– ವಸಂತರಾಜ ಎನ್.ಕೆ
ಕನ್ನಡದಲ್ಲಿ ಎರಡು ಯೆಚೂರಿ ಪುಸ್ತಕಗಳನ್ನು ಪ್ರಕಟಿಸಿದ್ದು ಅಕ್ಟೋಬರ್ 6ರಂದು ಬೆಂಗಳೂರಿನಲ್ಲಿ ನಡೆಯಲಿರುವ ಶ್ರದ್ಧಾಂಜಲಿ ಸಭೆಯಲ್ಲಿ ಇವು ಬಿಡುಗಡೆಯಾಗಲಿದೆ ಎಂದು ಕ್ರಿಯಾ ಮಾಧ್ಯಮ ಪ್ರಕಟಣೆ ತಿಳಿಸಿದೆ. ‘ಹೀಗಿದ್ದರು ಯೆಚೂರಿ : ಒಡನಾಡಿಗಳ ನೆನಪು’ ಮತ್ತು ‘ಅಚ್ಛೇ ದಿನ್’ ಗೆ ಸವಾಲು : ನಿರ್ದಿಷ್ಟ ಪರಿಸ್ಥಿತಿಗಳ ನಿರ್ದಿಷ್ಟ ವಿಶ್ಲೇಷಣೆ’ ಆ ಎರಡು ಪುಸ್ತಕಗಳ ಹೆಸರು. ಮೊದಲ ಪುಸ್ತಕ ಯೆಚೂರಿ ಅವರ ಕುರಿತ ಇತರರು ಬರೆದ ಲೇಖನಗಳ ಸಂಗ್ರಹವಾದರೆ, ಎರಡನೆಯದು ಯೆಚೂರಿ ಅವರೇ ಬರೆದ ಆಯ್ದ ಲೇಖನಗಳ ಸಂಗ್ರಹ.
ಹಿರಿಯ ರಾಜಕೀಯ ನಾಯಕರೊಬ್ಬರು ನಿಧನರಾದಾಗ ಶ್ರದ್ಧಾಂಜಲಿಗಳು ಹರಿದು ಬರುವುದು ಸಾಮಾನ್ಯ. ಆದರೆ ಅವು ಬರಿಯ ಔಪಚಾರಿಕವಾಗಿರುವುದೇ ಹೆಚ್ಚು. ರಾಜಕೀಯ ಅಧಿಕಾರದಲ್ಲಿ ಎಂದೂ ಇರದ ಎಡಪಂಥೀಯ ಅದರಲ್ಲೂ ಕಮ್ಯುನಿಸ್ಟ್ ಪಕ್ಷದ ನಾಯಕರಿಗೆ ಔಪಚಾರಿಕ ಶ್ರದ್ಧಾಂಜಲಿಗಳು ಸಹ ವಿರಳವೇ. ಅದರಲ್ಲೂ ‘ಮುಖ್ಯವಾಹಿನಿ’ ಮಾಧ್ಯಮಗಳು ಅಂತಹ ನಾಯಕರನ್ನು ನಿರ್ಲಕ್ಷಿಸುವುದೇ ಹೆಚ್ಚು.
ಆದರೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಇತ್ತೀಚೆಗೆ ನಿಧನರಾದಾಗ ಇದಕ್ಕೆ ಅಪವಾದವಾದರು. ಭಾವಪೂರ್ಣ ಶ್ರದ್ಧಾಂಜಲಿಗಳ ಮಹಾಪೂರವೇ ಹರಿದು ಬಂತು. ಹೆಚ್ಚಿನ ಪ್ರಮುಖ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾದವು. ಕೆಲವು ಪತ್ರಿಕೆಗಳಲ್ಲಿ ಹಲವು ಲೇಖನಗಳು ಪ್ರಕಟವಾದವು. ಬಹಳ ಆಪ್ತವಾದ ಈ ಲೇಖನಗಳನ್ನು ಬರೆದವರು ಸಮಾಜದ ಎಲ್ಲಾ ವಲಯಗಳಿಂದ ಬಂದವರು. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಅವರು ರಾಜಕೀಯ ಜೀವನ ಆರಂಭಿಸಿದ್ದ ಜೆ.ಎನ್.ಯು ನಿಂದ ಅವರ ಅಂತಿಮ ಪಯಣ ಆರಂಭ ಸಾಧ್ಯವಾಗಿದ್ದು ಸಹ ಬಹುಶಃ ಈ ವರೆಗೆ ಯಾರಿಗೂ ಸಂದಿಲ್ಲದಿರುವÀ ಮಹಾನ್ ಗೌರವ. ಅದೇ ರೀತಿ ಯೆಚೂರಿ ಅವರ ಕುರಿತು ಪುಸ್ತಕಗಳೂ ಹಲವು ಭಾಷೆಗಳಲ್ಲಿ ಪ್ರಕಟವಾಗಿವೆ.
ಈ ನಿಟ್ಟಿನಲ್ಲಿ ಕನ್ನಡದಲ್ಲಿ ಎರಡು ಯೆಚೂರಿ ಪುಸ್ತಕಗಳನ್ನು ಪ್ರಕಟಿಸಿದ್ದು ಅಕ್ಟೋಬರ್ 6ರಂದು ಬೆಂಗಳೂರಿನಲ್ಲಿ ನಡೆಯಲಿರುವ ಶ್ರದ್ಧಾಂಜಲಿ ಸಭೆಯಲ್ಲಿ ಬಿಡುಗಡೆಯಾಗಲಿದೆ ಎಂದು ಕ್ರಿಯಾ ಮಾಧ್ಯಮ ಪ್ರಕಟಣೆ ತಿಳಿಸಿದೆ. ‘ಹೀಗಿದ್ದರು ಯೆಚೂರಿ : ಒಡನಾಡಿಗಳ ನೆನಪು’ ಮತ್ತು ‘ಅಚ್ಛೇ ದಿನ್’ ಗೆ ಸವಾಲು : ನಿರ್ದಿಷ್ಟ ಪರಿಸ್ಥಿತಿಗಳ ನಿರ್ದಿಷ್ಟ ವಿಶ್ಲೇಷಣೆ’ ಆ ಎರಡು ಪುಸ್ತಕಗಳ ಹೆಸರು. ಮೊದಲ ಪುಸ್ತಕ ಯೆಚೂರಿ ಅವರ ಕುರಿತ ಇತರರು ಬರೆದ ಲೇಖನಗಳ ಸಂಗ್ರಹವಾದರೆ, ಎರಡನೆಯದು ಯೆಚೂರಿ ಅವರೇ ಬರೆದ ಆಯ್ದ ಲೇಖನಗಳ ಸಂಗ್ರಹ.
ಇದನ್ನೂ ಓದಿ : ಕರ್ನಾಟಕ ಮತ್ತು ಸೀತಾರಾಮ್ ಯೆಚೂರಿ
‘ಹೀಗಿದ್ದರು ಯೆಚೂರಿ’ ಪುಸ್ತಕದಲ್ಲ್ಲಿ ಯೆಚೂರಿ ಅವರ ಜೀವನಪಯಣದ ಸ್ಥೂಲ ನೋಟವಿದೆ. ಯಮುನಾ ಗಾಂವ್ಕರ್ ಅವರ ಕವನ ಅವರ ಬದುಕು-ಕಾಯಕಗಳ ಮಹತ್ವ ಮತ್ತು ನಿಧನದ ನಂತರದ ಪರಿಸ್ಥಿತಿಗೆ ಭಾವಪೂರ್ಣ ಸ್ಪಂದನ, ಸಿಪಿಐ(ಎಂ) ನ ಹಿರಿಯ ನಾಯಕರಲ್ಲದೆ ಯೋಗೆಂದ್ರ ಯಾದವ್, ನಟರಾಜ, ಹುಳಿಯಾರ್, ಮುರಳಿಧರ ಖಜಾನೆ, ಸನತ್ ಕುಮಾರ ಬೆಳಗಲಿ, ನವೀನ್ ಸೂರಿಂಜೆ ಯಂತಹ ಪ್ರಮುಖ ಬುದ್ಧಿಜೀವಿಗಳು, ಪತ್ರಕರ್ತರು ಬರೆದ ಲೇಖನಗಳು ಇವೆ. ಯೆಚೂರಿ ಅವರ ಬದುಕಿನ ಮತ್ತು ಭಾರತದ ರಾಜಕಾರಣಕ್ಕೆ ಕೊಡುಗೆಗಳ ವಿವಿಧ ಆಯಾಮಗಳನ್ನು ಈ ಲೇಖನಗಳು ಅನಾವರಣಗೊಳಿಸುತ್ತವೆ. ಅವರ ಬದುಕು ಕಾಯಕಗಳಿಗೆ ಸಂಬAಧಿಸಿದ ಹಲವು ಅಪರೂಪದ ಚಿತ್ರಗಳೂ ಇವೆ.
