ಪಾಟ್ನಾ: ಯೂರ್ನಿಫಾರ್ಮ್ ನಲ್ಲಿದ್ದ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡುವಂತೆ ರಾಷ್ಟ್ರೀಯ ಜನತಾದಳ (ಆರ್ ಜೆಡಿ) ನಾಯಕ ತೇಜ್ ಪ್ರತಾಪ್ ಯಾದವ್ ಆದೇಶಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
ಪಾಟ್ನಾದಲ್ಲಿನ ತನ್ನ ನಿವಾಸದ ಬಳಿ ಹೋಳಿ ಸಂಭ್ರಮಾಚರಣೆ ವೇಳೆಯಲ್ಲಿ ಕರ್ತವ್ಯದಲ್ಲಿ ನಿರತರಾಗಿದ್ದ ಪೊಲೀಸ್ ಅಧಿಕಾರಿಗೆ ತೇಜ್ ಪ್ರತಾಪ್ ಡ್ಯಾನ್ಸ್ ಮಾಡುವಂತೆ ಹೇಳಿದ್ದಾರೆ.
ಡ್ಯಾನ್ಸ್ ಮಾಡಲು ನಿರಾಕರಿಸಿದರೆ ಸಸ್ಪೆಂಡ್ ಆಗ್ತೀಯಾ ಎಂದು ಹೇಳುವುದು ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಇಬ್ಬರು ಶಾಸಕರ ವಿರುದ್ದ ಬಿಜೆಪಿ ಕ್ರಮ
ಪಕ್ಷದ ಕಾರ್ಯಕರ್ತರೊಂದಿಗೆ ಹೋಳಿ ಹಬ್ಬ ಆಚರಿಸುತ್ತಿದ್ದ ಯಾದವ್, ಗೀತೆಯೊಂದನ್ನು ಡ್ಯಾನ್ಸ್ ಮಾಡುವಂತೆ ಪೊಲೀಸ್ ಅಧಿಕಾರಿಗೆ ನಿರ್ದೇಶಿಸುವುದು ವಿಡಿಯೋದಲ್ಲಿದೆ. ಯಾದವ್ ನಡೆಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಟೀಕಿಸುತ್ತಿದ್ದರೆ ಮತ್ತೆ ಕೆಲವರು ಹೋಳಿಯಲ್ಲಿ ಇದು ಚಿಕ್ಕ ತಮಾಷೆ ಅಷ್ಟೇ ಎಂದಿದ್ದಾರೆ.
ನಾನು ಸಾಂಗ್ ಹೇಳ್ತಿನಿ, ನೀನು ಡ್ಯಾನ್ಸ್ ಮಾಡು. ಇಲ್ಲದಿದ್ದರೆ ಸಸ್ಪೆಂಡ್ ಆಗ್ತೀಯಾ. ಕೆಟ್ಟದಾಗಿ ಯೋಚಿಸಬೇಡ. ಇದು ಹೋಳಿ ಎಂದು ತೇಜ್ ಪ್ರತಾಪ್ ಯಾದವ್ ಪೊಲೀಸ್ ಅಧಿಕಾರಿಗೆ ಹೇಳ್ತಾರೆ. ಈ ಘಟನೆಗೆ ಮೈತ್ರಿ ಪಾಲುದಾರ ಪಕ್ಷ ಕಾಂಗ್ರೆಸ್ ಸೇರಿದಂತೆ ಜೆಡಿಯು, ಬಿಜೆಪಿ ತೀವ್ರವಾಗಿ ಟೀಕಿಸಿವೆ. ಜಂಗಲ್ ರಾಜ್ ಕೊನೆಯಾಗಿದೆ. ಆದರೆ, ಡ್ಯಾನ್ಸ್ ಮಾಡದಿದ್ದರೆ ಸಸ್ಪೆಂಡ್ ಮಾಡುವುದಾಗಿ ಲಾಲು ಪುತ್ರ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ್ದಾರೆ.
ಬಿಹಾರ ಈಗ ಬದಲಾಗಿದೆ. ಬಿಹಾರದಲ್ಲಿ ಬದಲಾದ ಪರಿಸರದಲ್ಲಿ ಇಂತಹ ನಡವಳಿಕೆಗಳು ನಡೆಯುವುದಿಲ್ಲ ಎಂಬುದನ್ನು ತೇಜಸ್ವಿ ಯಾದವ್, ತೇಜ್ ಪ್ರತಾಪ್ ಯಾದವ್ ಅಥವಾ ಅಥವಾ ಲಾಲು ಪ್ರಸಾದ್ ಯಾದವ್ ಕುಟುಂಬದಲ್ಲಿ ಯಾವುದೇ ಸದಸ್ಯರು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಜೆಡಿಯು ವಕ್ತಾರ ರಾಜೀವ್ ರಂಜನ್ ಪ್ರಸಾದ್ ಹೇಳಿದ್ದಾರೆ.
ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಆರ್ ಜೆಡಿಯ ಸಂಪ್ರದಾಯವಾಗಿದೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಲ್ಲ ಆರೋಪಿಸಿದ್ದಾರೆ. ಇದು ದುರಾದೃಷ್ಟಕರ ಘಟನೆಯಾಗಿದೆ. ತೇಜ್ ಪ್ರತಾಪ್ ಹೇಳಿರುವುದನ್ನು ಖಂಡಿಸುತ್ತೇನೆ. ಸಸ್ಪೆಂಡ್ ಮಾಡುವ ಅಧಿಕಾರ ನನಗಿಲ್ಲ ಎಂಬುದನ್ನು ಅವರು ಅರಿತಿಲ್ಲ ಎಂದು ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ಹೇಳಿದ್ದಾರೆ.
ಇದನ್ನೂ ನೋಡಿ: Karnataka Legislative Assembly Live Day 10 | ವಿಧಾನಸಭೆ ಬಜೆಟ್ ಅಧಿವೇಶನದ ನೇರ ಪ್ರಸಾರ ದಿನ 10