ತುಮಕೂರು: ಸಮಾಜದಲ್ಲಿ ದೇಶದಲ್ಲಿಎಲ್ಲರಿಗೂ ಸಾರ್ವತ್ರಿಕವಾದಂತ ಸಾಮಾಜಿಕ ಭದ್ರತೆಯನ್ನು ನೀಡುವುದು ಸರ್ಕಾರಗಳ ಹೊಣೆ ಸಾಮಾಜಿಕ ಭದ್ರತೆ ನೀಡಬೇಕಾದ ಸರ್ಕಾರಗಳು ಸಾಮಾಜಿಕ ಭದ್ರತೆಯನ್ನು ಕಳೆಚಿಹಾಕತ್ತ ಬಂಡವಾಳಗಾರಿಗೆ ಲಾಭ ಮಾಡಲು ಹೊರಟಿದ್ದಾರೆಂದು ಹಿರಿಯ ಕಾರ್ಮಿಕ ಮುಖಂಡ ವಿಜೆಕೆ ನಾಯರ್ ಆರೋಪಿಸಿದರು.
ತುಮಕೂರು ನಗರದದ ಬಾಲ ಭವನದಲ್ಲಿ ಸಿಐಟಿಯು ತುಮಕೂರು ಜಿಲ್ಲಾ ಸಮಿತಿಯು ” ಬಾಲನಂದ ಹಾಗೂ ಸೂರ್ಯನಾರಾಯಣ ರಾವ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಮಾಜಿಕ ಭದ್ರತೆ ಹಾಗೂ ಅಸಂಘಟಿತ ಕಾರ್ಮಿಕರ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಬದುಕಲು ಯೋಗ್ಯವಾದಂತಹ ಕೂಲಿ ಸಿಗಬೇಕಿದೆ. ಅನಾರೋಗ್ಯದ ಸಂದರ್ಭದಲ್ಲಿಎಲ್ಲರಿಗೂ ಆರೋಗ್ಯದ ರಕ್ಷಣೆಯನ್ನು ನೀಡುವ ಹೊಣೆ ಸರ್ಕಾರಗಳದ್ದು. ಕೇರಳದ ಎಡರಂಗ ಸರ್ಕಾರದ ಮಾದರಿಯ ಅಸಂಘಟಿತ ಕಾರ್ಮಿಕರ ಕಲ್ಯಾಣ ಯೋಜನೆಗಳನ್ನು ರೂಪಿಸುವ ಮೂಲಕ ಸಮಾಜದಲ್ಲಿಎಲ್ಲರಿಗೂ ಸಾಮಾಜಿಕ ಭದ್ರತೆಯನ್ನು ಸರ್ಕಾರ ನೀಡುತ್ತಿದೆ. ಇಂತಹ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಬೇಕು ಎಂದರು.
ಸ್ವತಂತ್ರ ಪೂರ್ವದಲ್ಲಿ ಹಾಗೂ ಮೊದಲನೇ ಜಾಗತಿಕ ಮಹಾಯುದ್ಧದ ಸಂದರ್ಭದಲ್ಲಿ ಸಾಮಾಜಿಕ ಭದ್ರತೆಯನ್ನು ನೀಡುವಂತಹ ಕಾರ್ಮಿಕ ಕಾಯ್ದೆಗಳು ರೂಪಿತಗೊಂಡಿದ್ದನ್ನು ನೆನಪಿಸಿದ ಅವರು, ಸ್ವತಂತ್ರ ನಂತರದಲ್ಲಿ ಕಾರ್ಮಿಕರ ಸಾಮಾಜಿಕ ಭದ್ರತೆಯನ್ನು ಹೆಚ್ಚಿಸುವ ಬದಲು ಅದಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ ಚಲನೆ ಆರಂಭವಾಗಿದೆ ಎಂದು ಆರೋಪಿಸಿ ಈ ಸಂಬಂಧ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆಯನ್ನು ಮತ್ತು ಪಾತ್ರವನ್ನು ಪ್ರಶಂಸಿಸಿದರು. ಸಾರ್ವತ್ರಿಕ
