ಬೆಂಗಳೂರು: ಈ ದೇಶದ ಸಂವಿಧಾನ ಉಳಿದರೆ ದೇಶದ ಬಡವರು ರೈತರು ಉಳಿಯುತ್ತಾರೆ ಎಂದು ಸಾಹಿತಿ ಇಂದೂಧರ ಹೊನ್ನಾಪುರ ಹೇಳಿದರು. ಸಂವಿಧಾನ
ಮೂರನೇ ದಿನದ ಮಹಾಧರಣಿಯಲ್ಲಿ ಭಾಗವಹಿಸಿ ಕಾರ್ಮಿಕ ಮತ್ತು ರೈತರ ಪರವಾಗಿ ಮಾತನಾಡಿದ ಅವರು, ಮಹಾಧರಣಿಯ ಗುರಿ 2024ರ ಚುನಾವಣೆಯಲ್ಲಿ ದೇಶವನ್ನು ಉಳಿಸುವುದರ ಬಗ್ಗೆ ಹೆಚ್ಚು ಕೇಂದ್ರೀಕ್ರಣ ಮಾಡಬೇಕು. ದೇಶದ್ರೋಹಿ ಶಕ್ತಿಗಳ ಕೈಯಲ್ಲಿನ ಅಧಿಕಾರವನ್ನು ನಾವು ಮರಳಿ ಪಡೆಯಬೇಕಾಗಿದೆ. ದಲ್ಲಾಳಿ ರಾಜಕಾರಣಿ, ಲೂಟಿಕೋರ ಉದ್ಯಮಿಗಳ ಕೈಯಲ್ಲಿ ಅಧಿಕಾರ ಇದೆ ಎಂದರು.
ಇದನ್ನೂ ಓದಿ:ಮಹಾಧರಣಿ| ದೇಶದ ಭೂಮಿ ದಲಿತ ಕಾರ್ಮಿಕರದ್ದಾಗಿದೆ – ಯು.ಬಸವರಾಜ್
ಅದಾನಿ ಅಬಾನಿಯ ಪಿತೂರಿಯ ವೆಸ್ಟ್ ಇಂಡಿಯಾ ಕಂಪನಿ ಇಡೀ ದೇಶವನ್ನು ಲೂಟಿ ಮಾಡಲು ಹೊರಟಿದೆ. ಈ ದೇಶದ ಸಂವಿಧಾನ ಉಳಿದರೆ ದೇಶದ ಬಡವರು ರೈತರು ಉಳಿಯುತ್ತಾರೆ. 2024ರಲ್ಲಿ ದೇಶದ್ರೋಹಿ ಬಿಜೆಪಿಯನ್ನು ಮನೆಗೆ ಕಳುಹಿಸಬೇಕಾಗಿದೆ ಎಂದು ಹೇಳಿದರು.
ಜನಪರವಾದ ಸರ್ಕಾರಗಳು ಬೇಕಾಗಿದೆ: ಆರ್.ವಿ. ಹರೀಶ್
ಮಹಾಧರಣಿಯಲ್ಲಿ ಹೆಚ್‌ಎಮ್‌ಎಸ್ ಮುಖಂಡ ಆರ್.ವಿ. ಹರೀಶ್ ಮಾತನಾಡಿ, ಜನಪರವಾದ ಸರ್ಕಾರಗಳು ಬೇಕಾಗಿದೆ. ಈ ಹಿಂದೆ ಜನರಪರವಾದ ಸರ್ಕಾರಗಳು ಬರುತ್ತಿದ್ದವು. ಆದರೆ ಇಂದು ಯಾವುದೇ ಸರ್ಕಾರಗಳು ಜನಪರವಾಗಿಲ್ಲ. ಪ್ರಶಾಂತ್ ಕಿಶೋರ್ ಶಿಷ್ಯಂದಿರು ಎಲ್ಲಾ ಪಕ್ಷಗಳಿಗೆ ಕೆಲಸ ಮಾಡುತ್ತಿದ್ದಾರೆ. ಗುಳ್ಳೆ ನರಿಗಳು ಇಂದು ಅಧಿಕಾರ ನಡೆಸುತ್ತಿವೆ ಎಂದು ಕುಟುಕಿದರು.
ದುಡಿಯುವ ಜನರ ಮೇಲೆ ಚಪ್ಪಡಿ ಕಲ್ಲಿನ ಭಾರ ಕೂತಿದೆ:ರಹಮತ್ ತರಿಕೆರೆ
ಸಂಸ್ಕೃತಿ ಚಿಂತಕ ರಹಮತ್ ತರಿಕೆರೆ ಅವರು ಮಾತನಾಡಿ, ಈ ಹಿಂದೆ ಒಂದೇ ಬಣ್ಣದ ಧ್ವಜದೊಂದಿಗೆ ಚಳವಳಿ ನಡೆಯುತ್ತಿತ್ತು. ಈಗ ಅನೇಕ ಬಣ್ಣದ ಧ್ವಜಗಳು ಸೇರಿ ಚಳವಳಿ ನಡೆಯುತ್ತಿದೆ, ಇದು ಭವಿಷ್ಯದ ಚಳವಳಿಗೆ ನಾಂದಿಯಾಗಲಿ. ದುಡಿಯುವ ಜನರ ಮೇಲೆ ಚಪ್ಪಡಿ ಕಲ್ಲಿನ ಭಾರ ಕೂತಿದೆ. ಅದನ್ನು ನಾವೇ ತೆಗೆದು ನಮ್ಮನ್ನು ರಕ್ಷಿಸಿಕೊಳ್ಳಬೇಕಾಗಿದೆ ಎಂದರು.ಸಂವಿಧಾನ
ಐಕ್ಯ ಭಾರತ ಕಟ್ಟಲು ಮೋದಿಯನ್ನು ಸೋಲಿಸಬೇಕು:ದಾವಲ್ ಸಾಬ್ ನದಾಫ್
ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕ ಸಂಘದ ಮುಖಂಡ, ದಾವಲ್ ಸಾಬ್ ನದಾಫ್ ಮಾತನಾಡಿ, ಬ್ರಿಟೀಷರನ್ನು ಓಡಿಸಲು ಇಲ್ಲಿನ ಹೋರಾಟಗಾರರು ಯಾವ ರೀತಿ ತೀರ್ಮಾನ ತೆಗೆದುಕೊಂಡರೊ ಅದೇ ರೀತಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ನಾವು ತೀರ್ಮಾನ ಕೈಗೊಳ್ಳಬೇಕಾಗಿದೆ. ಉದ್ಯೋಗ ಖಾತ್ರಿಗೆ ಅನುದಾನ ನೀಡದ ಸರ್ಕಾರ ಶ್ರೀಮಂತರಿಗೆ ಕೋಟ್ಯಾಂತರ ರೂ. ಸಾಲ ಮನ್ನಾ ಮಾಡುತ್ತಿದೆ. ರಾಮ, ರಹೀಮನ ಹೆಸರಿನಲ್ಲಿ ಒಡೆಯುತ್ತಿದೆ. ನಮ್ಮ ಧರ್ಮಗಳನ್ನು ಮನೆ ಮನಗಳ ಒಳಗೆ ಇಟ್ಟು ದುಡಿಯುವ ಜನರು ನಾವು ಒಗ್ಗಟ್ಟಾಗಬೇಕಾಗಿದೆ. ಐಕ್ಯ ಭಾರತ ಕಟ್ಟಲು ಮೋದಿಯನ್ನು ಸೋಲಿಸಬೇಕು ಎಂದು ಹೇಳಿದರು.
ನಮ್ಮ ಸಮಸ್ಯೆ ಎಲ್ಲವೂ ಇತ್ಯಾರ್ಥ ಆಗಿದ್ದು ಜನಚಳವಳಿಯಿಂದ: ಸೋಮಶೇಖರ್ ಯಾದಗಿರಿ
ಎಐಸಿಸಿಟಿಯು ಸೋಮಶೇಖರ್ ಯಾದಗಿರಿ ಮಾತನಾಡಿ, ಜನರ ಸಮಸ್ಯೆಗಳಿಗೆ ಕಾರಣ ಆಡಳಿತ ನಡೆಸುವ ಸರ್ಕಾರಗಳದ್ದಾಗಿದೆ. ರೈತ ಕಾರ್ಮಿಕರ ಸಮಸ್ಯೆಗಳ ಪರಿಹಾರಗಳು ಹೋರಾಟದ ರಣರಂಗದಲ್ಲಿ ನಿರ್ಧಾರ ಆಗುತ್ತದೆ. ಮಾಲಿಕರನ್ನು ಬಗ್ಗಿಸಬೇಕು ಎಂದರೆ ನಮ್ಮ ಸ್ನೇಹಿತರು ಯಾರು ಎಂಬುವದನ್ನು ಗುರುತಿಸಿಕೊಂಡು ಹೋರಾಟಗಳು ನಡೆಯಬೇಕಿದೆ. ಆಡಳಿತ ವರ್ಗದ ಪರವಾಗಿ ಇರುವಂತಹ ಆಡಳಿತ ಪಕ್ಷಗಳು ನಾವು ನಿರೀಕ್ಷೆ ಮಾಡುವುದು ತಪ್ಪಾಗುತ್ತದೆ. ನಮ್ಮ ಸಮಸ್ಯೆ ಎಲ್ಲವೂ ಇತ್ಯಾರ್ಥ ಆಗಿದ್ದು ಜನಚಳವಳಿಯಿಂದಾಗಿದೆ ಎಂದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರು ಸರ್ಕಾರದ ಪರವಾಗಿ ಮಾತನಾಡಿ, ಕೃಷ್ಣಬೈರೇಗೌಡ ಅವರು ನಿನ್ನೆಯ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡಲು ರೈತರ ಕಾರ್ಮಿಕ ಮುಖಂಡರ ಜೊತೆಗೆ ಮೂರು ನಾಲ್ಕು ಗಂಟೆಗಳಾದರೂ ಬೇಕೆಂದು ಅವರು ತಿಳಿದುಕೊಂಡಿದ್ದಾರೆ. ಜನವರಿ 19ರ ಸಂಜೆ ನಾಲ್ಕು ಗಂಟೆಗೆ ಸಮಯ ನಿಗದಿ ಮಾಡಿದ್ದಾರೆ. ಹೋರಾಟಗಾರರ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ತಿಳಿದಿದ್ದು, ದೊಡ್ಡ ಶಕ್ತಿಯ ಪ್ರದರ್ಶನ ಮಾಡಿದ್ದೀರಿ. ಕೇಂದ್ರ ಸರ್ಕಾರ ಕೂಡಾ ಬೇಡಿಕೆಗೆ ಒಪ್ಪಿಕೊಳ್ಳುತ್ತದೆ ಎಂದು ನಾವು ನಂಬಿದ್ದೇವೆ ಎಂದು ಭರವಸೆಯ ಮಾತುಗಳನ್ನಾಡಿದರು.
ವಿಡಿಯೋ ನೋಡಿ:ಮಹಾಧರಣಿ| ದುಡಿಯುವ ಜನರ ಮಹಾಧರಣಿ: ಮೂರನೇ ದಿನದ ನೇರ ಪ್ರಸಾರ