ಯುಜಿಸಿ ಕರಡು ನಿಯಮ ವಾಪಸ್ಸಿಗೆ ಬಿಜೆಪಿಯೇತರ ರಾಜ್ಯಗಳ ನಿರ್ಣಯ

ಬೆಂಗಳೂರು: ಕರ್ನಾಟಕ ಸರ್ಕಾರದ ನೇತೃತ್ವದಲ್ಲಿ ನಡೆದ ರಾಜ್ಯಗಳ ಉನ್ನತ ಶಿಕ್ಷಣ ಸಚಿವರ ಸಮಾವೇಶ 2025ರಲ್ಲಿ ಭಾಗಿಯಾದ ಕೇರಳ, ತಮಿಳುನಾಡು, ಝಾರ್ಖಂಡ್‌, ತೆಲಂಗಾಣ, ಹಿಮಾಚಲ ಪ್ರದೇಶ ರಾಜ್ಯಗಳು 15 ಅಂಶಗಳ ಜಂಟಿ ನಿರ್ಣಯ ತೆಗೆದುಕೊಂಡಿವೆ. ಯುಜಿಸಿ 

ವಿಶ್ವವಿದ್ಯಾನಿಲಯಗಳ ಕುಲಪತಿಗಳ ನೇಮಕದಲ್ಲಿ ರಾಜ್ಯ ಸರಕಾರದ್ದೇ ಪ್ರಮುಖ ಪಾತ್ರ ಇರಬೇಕು. ಆದ್ದರಿಂದ ಕುಲಪತಿಗಳ ನೇಮಕದಲ್ಲಿ ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸುವ ಯುಜಿಸಿಯ ಕರಡು ನಿಯಮಾವಳಿಯನ್ನು ವಾಪಸ್‌ ಪಡೆಯಬೇಕು. ಯುಜಿಸಿಯು ಇಂತಹ ನಿಯಮ ರಚಿಸು ವಾಗ ಸಹಕಾರಿ ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿಯಡಿ ರಾಜ್ಯ ಸರಕಾರಗಳ ಜತೆ ಸಹ ಯೋಗ, ಸಮಾಲೋಚನೆ ನಡೆಸಲೇಬೇಕು ಎಂದು ಕರ್ನಾಟಕ ಸೇರಿದಂತೆ ಆರು ರಾಜ್ಯಗಳು ನಿರ್ಣಯ ತೆಗೆದುಕೊಂಡಿವೆ. ಇದನ್ನು ಯುಜಿಸಿ ಮತ್ತು ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಲಿವೆ.  ಫೆ. 20ಕ್ಕೆ ಕೇರಳದಲ್ಲಿ ಇನ್ನೊಂದು ಸಭೆ ನಡೆಸಿ ಮುಂದಿನ ಹೆಜ್ಜೆಯ ಬಗ್ಗೆ ಚರ್ಚೆ ನಡೆಸಲು ಈ ರಾಜ್ಯಗಳು ತೀರ್ಮಾನಿಸಿವೆ. ಯುಜಿಸಿ 

ಇದನ್ನೂ ಓದಿ : ‘ಉಪ್ಪಿಟ್ಟು ಬೇಡ.. ಬಿರಿಯಾನಿ, ಚಿಕನ್ ಫ್ರೈ ಬೇಕು’: ಅಂಗನವಾಡಿ ಬಾಲಕನ ಬೇಡಿಕೆಗೆ ಸ್ಪಂದಿಸಿದ ಎಡರಂಗ ಸರ್ಕಾರ

