ಕೂಡ್ಲಿಗಿ: ಎಐಟಿಯುಸಿ ಸಹಯೋಗದಲ್ಲಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ನಿಂದ ಪಟ್ಟಣದಲ್ಲಿ ಎರಡು ತಿಂಗಳಿಂದ ಬಾಕಿ ಇರುವ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ : ಕಬ್ಬಿನ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದವರ ವಿರುದ್ದ ಕಾನೂನು ಕ್ರಮ: ಶಿವಾನಂದ ಪಾಟೀಲ
ಎಐಟಿಯುಸಿ ಮುಖಂಡ ಎಚ್. ವೀರಣ್ಣ ಮಾತನಾಡಿ, ‘ಶಾಲೆಯ ರಜೆ ನಂತರ ಪೂರೈಕೆಯಾದ ಗೋಧಿ, ಬೇಳೆಯಲ್ಲಿ ಹುಳು ಇದ್ದು, ಅವನ್ನೇ ಉಪಯೋಗಿಸುವಂತೆ ಹೇಳಲಾಗುತ್ತದೆ. ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಳ್ಳಬೇಕು. ಬಿಸಿಯೂಟ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ಸಮರ್ಪಕವಾಗಿ ವೇತನ ಸಿಗುತ್ತಿಲ್ಲ’ ಎಂದು ಆರೋಪಿಸಿದರು.
‘ಕೆಂಚಮಲ್ಲನಹಳ್ಳಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾಗ ಅಪಾಯಕ್ಕೊಳಗಾದ ಮಹಿಳೆಯನ್ನು ಅಧಿಕಾರಿಗಳು ಭೇಟಿ ಮಾಡಿಲ್ಲ. ಮಹಿಳೆಗೆ ತಕ್ಷಣ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.
ಉಪ ತಹಶೀಲ್ದಾರ್ ಮದಲಹಟ್ಟಿ ಹಾಗೂ ಬಿಸಿಯೂಟ ಯೋಜನೆ ಕಚೇರಿ ಸಿಬ್ಬಂದಿ ನಟರಾಜಸ್ವಾಮಿ ಮನವಿ ಸ್ವೀಕರಿಸಿದರು. ಫೆಡರೇಷನ್‌ನ ತಾಲ್ಲೂಕು ಘಟಕದ ಅಧ್ಯಕ್ಷೆ ಸುಜಾತ, ಉಪಾಧ್ಯಕ್ಷೆ ನಾಗಮ್ಮ, ತಿಪ್ಪಕ್ಕ, ಕಾರ್ಯದರ್ಶಿ ಉಷಾರಾಣಿ, ಕೊತ್ಲಮ್ಮ, ಜಯಮ್ಮ, ಕಟ್ಟಡ ಕಾರ್ಮಿಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಯು. ಪೆನ್ನಪ್ಪ, ಸಂಚಾಲಕ ಡಿ. ಅನಂತೇಶ, ಕಿಸನ್ ಸಭಾ ಕಾರ್ಯದರ್ಶಿ ಮಲ್ಲಿಕಾರ್ಜುನ, ಉಪಾಧ್ಯಕ್ಷ ರಮೇಶ, ಎನ್‌ಎಫ್ಐಡಬ್ಲ್ಯು ತಾಲ್ಲೂಕು ಘಟಕದ ಅಧ್ಯಕ್ಷೆ ಮಮತ ಪಾಲ್ಗೊಂಡಿದ್ದರು.
ಇದನ್ನೂ ನೋಡಿ : CITU ರಾಜ್ಯ ಸಮ್ಮೇಳನ | ಕೇಂದ್ರದ ಶ್ರಮಿಕ ನೀತಿಯಲ್ಲಿ ಮನುಸ್ಮೃತಿ – ಐಕ್ಯ ಹೋರಾಟದ ಮೂಲಕ ಹಿಮ್ಮೆಟ್ಟಿಸಿ
