ಬೊಲಿವಿಯಾ: ಶನಿವಾರದಂದು ಸೌತ್ ಅಮೆರಿಕಾದ ಬೊಲಿವಿಯಾದ ದಕ್ಷಿಣ ಭಾಗದಲ್ಲಿ ಎರಡು ಬಸ್‌ಗಳ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ 37 ಜನರು ಸಾವನ್ನಪ್ಪಿ, 30 ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಈ ಭೀಕರ ರಸ್ತೆ ಅಪಘಾತ ನೆನ್ನೆ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ 37 ಜನರು ಸಾವನ್ನಪ್ಪಿದ್ದಾರೆ ಮತ್ತು 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಎರಡು ಪ್ರಯಾಣಿಕ ಬಸ್‌ಗಳು ಮುಖಾಮುಖಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಉಯುನಿ ಮತ್ತು ಕೊಲ್ಚಾನಿ ನಡುವಿನ ಹೆದ್ದಾರಿಯಲ್ಲಿ ಬೆಳಗಿನ ಜಾವ ಬಸ್ಸೊಂದು ರಾಂಗ್ ಸೈಡ್‌ನ ಪಥಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದ್ದು, ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ಅಪಘಾತಗಳಲ್ಲಿ ಇದು ಒಂದಾಗಿದೆ.
ಇದನ್ನೂ ಓದಿ: ಧಾರವಾಡ| ರೈತರಿಗೆ ನಕಲಿ ಪೈಪ್ ನಾದಲ್ ಕೊಟ್ಟು ವಂಚನೆ
‘ಈ ಮಾರಕ ಅಪಘಾತದಲ್ಲಿ, 39 ಜನರು ಗಾಯಗೊಂಡು ಉಯುನಿ ನಗರದ ನಾಲ್ಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಆದರೆ 37 ಜನರು ಸಾವನ್ನಪ್ಪಿದ್ದಾರೆ’ ಎಂದು ಪೊಟೊಸಿ ಇಲಾಖೆಯ ಪೊಲೀಸ್ ಕಮಾಂಡ್‌ನ ವಕ್ತಾರರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಪಘಾತಕ್ಕೀಡಾದ ಬಸ್‌ಗಳಲ್ಲಿ ಒಂದು ವಾರಾಂತ್ಯದ ಒರುರೊ ಕಾರ್ನೀವಲ್ ನಡೆಯುತ್ತಿದ್ದ ಒರುರೊ ನಗರಕ್ಕೆ ಹೋಗುತ್ತಿತ್ತು. ಈ ಹಬ್ಬವು ಲ್ಯಾಟಿನ್ ಅಮೆರಿಕದ ಅತಿದೊಡ್ಡ ಹಬ್ಬಗಳಲ್ಲಿ ಒಂದಾಗಿದೆ ಮತ್ತು ಸಾವಿರಾರು ಜನರು ಇದರಲ್ಲಿ ಭಾಗವಹಿಸುತ್ತಾರೆ.
ಅಪಘಾತ ಸ್ಥಳದಲ್ಲಿ ಪೊಲೀಸರು ಇದ್ದು, ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದೆ. ರಸ್ತೆಯಲ್ಲಿ ಉರುಳಿ ಬಿದ್ದ ಬಸ್ ಅನ್ನು ಕ್ರೇನ್ ಸಹಾಯದಿಂದ ಉರುಳಿಸಲಾಗುತ್ತಿದೆ. ಪೊಲೀಸ್ ಅಧಿಕಾರಿಗಳು ಬಸ್ಸಿನ ಅವಶೇಷಗಳಿಂದ ಶವಗಳನ್ನು ಹೊರತೆಗೆದು ಕಂಬಳಿಯಿಂದ ಮುಚ್ಚುತ್ತಿರುವುದು ಕಂಡುಬಂದಿತು. ಸಂತ್ರಸ್ತರನ್ನು ಗುರುತಿಸಲು ಮತ್ತು ಗಾಯಾಳುಗಳಿಗೆ ನೆರವು ನೀಡಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಅಪಘಾತಕ್ಕೆ ಅತಿ ವೇಗವೇ ಕಾರಣ?
ಬೊಲಿವಿಯಾ ಸರ್ಕಾರದ ಸಚಿವಾಲಯ ಹೊರಡಿಸಿದ ಹೇಳಿಕೆಯ ಪ್ರಕಾರ, ಆರಂಭಿಕ ತನಿಖೆಗಳು ಅಪಘಾತಕ್ಕೆ ಅತಿ ವೇಗವೇ ಪ್ರಮುಖ ಕಾರಣವಾಗಿರಬಹುದು ಎಂದು ಸೂಚಿಸುತ್ತವೆ. ಬಸ್ಸೊಂದು ವಿರುದ್ಧ ಲೇನ್‌ಗೆ ಹೋಗಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಅಪಘಾತದ ನಿಜವಾದ ಕಾರಣ ತಿಳಿದುಕೊಂಡು ಬಲಿಪಶುಗಳ ಕುಟುಂಬಗಳಿಗೆ ಸಹಾಯ ಒದಗಿಸಲು ಅಧಿಕಾರಿಗಳು ಈ ಬಗ್ಗೆ ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಇದನ್ನೂ ನೋಡಿ: ಫೆಬ್ರವರಿ 28| ರಾಷ್ಟ್ರೀಯ ವಿಜ್ಞಾನ ದಿನಾಚರಣೆ |ಸರ್ ಸಿ.ವಿ.ರಾಮನ್Janashakthi Media