ಬೆಂಗಳೂರು : ರೆಮ್ಡೆಸಿವಿರ್ ಇಂಜಕ್ಷನ್ ವಿತರಣೆ ಮಾಡದೆ ಡಿಸ್ಟ್ರಿಬ್ಯೂಟರ್ ವಿಳಂಬ ಮಾಡುತ್ತಿದ್ದಾರೆ ಎಂದು ಖಾಸಗಿ ಆಸ್ಪತ್ರೆ ಒಡತಿ ರೂಪಾ ರಾಜೇಶ್ ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ರೆಮ್ಡೆಸಿವಿರ್ ಇಂಜಕ್ಷನ್ಸ್ ಸಾಕಷ್ಟು ಸ್ಟಾಕ್ ಇದೆ ಅಂತಾ ಅಂಕಿಅಂಶಗಳು ಹೇಳುತ್ವೆ. ಆದರೆ ಇಂಜಕ್ಷನ್ ಗಳು ಕಣ್ಣಿಗೆ ಮಾತ್ರ ಕಾಣ್ತಿಲ್ಲ. ಪೇಷಂಟ್ ಗಳು ಜಾಸ್ತಿ ಇದ್ದಾರ? ಅಥವಾ ಅಧಿಕಾರಿಗಳು ಮುಚ್ಚಿಡ್ತಿದ್ದಾರ? ಅಥವಾ ಅಂಕಿ ಅಂಶಗಳೇ ಸುಳ್ಳು ಹೇಳ್ತಿವೆಯಾ? ನಿನ್ನೆಯಿಂದ ನಮಗೆ ಮತ್ತು ನಮ್ಮ ಸುತ್ತಮುತ್ತಲಿನ ಆಸ್ಪತ್ರೆಗಳಿಗೆ ಇಂಜಕ್ಷನ್ ಬಂದಿಲ್ಲ. ನಿನ್ಬೆಯಿಂದ ರೋಗಿಗಳಿಗೆ ಆ ಇಂಜಕ್ಷನ್ ಕೊಡೋಕಾಗಿಲ್ಲ. ಇವತ್ತು ಬೆಳಿಗ್ಗೆ ಅಲಾಟ್ ಮಾಡಿದ್ರು. ಅದೆಲ್ಲೋ ದೂರದ ಸರ್ಜಾಪುರದಿಂದ ತರಬೇಕಿತ್ತು.
ಡಿಸ್ಟ್ರಿಬ್ಯೂಟರ್ ಗೆ ನಮಗೆಲ್ಲಾ ರೆಮಿಡೆಸ್ವಿರ್ ಇಂಜಕ್ಷನ್ ಗಳನ್ನು ಹಂಚುವಂತೆ ಆರ್ಡರ್ ಕೊಟ್ಟಿದ್ದಾರೆ. ಈ ವ್ಯಕ್ತಿ ತನ್ನದೇ ಆ ಇಂಜಕ್ಷನ್ ಗಳು ಅನ್ನೋ ತರಹ ಆಡ್ತಿದ್ದಾನೆ. ನಿನ್ನೆಯಿಂದ ಫೋನ್ ತೆಗೀತಿಲ್ಲ. ನೂರು ಸಲ ಕಾಲ್ ಮಾಡಿದ ಮೇಲೆ “ಬೇಕಿದ್ರೆ ವೇಟ್ ಮಾಡಿ, ಇಲ್ಲದಿದ್ರೆ ಬಿಡಿ, ನಾನು ಹೀಗೆ” ಅಂತಾ ಹೇಳಿ ಫೋನಿಟ್ಟಿದ್ದಾನೆ ಎಂದು ರೂಪಾ ರಾಜೇಶ್ ಆರೋಪಿಸಿದ್ದಾರೆ.
ನನಗೆ ಮಾತ್ರವಲ್ಲ, ನಮ್ಮ ಏರಿಯಾದ ಎಲ್ಲಾ ಆಸ್ಪತ್ರೆಗಳಿಗೂ ಅವನು ಇಂಜಕ್ಷನ್ ಕಳಿಸಿಲ್ಲ. ಅಷ್ಟೊಂದು ಸ್ಟಾಕ್ ಇಟ್ಟುಕೊಂಡು ಏನು ಮಾಡ್ತಿದ್ದಾನೆ? ಅಂತಾ ಗೊತ್ತಿಲ್ಲ. ಇಂತಹವರಿಗೆ ಕಂಪೆನಿಯವರು ಯಾಕೆ ಕಾಂಟ್ರಾಕ್ಟ್ ಕೊಡಬೇಕು? ಸಮಯಕ್ಕೆ ಸರಿಯಾಗಿ ಸ್ಟಾಕ್ ಕೊಡೋಕೆ ಆಗದಿದ್ದ ಮೇಲೆ, ಸರ್ಕಾರ ಯಾಕೆ ಇಂತಹವರಿಗೆ ಅವಕಾಶ ನೀಡುತ್ತದೆ? ಸ್ಟಾಕ್ ಇಲ್ಲ ಅಂದ್ರೆ ಒಪ್ಪಬಹುದು. ಇದ್ದರೂ ಕೊಡೋಕೇನು ಕಷ್ಟ? ಈತನ ಜೊತೆಗೆ ಅಗ್ರಿಮೆಂಟ್ ಇದೆ ಅಂತಾ ಇವನನ್ನು ಬಿಟ್ಟು ಬೇರೆಯವರಿಗೆ ಇಂಜಕ್ಷನ್ ಗಳನ್ನು ಕೊಡ್ತಿಲ್ಲವಂತೆ! ಈತನ ಮೇಲೆ ಕೂಡಲೇ ಪಾಂಡೆಮಿಕ್ ಆಕ್ಟ್ ಪ್ರಕಾರ ಕ್ರಮ ಕೈಗೊಳ್ಳಬೇಕು, ಈ ಡಿಸ್ಟ್ರಿಬ್ಯೂಟರನನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ.