನು ಮೂರು ನೋಟು ಎಣಿಸುವ ಯಂತ್ರಗಳಿಂದ ಲೆಕ್ಕ ಹಾಕುತ್ತಿದ್ದಾರೆ.

ತೆರಿಗೆ ವಂಚನೆ ಮಾಡಿರುವವರ ಮೇಲೆ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಅಧಿಕಾರಿಗಳು ಈ ದಾಳಿಯನ್ನು ಕೈಗೊಂಡಿದ್ದಾರೆ. ನಿಖರವಾದ ಮಾಹಿತಿಯನ್ನು ಕಲೆಹಾಕಿರುವ ಐಟಿ ಅಥವಾ ಆದಾಯ ತೆರಿಗೆ ಇಲಾಖೆಯು ದಾಳಿಯನ್ನು ನಡೆಸಿದೆ.

ನಕಲಿ ಪಾವತಿ ರಸೀದಿಗಳನ್ನು ರಚಿಸಿಕೊಂಡಿರುವ ಉದ್ಯಮಿಯು ಇ-ವೇ ಬಿಲ್‌ಗಳಿಲ್ಲದೆ ಸರಕುಗಳ ರವಾನೆಗೆ ಬಳಸಿಕೊಂಡಿದ್ದಾರೆ. ಈ ಪಾವತಿ ರಸೀದಿಗಳು ನಕಲಿ ಸಂಸ್ಥೆಯ ಹೆಸರಿನಲ್ಲಿ ಸೃಷ್ಠಿಯಾಗಿದ್ದು, ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿಗಳು ಇಲ್ಲ.

ಈ ನಕಲಿ ರಸೀದಿಗಳು ತಲಾ ₹50,000 ಮತ್ತು 200 ಕ್ಕೂ ಹೆಚ್ಚು ಜಿಎಸ್‌ಟಿ ಪಾವತಿಗಳಿಲ್ಲದೆ ರಚಿಸಲಾಗಿದೆ – ವ್ಯಾಪಾರಿಯ ಗೋದಾಮಿನೊಳಗೆ ನಾಲ್ಕು ಟ್ರಕ್‌ಗಳಲ್ಲಿ ಕಂಡುಬಂದಿವೆ. ತೆರಿಗೆ ಅಧಿಕಾರಿಗಳು ಎಲ್ಲಾ ನಾಲ್ಕು ಟ್ರಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *