”ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಬೆಳೆಯುತ್ತಿರುವ ಕೋಮುದ್ವೇಷ” – ದುಂಡು ಮೇಜಿನ ಸಭೆ
ಹಾಸನ : ಎರಡೂ ಮೂಲಭೂತವಾದಿಗಳೂ ದೇಶಕ್ಕೆ ಅಪಾಯಕಾರಿ, ಇವೆರಡನ್ನು ನಾವು ಬಲವಾಗಿ ಖಂಡಿದಬೇಕು. ಬೇಲೂರಿನಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ಕೆಲಸಕ್ಕೆ ಕೈ ಹಾಕಿರುವ ಬಜರಂಗದಳ, ವಿಶ್ವಹಿಂದು ಪರಿಷತ್ತಿನ ಈ ಹುನ್ನಾರಗಳನ್ನು ದಲಿತರು, ಅಲ್ಪಸಂಖ್ಯಾತರರು, ಜಾತ್ಯಾತೀತ ಮತ್ತು ಸಂವಿಧಾನ ಪರ ಮನಸ್ಸಿರುವ ಎಲ್ಲರೂ ಸೇರಿ ಒಟ್ಟಿಗೆ ಎದುರಿಸಬೇಕು ಎಂದು ಚಿಂತಕ ಅಬ್ದುಲ್ ಸಮದ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದಲ್ಲಿ ಜನಪರ ಸಂಘಟನೆಗಳು ಆಯೋಜಿಸಿದ್ದ, “ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಬೆಳೆಯುತ್ತಿರುವ ಕೋಮುದ್ವೇಷ” ವಿಷಯದ ಕುರಿತು ನಡೆದ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ, ಜಿಲ್ಲೆಯಲ್ಲಿ ಮಲೆನಾಡಿನ ಪ್ರದೇಶಗಳಾದ ಸಕಲೇಶಪುರ ಮತ್ತು ಬೇಲೂರು ತಾಲ್ಲೂಕುಗಳಲ್ಲಿಕೋಮುವಾದಿಗಳ ಕೆಲಸ ಹೆಚ್ಚಾಗಿದ್ದು ಇದರಿಂದ ಎಲ್ಲೆಡೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬೇಲೂರಿನಲ್ಲಿ ಕೋಮುಸಾಮರಸ್ಯಕ್ಕೆ ತನ್ನದೇ ಆದ ಇತಿಹಾಸವಿದ್ದು ಚನ್ನಕೇಶವಸ್ವಾಮಿ ಜಾತ್ರೆಯಲ್ಲಿ ತೇರನ್ನು ಎಳೆಯುವ ಮುನ್ನ ಮುಸ್ಮಾನ್ ಧರ್ಮಗುರುಗಳು ಹೋಗಿ ಪ್ರಾರ್ಥನೆ ಸಲ್ಲಿಸುವ ಆಚರಣೆ ತಲೆತಲಾಂತರಗಳಿಂದ ಆಚರಣೆಯಲ್ಲಿದೆ ಈಗ ಕೋಮುಶಕ್ತಿಗಳು ಅದನ್ನು ತಡೆಯುವ ಕೆಲಸ ಮಾಡುತ್ತರುವುದು ಆತಂಕದ ಸಂಗತಿಯಾಗಿದೆ ಎಂದರು.
ಬಿ.ಕೆ.ಮಂಜುನಾಥ್ ಮಂಜುನಾಥ್ ಮಾತನಾಡಿ, ಅಲ್ಪ ಸಂಖ್ಯಾತರ ಪರವಾಗಿಎಲ್ಲಾ ಜಾತ್ಯಾತೀತ ಶಕ್ತಿಗಳು ಒಟ್ಟಾಗಿ ನಿಲ್ಲಬೇಕು. ಎಂದಿನಂತೆ ಅಲಗಪ ಸಂಖ್ಯಾತರಿಗೂ ಜಾತ್ರೆ, ಉತ್ಸವಗಳಲ್ಲಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು. ಹಾಸನದ ಹಾಸನಾಂಬ ದೇವಸ್ಥಾನದ ಬಾಗಿಲನ್ನು ತರರೆಯಲು ಮುಸ್ಲಿಂ ಧರ್ಮಗುರುಗಳು ಬಂದು ಪ್ರಾರ್ಥನೆ ಸಲ್ಲಿಸುವ ಸೌಹಾರ್ದ ಪರಂಪರೆ ಇದೆ ಎಂದರು.
ಇದನ್ನೂ ಓದಿ : ಹಾಸನಕ್ಕೂ ಕಾಲಿಟ್ಟ ವ್ಯಾಪಾರ ನಿರ್ಬಂದ ವಿವಾದ
ಹೋರಾಟಗಾರ ಸೋಮಶೇಖರ್ ಮಾತನಾಡಿ, ಈ ಅಲ್ಪಸಂಖ್ಯಾರನ್ನು ಕೇಂದ್ರೀಕರಿಸಿ ದಾಳಿ ದಬ್ಬಾಳಿಕೆಗಳನ್ನು ನೇಡೆಸಲಾಗುತ್ತಿದೆ, ಮುಂದೆ ದಲಿತರನ್ನು ಕೇಂದ್ರೀಕರಿಸಲಾಗುತ್ತದೆ. ಇವರಿಬ್ಬರನ್ನು ಮುಗಿಸಿದ ಮೇಲೆ ನೇರವಾಗಿ ಸಂವಿಧಾನದ ಮೇಲೆನ ದಾಳಿ ಆರಂಬವಾಗುತ್ತದೆ. ವ್ಯಾಪಾರ ಮಾಡಿ ಬದುಕುಸಾಗುರುತ್ತಿದ್ದ ಬಡ ಮುಸ್ಲಿಮರನ್ನ ಉತ್ಸವಗಳಲ್ಲಿವ್ಯಾಪಾರ ಮಾಡಬೇಡಿ ಎಂದರೆ ಅವರು ಎಲ್ಲಿಗೆ ಹೋಗಬೇಕು, ಬದುಕನ್ನು ಹೇಗೆ ನಡೆಸಬೇಕು ಎಂದರು.
ಹಿರಿಯ ಪತ್ರಕರ್ತರಾದ ಆರ್.ಪಿ.ವೆಂಕಟೇಶ್ ಮೂರ್ತಿ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲೂ ಕೋಮುವಾದಿಗಳು ತಮ್ಮ ಕರಾಳ ಹಸ್ತವನ್ನು ಚಾಚುತ್ತಿವೆ. ಪತ್ರಿಕೋದ್ಯಮ, ಶಿಕ್ಷಣ, ರಕ್ಷಣಾ ಇಲಾಖೆಗಳಲ್ಲೂ ಕೋಮುವಾದಿಗಳು ಅಲ್ಪಸಂಖ್ಯಾತರ ಬಗ್ಗೆ ಭಯ ಹುಟ್ಟಿಸಿ ಕೋಮು ದೃವೀಕರಣ ಮಾಡಲು ಪ್ರಯತ್ನಿಸಿ ಅದರಿಂದ ರಾಜಕೀಯ ಲಾಭ ಪಡೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಗಳನ್ನು ಬಿತ್ತಲಾಗುತ್ತಿದೆ, ಇದರಿಂದಲೂ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ ಎಂದರು.
ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮಾತನಾಡಿ, ಗಾಂಧಿ, ಅಂಬೇಡ್ಕರ್, ಬುದ್ದ, ಕಬೀರ್, ಶಿಶುನಾಳ ಶರೀಫರು ಈ ನಾಡಿನಲ್ಲಿ ಹುಟ್ಟಿ ಜಗತ್ತಿದೆ ಬೆಳಕಾದವರು. ಆದರೆ, ಅದೇ ನಾಡಿನಲ್ಲಿ ಶಾಂತಿ, ಸೌಹಾರ್ದತೆ, ಕೋಮು ಸಾಮರಸ್ಯ ಕದಡುವ ವ್ಯವಸ್ಥಿತ ಕೆಲಸ ನಡೆಯುತ್ತಿದೆ. ಇತಿಹಾಸವನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. 2014 ರ ನಂತರದ ರಾಜಕೀಯ ಬೆಳವಣಿಗೆಗಳು ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರ ನಡುವೆ ಆತಂಕ ಸೃಷ್ಟಿಸಲಾಗುತ್ತಿದೆ. ಸಿಎಎ, ಎನ್.ಆರ್.ಸಿ, ಎನ್.ಪಿ.ಆರ್, ಜಾರಿಗೆ ಮುಂದಾಗಿದ್ದು, ಜಮ್ಮೂ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ನ್ನು ರದ್ದುಗೊಳಿಸಿದ್ದು, ಇತ್ತೀಚಿನ ಹಿಜಾಬ್ ಪ್ರಕರಣ, ಕಾಶ್ಮೀರಿ ಫೈಲ್ಸ್ ಸಿನೆಮಾ ಇವೆಲ್ಲವೂ ಸಂವಿಧಾನದ ಆಶಯಗಳಿಗ್ಗೆ ತಿಲಾಂಜಲಿ ಇಡುವ ಬೆಳವಣಿಗೆಗಳಾಗಿವೆ. ಈ ನಡುವರ ಕರಾವಳಿಯಿಂದ ಆರಂಭವಾಗಿ ಹಾಸನದ ಬೇಲೂರಿಗೂ ತಲುಪಿರುವ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಕೊಡುವುದಿಲ್ಲ ಎಂಬ ಪ್ರಕರಣಗಳು ಕೇವಲ ಅಲ್ಪಸಂಖ್ಯಾತರ ವಿರುದ್ದವಾಗಿ ಅಲ್ಲದೆ ಇವು ನೇರವಾಗಿ ಸಂವಿಧಾನ ವಿರೋಧಿಯಾಗಿವೆ ಎಂದರು.
ಮತ್ತೊಂದು ಕಡೆ ಈ ದೇಶದ ಎಲ್ಲಾ ಸಮಸ್ಯೆಗಳಿಗೂ ಅಲ್ಪಸಂಖ್ಯಾತರೇ ಕಾರಣ ಎನ್ನುವಂತರ ಬಿಂಬಿಸಲಾಗುತ್ತಿದ್ದು ಜನಸಾಮಾನ್ಯರ ಬದುಕಿನ ಪ್ರಶ್ನೆ, ಬೆಲೆಏರಿಕೆ, ಉದ್ಯೋಗ, ಶಿಕ್ಷಣ, ಆರೋಗ್ಯದ ಪ್ರಶ್ನೆಗಳನ್ನು ಹಿಂದಕ್ಕೆ ಸರಿಸಲಾಗುತ್ತಿದೆ. ನಾಗರೀಕತೆ ಬೆಳೆದಂತೆ ಶಾಂತಿ ಸೌಹಾರ್ದತೆ ಹೆಚ್ಚಾಗಬೇಕ. ಆದರೆ, ಇದಕ್ಕೆ ತದ್ವಿರುದ್ದವಾದ ಬೆಳವಣಿಗೆಗಳು ನಡೆಯುತ್ತಿವೆ. ಆರ್.ಎಸ್.ಎಸ್ ಸ್ಥಾಪನೆಯಾಗಿ ನೂರು ವರ್ಷಗಳಗುತ್ತಿರುವ ಹಿನ್ನೆಲೆಯಲ್ಲಿ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ. ಇದಕ್ಕೆ ತದ್ವಿರುದ್ದವಾಗಿ ಭಾರತದ ಸಂವಿಧಾನ ರಚನಾ ಸಭೆಯಲ್ಲಿ ಈ ಪ್ರಶ್ನೆಗಳಿಗೆ ಸ್ವತಃ ಡಾ.ಬಿ.ಆರ್.ಅಂಬೇಡ್ಕರ್ ರವರೇ ಉತ್ತರಿಸುತ್ತಾ ಭಾರತ ಯಾವುದೇ ಒಂದು ಮತದರ್ಮದ ಆಡಳಿತಕ್ಕೆ ಒಳಪಟ್ಟ ದೇಶವಲ್ಲ ಎಂದು ಘೋಷಿಸಿದ್ದಾರೆ ಎಂಬುದನ್ನು ನಾವು ಅರಿಯಬೇಕು ಎಂದು ಧರ್ಮೇಶ್ ಹೇಳಿದರು.
