ಸಿಇಟಿ ಕ್ರೀಡಾ ಕೋಟಾ ನಿಯಮಗಳ ಪರಿಷ್ಕರಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಗುರುವಾರ ಆಗಸ್ಟ್-31 ರಂದು 2024-2025ರ ಶೈಕ್ಷಣಿಕ ವರ್ಷಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೂಲಕ ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶಕ್ಕಾಗಿ ಕ್ರೀಡಾ ಕೋಟಾ ನಿಯಮಗಳನ್ನು ಪರಿಷ್ಕರಿಸಿದೆ.

ಹೊಸ ನಿಯಮಗಳ ಪ್ರಕಾರ, ಅಧಿಕೃತವಾಗಿ ರಾಜ್ಯ ಅಥವಾ ರಾಷ್ಟ್ರವನ್ನು ಪ್ರತಿನಿಧಿಸುವ ವಿದ್ಯಾರ್ಥಿಗಳನ್ನು ಮಾತ್ರ ಕೋಟಾದಲ್ಲಿ ಪರಿಗಣಿಸಲಾಗುತ್ತದೆ. ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗುವ ವರ್ಷವೂ ಸೇರಿದಂತೆ ಸತತ ಮೂರು ವರ್ಷಗಳಲ್ಲಿ ಭಾಗವಹಿಸಿರಬೇಕು ಎಂದು ಅದು ಉಲ್ಲೇಖಿಸುತ್ತದೆ.

ಇದನ್ನೂ ಓದಿ:ಇಂದು, ನಾಳೆ ಸಿಇಟಿ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿ

ಇದಕ್ಕೂ ಮುನ್ನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (ಡಿವೈಇಎಸ್) ಪರಿಷ್ಕೃತ ಕೋಟಾದ ವರದಿಯನ್ನು ಸಲ್ಲಿಸಿದ್ದು, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಇಲಾಖೆ ಅಧಿಕಾರಿಗಳು ಮತ್ತು ಇತರ ಪಾಲುದಾರರೊಂದಿಗೆ ನಡೆದ ಸಭೆಯಲ್ಲಿ ಇದನ್ನು ಅಂತಿಮಗೊಳಿಸಲಾಗಿದೆ. ಪ್ರಸ್ತುತ, ಸಿಇಟಿ ಪರೀಕ್ಷೆಗೆ ಕ್ರೀಡಾ ಕೋಟಾವನ್ನು 8-12 ನೇ ತರಗತಿಯಿಂದ ಪರಿಗಣಿಸಲಾಗುತ್ತದೆ. ಸಭೆಗೂ ಮುನ್ನ ಕೇಂದ್ರದಲ್ಲಿ ಸಿಇಟಿ ಕೌನ್ಸೆಲಿಂಗ್ಗೆ ಬಂದಿದ್ದ ವಿದ್ಯಾರ್ಥಿಗಳೊಂದಿಗೆ ಸುಧಾಕರ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಸಂವಾದ ನಡೆಸಿದರು.

ಮುಂದಿನ ಶೈಕ್ಷಣಿಕ ವರ್ಷದಿಂದ ಕೋರ್ಸುಗಳು ಮತ್ತು ಕಾಲೇಜುಗಳ ಆಯ್ಕೆಗೆ ಕೌನ್ಸೆಲಿಂಗ್ ಅನ್ನು ಕಾಲೇಜುಗಳಲ್ಲಿ ನಡೆಸಬೇಕು ಎಂದು ಸೂಚಿಸಲಾಗಿದೆ. ಕೆಇಎ ಕಟ್ಟಡ ನವೀಕರಣಕ್ಕೆ 33 ಕೋಟಿ ರೂ.ವೆಚ್ಚಕ್ಕೆ ಸಚಿವರು ಅನುಮೋದನೆ ನೀಡಿದರು.

Donate Janashakthi Media

Leave a Reply

Your email address will not be published. Required fields are marked *