ಗುತ್ತಿಗೆ ಕಾಮಗಾರಿಗಳ ಅವ್ಯವಹಾರ ತನಿಖಾ ವರದಿ ಸಿದ್ದರಾಮಯ್ಯ ಗೆ ಸಲ್ಲಿಕೆ

ಬೆಂಗಳೂರು: ನೆನ್ನೆ ಬುಧವಾರ ನ್ಯಾ.ಎಚ್. ಎನ್.ನಾಗಮೋಹನದಾಸ್ ವಿಚಾರಣಾ ಆಯೋಗವು ಗುತ್ತಿಗೆ ಕಾಮಗಾರಿಗಳ ಅವ್ಯವಹಾರ ಮತ್ತು ನಾರಾಯಣಪುರ ಅಣೆಕಟ್ಟು ಆಧುನೀಕರಣ ಅಂದಾಜು ಪಟ್ಟಿಯ ಅಕ್ರಮಗಳ ಕುರಿತಾದ ಪ್ರತ್ಯೇಕ ತನಿಖಾ ವರದಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗೆ ಸಲ್ಲಿಸಿದೆ. ಅವ್ಯವಹಾರ

ರಾಜ್ಯ ಗುತ್ತಿಗೆದಾರರ ಸಂಘವು ಸರಕಾರದ ಟೆಂಡರ್ ಕಾಮಗಾರಿಗಳಲ್ಲಿ ಶೇ.40ಕ್ಕಿಂತ ಹೆಚ್ಚಿನ ಕಮಿಷನ್ ಚಾಲ್ತಿಯಲ್ಲಿದೆ ಎಂದು ಆರೋಪಿಸಿ ದೂರು ಸಲ್ಲಿಸಲಾಗಿತ್ತು. ಈ ಸಂಬಂಧ ನ್ಯಾ.ಎಚ್.ಎನ್.ನಾಗಮೋಹನದಾಸ್ ವಿಚಾರಣಾ ಆಯೋಗವು ಈ ಎಲ್ಲಾ ಆರೋಪಗಳ ಸತ್ಯಾಸತ್ಯತೆಯ ಬಗ್ಗೆ ಅಧ್ಯಯನ ಮಾಡಿ ತನಿಖೆ ನಡೆಸಿ ವರದಿಯನ್ನು ನೀಡಿದೆ.

ಇದನ್ನೂ ಓದಿ: ಕಲಬುರಗಿ| ಗುತ್ತಿಗೆದಾರ‍ರನ್ನು ಕಾಮಗಾರಿಗೆ ಸಂಬಂಧ ನಾಯಾಲಯ ವಿಚಾರಣೆ

ಮತ್ತೊಂದೆಡೆ, ರಾಯಚೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ನಾರಾಯಣಪುರ ಅಣೆಕಟ್ಟು ಆಧುನೀಕರಣ ಅಂದಾಜು ಪಟ್ಟಿಯ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ನಿವೃತ್ತ ಸರಕಾರದ ಕಾರ್ಯದರ್ಶಿ ಸಿದ್ದಗಂಗಪ್ಪರವರ ಅಧ್ಯಕ್ಷತೆಯಲ್ಲಿ ರಚಿಸಿದ ತಾಂತ್ರಿಕ ತಜ್ಞರ ಸಮಿತಿಯನ್ನು ವಿಸರ್ಜಿಸಿ ವಿಚಾರಣಾ ಆಯೋಗಕ್ಕೆ ಹೆಚ್ಚುವರಿಯಾಗಿ ವಹಿಸಿರುವ ತನಿಖೆಯನ್ನು ನ್ಯಾ.ಎಚ್.ಎನ್.ನಾಗಮೋಹನದಾಸ್ ವಿಚಾರಣಾ ಆಯೋಗವು ನಡೆಸಿ ತನಿಖಾ ವರದಿಯನ್ನು ಇದೀಗ ಸರಕಾರಕ್ಕೆ ಸಲ್ಲಿಸಿದೆ.

 ಇದನ್ನೂ ನೋಡಿ: LIVE: ಜನಚಳುವಳಿಗಳ ಬಜೆಟ್‌ ಅಧಿವೇಶನ

Donate Janashakthi Media

Leave a Reply

Your email address will not be published. Required fields are marked *