ಸಿಐಟಿಯುನ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿಸಿಂದರಂ ಮುಖ್ಯ ಅತಿಥಿಯಾಗಿ ಮಾತನಾಡಿ, ಬಡವರು ತಮ್ಮ ದುಡಿಮೆಯ ಹೆಚ್ಚಿನ ಪಾಲನ್ನು ತೆರಿಗೆಯಾಗಿ ನೀಡುತ್ತಾರೆ ಆದರೆ ಸರ್ಕಾರಗಳು ಶ್ರೀಮಂತರಿಗೆ ಶ್ರೀಮಂತರನ್ನಾಗಿಸುತ್ತಿರುವಂತಹ ಪ ನೀತಿಗಳನ್ನು ರೂಪಿಸುತ್ತಿವೆ. ಸಾಮಾಜಿಕ ಭದ್ರತೆಯನ್ನು ರೂಪಿಸಬೇಕಾದ ಸರ್ಕಾರದ ನೀತಿಗಳು ಸಾಮಾಜಿಕ ಭದ್ರತೆಯನ್ನು ಕಿತ್ತುಕೊಳ್ಳುತ್ತಿವೆ ಎಂದು ಆಕ್ರೋಶ ಹೊರಹಾಕಿದರು. ಸಾರ್ವತ್ರಿಕ
ಇದನ್ನೂ ಓದಿ: ನೀಟ್ ಆಕಾಂಕ್ಷಿಯ ಮೇಲೆ ಅತ್ಯಾಚಾರ ಎಸಗಿ ಬ್ಯಾಕ್ ಮೇಲ್ ಮಾಡುತಿದ್ದ ಇಬ್ಬರು ಶಿಕ್ಷಕರ ಬಂಧನ
ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ರೂಪಿಸಿರುವ ಸಾಮಾಜಿಕ ಭದ್ರತೆಯಲ್ಲಿ ಜೀವ ವಿಮೆ ಮಾತ್ರ ನೀಡಲಾಗುತ್ತಿದ್ದು, ಸಾಮಾಜಿಕ ಭದ್ರತೆಯನ್ನು ಪಡೆಯಲು ಕಾರ್ಮಿಕರು ಸತ್ತು ಹೋಗಬೇಕಾದಂತಹ ಪರಿಸ್ಥಿತಿ ಇದೆ ಎಂದು ಅವರು ವಿಡಂಬನಾತ್ಮಕವಾಗಿ ಆರೋಪಿಸಿದರು. ಬೆಳವಣಿಗೆ ಎಂದರೆ ಅನೌಪಚಾರಿಕ ಆರ್ಥಿಕ ವ್ಯವಸ್ಥೆಯಿಂದ ಔಪಚಾರಿಕ ಆರ್ಥಿಕ ವ್ಯವಸ್ಥೆಗೆ ಹಾಗೂ ಉದ್ಯೋಗದ ಕಡೆಗೆ ಹೋಗುವುದಾಗಿರುತ್ತದೆ ಆದರೆ ಇಂದು ಸರ್ಕಾರದ ನೀತಿಗಳಿಂದಾಗಿ ಹೆಚ್ಚು ಹೆಚ್ಚು ಅನೌಪಚಾರಿಕ ಉದ್ಯೋಗಗಳು ಸೃಷ್ಟಿಯಾಗುತ್ತಿರುವುದು ವಿಪರ್ಯಾಸ ಹಾಗೂ ಅದು ಹಿಮ್ಮುಖ ಚಲನೆಯಾಗಿದೆ ಎಂದು ಆಪಾಸಿದರು. ಸಾರ್ವತ್ರಿಕ
ನಿವೃತ್ತ ಜಂಟಿ ನಿರ್ದೇಶಕ ಹಾಗೂ ಪ್ರಗತಿಪರ ಚಿಂತಕರಾದಂತ ಪ್ರೊಫೆಸರ್ ಕೆ ದೊರೆರಾಜ್, ಸುಫಿಯಾ ಕಾಲೇಜಿನ ಪ್ರಾಂಶುಪಾಲ ಡಾಕ್ಟರ್ ಎಸ್ ರಮೇಶ ಮಾತನಾಡಿದರು.ವಿಚಾರ ಸಂಕೀರ್ಣದ ಅಧ್ಯಕ್ಷತೆಯನ್ನು ಸಿಐಟಿನ ಜಿಲ್ಲಾಧ್ಯಕ್ಷ ಸೈಯ್ಯದ್ ಮುಜೀಬ್ ವಹಿಸಿದ್ದರು.
ಇದನ್ನೂ ನೋಡಿ: ಸಿದ್ದರಾಮಯ್ಯ ಸರ್ಕಾರ ವಕ್ಫ್ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಲು ಸೋತಿದ್ದು ಹೇಗೆ? Janashakthi Media