ಯೆಚೂರಿ ಅವರು ದೇಶದ ಪ್ರಗತಿಪರ ವ್ಯಕ್ತಿಗಳ, ಶಕ್ತಿಗಳ ಎಲ್ಲ ವಿಭಾಗಗಳ ಅಪಾರ ಪ್ರೀತಿ-ವಿಶ್ವಾಸಗಳನ್ನು ಗಳಿಸಿದ್ದರಷ್ಟೇ ಅಲ್ಲ, ಸೈದ್ಧಾಂತಿಕ, ತಾತ್ವಿಕ ಚಿಂತನೆಯ ಕ್ಷೇತ್ರದಲ್ಲ್ಲಿ ಅವರ ಕೊಡುಗೆ ಅಪಾರ. 1988ರಲ್ಲಿ ಸಿಪಿಐ(ಎಂ)ನ 13ನೇ ಮಹಾಧಿವೇಶನದಲ್ಲಿ ಪಕ್ಷದ ಕೇಂದ್ರೀಯ ಕಾರ್ಯದರ್ಶಿ ಮಂಡಳಿಗೆ ಆಯ್ಕೆಯಾದಾಗಿನಿಂದ ಕೊನೆಯ ವರೆಗೂ ಸಿಪಿಐ(ಎಂ)ನ ಸೈದ್ಧಾಂತಿಕ-ರಾಜಕೀಯ ನಿಲುವುಗಳನ್ನು ರೂಪಿಸುವಲ್ಲಿ ಅವರ ಕೊಡುಗೆಗಳು ಎದ್ದು ಕಾಣುವಂತವು ಎಂದು ಅವರ ಅರ್ಧ ಶತಮಾನದ ಒಡನಾಡಿ ಪ್ರಕಾಶ ಕಾರಟ್ ಹೇಳಿದ್ದಾರೆ. ಈ ಮೂಲಕ ದೇಶದ ವಿವಿಧ ಎಡ, ಪ್ರಜಾಪ್ರಭುತ್ವವಾದಿ ಮತ್ತು ಜಾತ್ಯತೀತ ವಿಭಾಗಗಳ ಮೇಲೂ ‘ಮೂರ್ತ ಪರಿಸ್ಥಿತಿಯ ಮೂರ್ತ ವಿಶ್ಲೇಷಣೆ’ ಎಂಬ ಸೂತ್ರವನ್ನು ಆಧರಿಸಿದ ಅವರ ರಾಜಕೀಯ-ಸೈದ್ಧಾಂತಿಕ ವಿಶ್ಲೇಷಣೆಗಳ ಪ್ರಭಾವವೂ ಅಪಾರ ಎನ್ನಬಹುದು.
2014ರಲ್ಲಿ ಭಾರತದ ರಾಜಕಾರಣದಲ್ಲಿ ಒಂದು ಸ್ಪಷ್ಟ ಬಲಪಂಥೀಯ ಪಲ್ಲಟದ ನಂತರದ ಸನ್ನಿವೇಶದಲ್ಲಿ ದೇಶದ ಜಾತ್ಯತೀತ-ಪ್ರಜಾಪ್ರಭುತ್ವ ನೀತಿಗಳಿಗೆ ಎದುರಾದ ಸವಾಲುಗಳನ್ನು ತಾತ್ವಿಕವಾಗಿ ಮತ್ತು ಕಾರ್ಯತಃ ಎದುರಿಸುವಲ್ಲಿ ಅವರ ಪಾತ್ರವಂತೂ ಅನನ್ಯ. ‘ಅಚ್ಛೇ ದಿನ್’ ತರುತ್ತೇವೆ ಎಂದು ಅಧಿಕಾರ ಪಡೆದ ನಂತರ, ತಮ್ಮ ನಿಜ ಉದ್ದೇಶವನ್ನು ಮರೆಮಾಚಲು ‘ನ್ಯೂ ಇಂಡಿಯ’, ‘ಅಮೃತ್ ಕಾಲ್’, ‘ವಿಕಸಿತ್ ಭಾರತ್’ ಎಂದೆಲ್ಲ ಘೋಷಣೆಗಳನ್ನು ಬದಲಿಸುತ್ತ ಅವೇ ಉಳ್ಳವರ ಪರವಾದ ನೀತಿಗಳನ್ನೇ ಅನುಸರಿಸುತ್ತ ಬಂದಿರುವುದನ್ನು ಅವರು ತಮ್ಮ ಲೇಖನಗಳಲ್ಲಿ ಬಯಲಿಗೆಳೆದಿದ್ದರು.
‘ಅಚ್ಛೇ ದಿನ್’ ಗೆ ಸವಾಲು : ನಿರ್ದಿಷ್ಟ ಪರಿಸ್ಥಿತಿಗಳ ನಿರ್ದಿಷ್ಟ ವಿಶ್ಲೇಷಣೆ’ ಪುಸ್ತಕ 2014ರ ನಂತರದ ಈ ಒಂದು ದಶಕದ ಅವರ ಇಂತಹ ಲೇಖನಗಳ ಒಂದು ಪ್ರಾತಿನಿಧಿಕ ಸಂಗ್ರಹ. ಇದರಲ್ಲಿ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ ಸರಕಾರದ ಕ್ರಮಗಳ ವಿಶ್ಲೇಷಣೆಗಳಿದ್ದರೆ, ಎರಡನೇ ಭಾಗದಲ್ಲಿ ಇಂತಹ ಕ್ರಮಗಳನ್ನು ವಿಮರ್ಶಿಸಿ ಅವಕ್ಕೆ ಸವಾಲೊಡ್ಡುವ ಬರವಣಿಗೆಗಳಿವೆ.
ಇದನ್ನೂ ನೋಡಿ : ಕರ್ನಾಟಕದ ಜನ ಚಳುವಳಿಯಲ್ಲಿ ಸೀತಾರಾಂ ಯೆಚೂರಿ