ಕ್ವಿಂಟಾಲ್‌ಗೆ ₹1,000 ಬೆಲೆ ಇಳಿಕೆ; ₹4,000 ಬೆಂಬಲ ಬೆಲೆಗೆ ರೈತರ ಆಗ್ರಹ
ತೆಲಂಗಾಣ: ರಾತ್ರೋರಾತ್ರಿ ಭತ್ತದ ಬೆಲೆ ಕುಸಿತಗೊಂಡಿದ್ದರಿಂದ ಆಕ್ರೋಶಗೊಂಡ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದ ಘಟನೆ ತೆಲಂಗಾಣದ ಸೂರ್ಯಾಪೇಟೆ ಜಿಲ್ಲೆಯ ತಿರುಮಲಗಿರಿ ಕೃಷಿ ಮಾರುಕಟ್ಟೆ ಬಳಿ ನಡೆದಿದೆ. ರಾತ್ರೋರಾತ್ರಿ ರಾತ್ರೋರಾತ್ರಿ
ಕಳೆದ ಎರಡು ದಿನಗಳ ಹಿಂದೆ ಕ್ವಿಂಟಾಲ್‌ಗೆ ₹3,600 ಇದ್ದ ಭತ್ತದ ಬೆಲೆಯನ್ನು ಸೋಮವಾರ ₹2,500ಕ್ಕೆ ಇಳಿಸಿ ಖರೀದಿಸಲು ವ್ಯಾಪಾರಿಗಳು ಮುಂದಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತರು ತಿರುಮಲಗಿರಿ ಕೃಷಿ ಮಾರುಕಟ್ಟೆಯ ಎದುರಿನ ಮುಖ್ಯ ರಸ್ತೆಯಲ್ಲಿ ಕುಳಿತು ರಸ್ತೆ ತಡೆ ನಡೆಸಿದರು. ವ್ಯಾಪಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯಿಂದ ಮುಖ್ಯ ರಸ್ತೆಯಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತು ಸಂಚಾರ ಅಸ್ತವ್ಯಸ್ತಗೊಂಡಿತು.
ವ್ಯಾಪಾರಿಗಳ ವಿರುದ್ಧ ಸಿಂಡಿಕೇಟ್ ಆರೋಪ
ಕಷ್ಟಪಟ್ಟು ಬೆಳೆ ಬೆಳೆದು ಮಾರುಕಟ್ಟೆಗೆ ತಂದರೆ ವ್ಯಾಪಾರಿಗಳು ಒಗ್ಗಟ್ಟಾಗಿ ಬೆಲೆ ಕಡಿಮೆ ಮಾಡಿ ರೈತರನ್ನು ಶೋಷಿಸುತ್ತಿದ್ದಾರೆ ಎಂದು ಪ್ರತಿಭಟನಾನಿರತ ರೈತರು ಆರೋಪಿಸಿದರು. ಕೃಷಿ ವೆಚ್ಚಗಳು ನಿರಂತರವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಏಕಾಏಕಿ ಬೆಲೆ ಇಳಿಸಿರುವುದು ರೈತರ ಆದಾಯಕ್ಕೆ ಹೊಡೆತ ನೀಡಿದೆ. ಭತ್ತಕ್ಕೆ ಕ್ವಿಂಟಾಲ್‌ಗೆ ₹4,000 ಬೆಂಬಲ ಬೆಲೆ ನಿಗದಿಪಡಿಸಿ, ಅದಕ್ಕೆ ಅನುಗುಣವಾಗಿ ಖರೀದಿ ನಡೆಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯ ಮಾಹಿತಿ ತಿಳಿದು ಪೊಲೀಸರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೈತರೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸಿದರು. ಆದರೆ, ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು ಮತ್ತು ಮಾರುಕಟ್ಟೆ ಸಮಿತಿ ಅಧಿಕಾರಿಗಳು ರೈತರಿಗೆ ನ್ಯಾಯಯುತ ಬೆಲೆ ದೊರೆಯುವಂತೆ ಸ್ಪಷ್ಟ ಭರವಸೆ ನೀಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ರೈತರು ಪಟ್ಟುಹಿಡಿದರು.
ಇದನ್ನೂ ಓದಿ : ಕಬ್ಬು ಬೆಳೆಗಾರರ ಹೋರಾಟ ತೀವ್ರ: ಟನ್‌ಗೆ ₹5,500 ಬೆಲೆಗೆ ಆಗ್ರಹ, ರಾಜ್ಯಾದ್ಯಂತ ಬಂದ್ ಎಚ್ಚರಿಕೆ
ರೈತರ ಪ್ರತಿಭಟನೆಗೆ ರೈತ ಸಂಘದ ಮುಖಂಡ ಕದಾರಿ ಲಿಂಗಯ್ಯ ಬೆಂಬಲ ವ್ಯಕ್ತಪಡಿಸಿದರು. ರೈತರು ಬೆಳೆದ ಭತ್ತಕ್ಕೆ ಕ್ವಿಂಟಾಲ್‌ಗೆ ₹3,800ರಿಂದ ₹3,900 ನೀಡಬೇಕು ಎಂದು ಅವರು ಆಗ್ರಹಿಸಿದರು.
ಭತ್ತ ಖರೀದಿ ಋತು ಆರಂಭವಾಗಿ ಸುಮಾರು ಒಂದು ತಿಂಗಳು ಕಳೆದಿದ್ದರೂ, ಸರ್ಕಾರದ ಐಕೆಪಿ ಖರೀದಿ ಕೇಂದ್ರಗಳಲ್ಲಿ ಭತ್ತ ಖರೀದಿ ಆರಂಭಿಸದಿರುವುದು ಖಂಡನೀಯ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಖರೀದಿ ಕೇಂದ್ರಗಳಲ್ಲಿ ರೈತರ ಭತ್ತವನ್ನು ನ್ಯಾಯಯುತ ಬೆಲೆಗೆ ಖರೀದಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮಂಡಲ ಕಾರ್ಯದರ್ಶಿ ಕದಾರಿ ಲಿಂಗಯ್ಯ, ಚಿತ್ತಲೂರಿ ಸೋಮಯ್ಯ ಹಾಗೂ ರೈತರಾದ ನರಸಯ್ಯ, ಮಲ್ಲಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇದನ್ನೂ ನೋಡಿ : ಸೌಜನ್ಯ ಪ್ರಕರಣದಲ್ಲಿ ಸಾಕ್ಷಿಗಳ ಕೊಲೆ! ಅಡ್ವೊಕೇಟ್ ಬಾಲನ್ ಆರೋಪ Janashakthi Media
