ಪಿಯುಸಿಯಲ್ಲಿ ಶೇ.90 ಅಂಕ ಇಲ್ಲದ್ದಕ್ಕೆ ಮನೆ ಬಾಡಿಗೆ ನೀಡಲು ನಿರಾಕರಣೆ!

ಬೆಂಗಳೂರು: ಪಿಯುಸಿಯಲ್ಲಿ ಕಡಿಮೆ ಮಾರ್ಕ್‌ ಬಂದಿದೆ ಅನ್ನೋ ಕಾರಣಕ್ಕೆ ಮನೆ ಬಾಡಿಗೆಗೆ ನೀಡಲು ನಿರಾಕರಿಸಿದ ಘಟನೆ ಜರುಗಿದೆ.

ಹೌದು ವಿಚಿತ್ರವೆನಿಸಿದರು ಇದು ಸತ್ಯ. ಈ ಕುರಿತಾದ ಪೋಸ್ಟ್​​​​ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ. ಈ ಕುರಿತಾಗಿ ಶುಭ್ ಎಂಬುವರು ಟ್ವೀಟ್​ ಮಾಡಿ ಮನೆ ಕೊಡಿಸುವ ಬ್ರೋಕರ್​​ನೊಂದಿಗೆ ನಡೆಸಿದ ವಾಟ್ಸಾಪ್​ ಚಾಟ್​ನ್ನು ಸ್ಕ್ರೀನ್​​​​ ಶಾಟ್​ ತೆಗೆದು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.

 

ರಾಜ್ಯ ರಾಜಧಾನಿ ಬೆಂಗಳೂರಲ್ಲಿ ) ಮನೆ ಬಾಡಿಗೆಗೆ  ಸಿಗುವುದು ಬಹಳ ಕಷ್ಟಕರ ಸಂಗತಿ. ಬೇರೆ ಬೇರೆ ಊರುಗಳಿಂದ ಬಂದು ನಗರದಲ್ಲಿ ವಾಸಿಸಲು ಬಯಸುವ ಜನರಿಗೆ ಬಾಡಿಗೆ ಮನೆ ಸಿಗುವುದು ದುರ್ಲಭವಾಗಿದೆ. To-Let ಅಂತ ಬೋರ್ಡ್​​​ ಕಂಡಮೇಲೆ ವಿಚಾರಿಸಲೆಂದು ಹೋದರೇ ಮನೆಯ ಮಾಲೀಕರು ಹಾಕುವ ಕಂಡಿಷನ್ಸ್ ಕೇಳಿದ್ರೆನೇ ಮೂರ್ಛೆ ಹೋಗುತ್ತದೆ. ಅದೇ ರೀತಿಯಾಗಿ ನಗರದಲ್ಲಿ ಓರ್ವ ಮನೆ ಮಾಲಿಕ, ಮನೆ ಬಾಡಿಗೆಗೆ ಬೇಕಾದರೇ ದ್ವಿತೀಯ ಪಿಯುಸಿಯಲ್ಲಿ ಕಡ್ಡಾಯವಾಗಿ ಶೇ90 ರಷ್ಟು ಅಂಕ ಪಡೆದಿರಬೇಕು ಎಂಬ ನಿಯಮ ಹಾಕಿದ್ದಾರೆ. ​​

ವಾಟ್ಸಪ್​​ ಚಾಟ್​​ನಲ್ಲಿ ಮನೆ ಕೊಡಿಸುವ ಬ್ರೋಕರ್​​ ಹೇಳಿದ್ದಾರೆ, “ಲಿಂಕ್​ಡಿನ್​​ ಮತ್ತು ಟ್ವಿಟರ್​​ ಪ್ರೋಫೈಲ್​​ ಕಳಸಿ,    ಜೊತೆಗೆ ನಿಮ್ಮ ಕಂಪನಿ ಜಾಯನಿಂಗ್​ ಲೆಟರ್​​, ಅಂಕಪಟ್ಟಿ, ಮತ್ತು ಆಧಾರ್​ ಕಾರ್ಡ್​ ಅಥವಾ ಪ್ಯಾನ್​ ಕಾರ್ಡ್​​​​ ಕೇಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ 150 ರಿಂದ 300 ಪದಗಳಲ್ಲಿ ನಿಮ್ಮ ಬಗ್ಗೆ ಬರೆದು ಪತ್ರವನ್ನು ಕಳುಹಿಸಿ” ಎಂದು ಮನೆ ಮಾಲಿಕರು ಕಂಡೀಷನ್ಸ್​ ಹಾಕಿದ್ದಾರೆ ಎಂದು ಮನೆ ಪಡೆಯುವವರಿಗೆ ಬ್ರೋಕರ್​​ ಮೆಸೆಜ್​ ಮಾಡಿದ್ದಾರೆ.

ನಂತರ ಮನೆ ಬಾಡಿಗೆ ಪಡೆಯುವವರು ಸರಿ ಎಂದು ಎಲ್ಲ ಡಾಕ್ಯುಮೆಂಟ್ಸ್​​ ​ ಮತ್ತು ಪತ್ರವನ್ನು ಬ್ರೋಕರ್​​ಗೆ ಕಳಸಿದ್ದಾರೆ. ಆ ಕಡೆಯಿಂದ ಬ್ರೋಕರ್​​ನ ರಿಪ್ಲೈ ಬಂದಿದ್ದು, “ನೀವು ದ್ವಿತೀಯ ಪಿಯುಸಿಯಲ್ಲಿ ಶೇ75 ರಷ್ಟು ಮಾತ್ರ ಅಂಕ ಪಡೆದಿದ್ದೀರಿ, ನಾವು ಮನೆ ನೀಡಲು ಕನಿಷ್ಠ ಶೇ90 ರಷ್ಟು ಅಂಕ ಪಡೆಯಬೇಕು. ಹೀಗಾಗಿ ನಿಮಗೆ ಮನೆ ಬಾಡಿಗೆ ಕೊಡಲು ಆಗುವುದಿಲ್ಲ ಎಂದು ಮನೆ ಮಾಲಿಕ ರಿಜೆಕ್ಟ್​​ ಮಾಡಿದ್ದಾರೆ” ಎಂದು ಬ್ರೋಕರ್​ ಹೇಳಿದ್ದಾರೆ. ಇದರಿಂದ ಆಶ್ಚರ್ಯಗೊಂಡ ಮನೆ ಬಾಡಿಗೆ ಪಡೆಯವ ವ್ಯಕ್ತಿ ಟೂ ಫನ್ನಿ ಎಂದು ಮರು ಉತ್ತರಿಸಿದ್ದಾರೆ.

ಬೆಂಗಳೂರಿನಲ್ಲಿ  ಮನೆ ಬಾಡಿಗೆ ಪಡೆಯುವ ವೇಳೆ ಆಹಾರ ಪದ್ಧತಿ, ಜಾತಿ ವಿಚಾರ ತಿಳಿದು ಮನೆ ನಿರಾಕರಿಸಿದ ಘಟನೆಗಳು ನಡೆಯುತ್ತಿವೆ. ಈಗ ಆ ಸಾಲಿಗೆ ಅಂಕದ ಮಾನದಂಡವು ಸೇರಿಕೊಂಡಿದೆ. ಅಂಕ ಪಡೆದಿರುವ ವಿಚಾರದ ಮೂಲಕ ಇಲ್ಲಿ ಯಾವ ಜತಿಯವರು ಎಂದು ಸುಲಭವಾಗಿ ತಿಳಿಯುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಜನರು ಆರೋಪಿಸುತ್ತಿದ್ದಾರೆ.  ಜಾತಿ ವ್ಯವಸ್ಥೆ,  ಜಾಣ – ದಡ್ಡ ಎಂಬ ಶ್ರೇಣಿಕೃತ ವ್ಯವಸ್ಥೆ ಹೇಗೆದೆ ಎಂಬುದನ್ನು ಇಂತಹ ಘಟನೆಗಳು ತೋರಿಸುತ್ತಿವೆ.

Donate Janashakthi Media

Leave a Reply

Your email address will not be published. Required fields are marked *