ಸಮಾವೇಶದಲ್ಲಿ ಕರ್ನಾಟಕದ ನೇತೃತ್ವ ದಲ್ಲಿ ಬೆಂಗಳೂರಲ್ಲಿ ನಡೆದ ಸಭೆಯಲ್ಲಿ ಕೇರಳ, ತಮಿಳುನಾಡು, ಝಾರ್ಖಂಡ್‌, ತೆಲಂಗಾಣ, ಹಿಮಾಚಲ ಪ್ರದೇಶದ ಶಿಕ್ಷಣ ಸಚಿವರು ಭಾಗಿಯಾಗಿದ್ದರು. ಜೊತೆಗೆ ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಡಾಣ ಎಂ.ಸಿ. ಸುಧಾಕರ್‌, ತೆಲಂಗಾಣದ ಶ್ರೀಧರ್‌ಬಾಬು, ಹಿಮಾಚಲಪ್ರದೇಶದ ರೋಹಿತ್‌ ಠಾಕೂರ್‌, ಝಾರ್ಖಂಡ್‌ನ‌ ಸುದಿಯಾ ಕುಮಾರ್‌, ತಮಿಳುನಾಡಿನ ಡಾಣ ಗೋವಿ ಚೆಳಿಯನ್‌, ಕೇರಳದ ಉನ್ನತ ಶಿಕ್ಷಣ ಸಚಿವೆ ಡಾ. ಆರ್‌. ಬಿಂದು ಭಾಗವಹಿಸಿದ್ದರು. ಮಹಾರಾಷ್ಟ್ರದ ಉನ್ನತ ಶಿಕ್ಷಣ ಸಚಿವರು ವೀಡಿಯೋ ಕಾನ್ಫರೆನ್ಸ್‌ ಮೂಲಕ ಒಮ್ಮೆ ಸಂಪರ್ಕಕ್ಕೆ ಬಂದರೂ ಸಹ ಆ ಬಳಿಕ ಸಮಾವೇಶದಲ್ಲಿ ಭಾಗಿಯಾಗಿಲ್ಲ.

ಸಮಾವೇಶವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಉದ್ಘಾಟಿಸಿದರು. ಗೃಹಸಚಿವ  ಜಿ. ಪರಮೇಶ್ವರ್‌  ಪಾಲ್ಗೊಂಡಿದ್ದರು. ಯುಜಿಸಿ 

ಪ್ರಮುಖ ನಿರ್ಣಯಗಳು

1. ವಿಶ್ವವಿದ್ಯಾನಿಲಯಗಳಿಗೆ ಕುಲಪತಿಗಳನ್ನು ನೇಮಿಸಲು ರಾಜ್ಯಕ್ಕೆ ಅಧಿಕಾರ ನೀಡಬೇಕು

2. ರಾಜ್ಯಗಳ ನ್ಯಾಯಸಮ್ಮತ ಹಕ್ಕುಗಳನ್ನು ಹತ್ತಿಕ್ಕುತ್ತಿರುವ ಯುಜಿಸಿ ಕರಡು ನಿಯಮಗಳು

3. ಕುಲಪತಿ ನೇಮಕದ ಅರ್ಹತೆಗಳು, ಅವಧಿ ಮುಂತಾದವು ಮರುಪರಿಶೀಲಿಸಬೇಕು

4. ಸ್ನಾತಕ ಪದವಿ ಕೋರ್ಸುಗಳ ಪ್ರವೇಶಕ್ಕೆ ಪ್ರವೇಶ ಪರೀಕ್ಷೆ ಕಡ್ಡಾಯ ಕೈಬಿಡಬೇಕು

5. ಎನ್‌ಇಪಿ ಕಡ್ಡಾಯ ಜಾರಿಗೊಳಿಸದಿದ್ದರೆ ಶಿಕ್ಷಾರ್ಹ ಕ್ರಮ ಕೈಗೊಳ್ಳುವುದು ಸರ್ವಾಧಿಕಾರಿ ಧೋರಣೆ

 

ಇದನ್ನೂ ನೋಡಿಉನ್ನತ ಶಿಕ್ಷಣವನ್ನು ಕೇಂದ್ರೀಕರಣಗೊಳಿಸುವ, ಆರೆಸ್ಸೆಸ್ ಸಿದ್ಧಾಂತಕ್ಕೆ ಅವಕಾಶ ಕಲ್ಪಿಸುವ ಯುಜಿಸಿ ತಿದ್ದುಪಡಿಗಳು..

 

Donate Janashakthi Media

Leave a Reply

Your email address will not be published. Required fields are marked *