ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಚುನಾವಣೆಗ ದಿನಾಂಕ ಘೋಷಣೆಯಾಗಿದ್ದರೂ ಚುನಾವಣಾ ಆಯೋಗ ಹಿರಿಯ ನಾಗರೀಕರು, ಅಂಗವಿಕಲರಿಗೆ ವಿಶೇಷ ಸೌಲಭ್ಯ ಕಲ್ಪಿಸಿರುವುದರಿಂದ ಹಿರಿಯ ನಟಿ ಲೀಲಾವತಿಯವರು ಶನಿವಾರ ಮತದಾನ ಮಾಡಿದ್ದಾರೆ, ಈ ಮೂಲಕ ಮೊದಲ ಮತದಾನ ಮಾಡಿದ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಎಂಬತ್ತು ವರ್ಷ ತುಂಬಿದ ನಾಗರೀಕರು, ಅಂಗವಿಕಲರು, ಪತ್ರಕರ್ತರು ಬ್ಯಾಲಟ್ ಪೇಪರ್ ಮೂಲಕ ಇಂದಿನಿಂದ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಇದರ ಅಡಿಯಲ್ಲಿ ಹಿರಿಯ ನಟಿ ಲೀಲಾವತಿ ಅವರು, ನೆಲಮಂಗಲ ತಾಲೂಕಿನ ