ಬೆಂಗಳೂರು : ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಲು ಆಡಳಿತ ಮಂಡಳಿ ಹಿಂದೇಟು ಹಾಕುತ್ತಿದೆ. ಕನ್ನಡದ ಜಲ-ನೆಲ-ಧನ ಬಳಸಿ ಕಟ್ಟಿದ ಸಂಸ್ಥೆಯಲ್ಲಿ ಕನ್ನಡಿಗರ ದುಸ್ಥಿತಿ ಇದು. ಬಿಜೆಪಿಯ ಸಂಸದರೇ ಇದರ ಬಗ್ಗೆ ಪ್ರಶ್ನೆ ಮಾಡಲು ನಿಮಗೆ ಧಮ್ಮು – ತಾಕತ್ತು ಇಲ್ಲವೆ ಎಂದು ಜೆಡಿಎಸ್ ಪ್ರಶ್ನಿಸಿದೆ.
ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಲು ಆಡಳಿತ ಮಂಡಳಿ ಹಿಂದೇಟು ಹಾಕುತ್ತಿದೆ. ಕನ್ನಡದ ಜಲ-ನೆಲ-ಧನ ಬಳಸಿ ಕಟ್ಟಿದ ಸಂಸ್ಥೆಯಲ್ಲಿ ಕನ್ನಡಿಗರ ದುಸ್ಥಿತಿ ಇದು. @BJP4Karnataka ದ ಸಂಸದರೇ ಇದರ ಬಗ್ಗೆ ಪ್ರಶ್ನೆ ಮಾಡಲು ನಿಮಗೆ ಧಮ್ಮು – ತಾಕತ್ತು ಇಲ್ಲವೆ?1/3 pic.twitter.com/5MdjvJzl1B
— Janata Dal Secular (@JanataDal_S) March 7, 2023
ಈ ಸಂಬಂಧ ಟ್ವೀಟ್ ಮಾಡಿರುವ ಜೆಡಿಎಸ್, ಉತ್ತರದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ಈ ವಂಚನೆ ನಮ್ಮ ಮೂಗಿನ ಕೆಳಕ್ಕೆ ನಡೆಯುತ್ತಿದೆ. ಉತ್ತರದವರ ಮುಂದೆ ಬೇಡಲು ನಾವೇನು ಅವರ ಗುಲಾಮರೆ? ನಾವು ನಮ್ಮ ಹಕ್ಕು ಕೇಳುತ್ತಿದ್ದೇವೆ ಹೊರತು ಭಿಕ್ಷೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಉತ್ತರದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ಈ ವಂಚನೆ ನಮ್ಮ ಮೂಗಿನ ಕೆಳಕ್ಕೆ ನಡೆಯುತ್ತಿದೆ. ಉತ್ತರದವರ ಮುಂದೆ ಬೇಡಲು ನಾವೇನು ಅವರ ಗುಲಾಮರೆ? ನಾವು ನಮ್ಮ ಹಕ್ಕು ಕೇಳುತ್ತಿದ್ದೇವೆ ಹೊರತು ಭಿಕ್ಷೆಯಲ್ಲ.2/3
— Janata Dal Secular (@JanataDal_S) March 7, 2023
ಡಬಲ್ ಎಂಜಿನ್ ಸರ್ಕಾರ ಬಂದರೆ ರಾಜ್ಯಕ್ಕೆ ಲಾಭವಾಗಲಿದೆ ಎಂದು ಬಿಜೆಪಿ ನಾಯಕರು ಬೊಬ್ಬೆ ಹಾಕುತ್ತಿದ್ದರು. ಆದರೆ, ಈಗ ನಮ್ಮ ಮಕ್ಕಳಿಗೆ ಮೋಸವಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಈ ಅನ್ಯಾಯವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತನ್ನಿ. ನಡುಬಗ್ಗಿಸಿ ಇನ್ನೆಷ್ಟು ದಿನ ನಿಲ್ಲುವಿರಿ? ಅಧಿಕಾರದ ಕೊನೆಯಲ್ಲಾದರೂ ಸ್ವಾಭಿಮಾನಿಯಾಗಿ ಧ್ವನಿ ಎತ್ತಿ ಎಂದು ಮೂದಲಿಸಿದೆ.
ಇದನ್ನೂ ಓದಿ : ಉಳ್ಳವರಿಗೆ ಮಣೆ ಹಾಕುವ ನೂತನ ಶಿಕ್ಷಣ ನೀತಿ