ತಿರುವನಂತಪುರ ಜ. 01 : ಭಾರತದ ಅತ್ಯಂತ ಕಿರಿಯ ವಯಸ್ಸಿನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಕೇರಳದ ರೇಷ್ಮಾ ಮರಿಯಮ್ ಪಾತ್ರರಾಗಿದ್ದಾರೆ. ಇದು ಕೇರಳದ LDF ನಿಂದ ಮತ್ತೊಂದು ಸಾಧನೆ ಎಂದು ಬಣ್ಣಿಸಲಾಗುತ್ತಿದೆ.
ರೇಷ್ಮಾ ಮರಿಯಮ್ ರಾಯ್ ಅವರು ಅರುವಾಪ್ಪುಲಂ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅರುವಪುಲ್ಲಮ್ ವಾರ್ಡ್ ಅನ್ನು ಅವರು ಗೆದ್ದಿದ್ದರು. ಅವರು ಬಿಬಿಎ ಪೂರ್ಣಗೊಳಿಸಿದ್ದಾರೆ ಮತ್ತು ಪಥನಮತ್ತಟ್ಟ ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದ್ಯರಾಗಿ, ಡಿವೈಎಫ್‌ಐ ಜಿಲ್ಲಾ ಸಮಿತಿ ಮತ್ತು ಸಿಪಿಐ (ಎಂ) ಶಾಖೆಯ ಸದಸ್ಯರಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ತಕ್ಷಣದ ಗಮನ ಸೆಳೆಯುವ ಹಲವಾರು ಯೋಜನೆಗಳಲ್ಲಿ, ಅವರ ವೈಯಕ್ತಿಕ ಆದ್ಯತೆಯೆಂದರೆ ತನ್ನ ವಾರ್ಡ್‌ನಲ್ಲಿ ಅಂಗನವಾಡಿಗಾಗಿ ಹೊಸ ಕಟ್ಟಡವನ್ನು ನಿರ್ಮಿಸುವುದು ಎಂದು ಹೇಳಿದ್ದಾರೆ.
ರೇಷ್ಮಾ ರವರು ಅರುವಾಪ್ಪುಲಂನ 11ನೇ ವಾರ್ಡ್‌ನಿಂದ 70 ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದರು. ಕೇರಳ ಚುನಾವಣೆಯಲ್ಲಿ ಸ್ಪರ್ಧಿಸಿದ ಅತ್ಯಂತ ಕಿರಿಯ ಅಭ್ಯರ್ಥಿ ಎಂಬ ಕಾರಣಕ್ಕೆ ರೇಷ್ಮಾ ಪ್ರಚಾರದಲ್ಲಿದ್ದರು. ನವೆಂಬರ್ 18, 2020ರಂದು 21ನೇ ವರ್ಷಕ್ಕೆ ಕಾಲಿಟ್ಟಿದ್ದ ರೇಷ್ಮಾ ಮರುದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಪತ್ತನಂತಿಟ್ಟದ ಕೊನ್ನಿಯ ವಿಎನ್‌ಎಸ್ ಕಾಲೇಜಿನಿಂದ ಬಿಬಿಎ ಮುಗಿಸಿದ್ದಾರೆ. ರೇಷ್ಮಾ ತಂದೆ ರಾಯ್.ಪಿ ಮ್ಯಾಥ್ಯೂ ಮರದ ವ್ಯಾಪಾರಿಯಾಗಿದ್ದು, ತಾಯಿ ಮಿನಿ ರಾಯ್ ಸೇಂಟ್ ಸ್ಟೀಫನ್ಸ್ ಕಾಲೇಜಿನ ಸಿಬ್ಬಂದಿಯಾಗಿದ್ದಾರೆ.