ದುಂದು ಮೇಜಿನ ಸಭೆಯಯಲ್ಲಿ ಈ ಕೆಳಗಿನಂತೆ ತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತು
1. ಸಮಾನ ಮನಸ್ಕರೆಲ್ಲರೂ ಸೇರಿ ಒಂದು ವಿಶಾಲ ವೇದಿಕೆ ರಚಿಸಿಕೊಳ್ಳಬೇಕು. ಜನಪರ, ಜಾತ್ಯಾತೀತ ಮತ್ತು ಸಂವಿಧಾನ ಪರ ಸಂಘಟನೆಗಳು, ಪಕ್ಷಗಳು ಮತ್ತು ವ್ಯಕ್ತಿಗಳನ್ನು ಒಳಗೊಳ್ಳುವಂತೆ ಒತ್ತಾಯಿಸಬೇಕು.
2. ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
3. ಬೇಲೂರಿಗೆ ಹೋಗಿ ಪರಿಸ್ಥಿತಿ ತಿಳಿಗೊಳಿಸುವ ಹಾಗೂ ಅನ್ಯಾಯಕ್ಕೆ ಒಳಗಾಗಿರುವ ಪರವಾಗಿ ನಿಲ್ಲುವ ಕೆಲಸ ಮಾಡಬೇಕು.
4. ಜನರ ಬದುಕಿನ ನೈಜ ಪ್ರಶ್ನೆಗಳ ಕುರಿತು ಸಾರ್ವಜನಿಕವಾಗಿ ಹೆಚ್ಚು ಚರ್ಚೆ ನಡೆಸಬೇಕು ಹಾಗೂ ಜನರ ಸಮಸ್ಯಗಳ ವಿರುದ್ಧವಾಗಿ ಕಾರ್ಯಕ್ರಮ ರೂಪಿಸಬೇಕು.
4. ವಿದ್ಯಾರ್ಥಿ – ಯುವಜನರನ್ನು ತಲುಪಲು ಹೊಸ ರೀತಿಯ ಕಾರ್ಯಕ್ರಮಗಳನ್ನು ರೂಪಿಸಬೇಕು.
5. ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಬೇಕು.
6. ಕೋಮುವಾದಿ ರಾಜಕೀಯವನ್ನು ಜನಪರ ರಾಜಕಾರಣದಿಂದಲೇ ಎದುರಿಸಬೇಕು.
ಕಾರ್ಯಕ್ರಮದಲ್ಲಿ ಜನಪರ ಸಂಘಟನೆಗಳ ಮುಖಂಡರಾದ, ರಾಜಶೇಖರ್, ಕೆ.ಈರಪ್ಪ, ಮುಬಷೀರ್ ಅಹಮದ್, ಎಸ್.ಎನ್ ಮಲ್ಲಪ್ಪ, ಡಿವೈಎಫ್ಐನ ಪೃಥ್ವಿ ಎಂ.ಜಿ, ಕೃಷ್ಣದಾಸ್, ಪ್ರಾಂತರೈತ ಸಂಘದ ನವೀನ್ ಕುಮಾರ್, ಟಿ.ಆರ್ ವಿಜಯ್ ಕುಮಾರ್,
ರಾಜು ಗೊರೂರು, ಮಲೆನಾಡು ಮೆಹಬೂಬ್, ನಾಗರಾಜ ಹೆತ್ತೂರು, ಅಂಬೇಡ್ಕರ್ ಸೇನೆಯ ಕೆ. ಪ್ರಕಾಶ್ ಜಿ.ಓ ಮಹಂತಪ್ಪ, ಸಮೀರ್ ಖಾನ್, ಅನ್ಸರ್, ಎಸ್‌ಎಫ್‌ಐನ ರಮೇಶ್ ಸೇರಿದಂತೆ ಅನೇಕರಿದ್ದರು.
ಮುಸ್ಲಿಂ ಮೂಲಭೂತವಾಸಿಗಳ ಬಗ್ಗೆ ಏಕೆ ಧ್ವನಿ ಇಲ್ಲ.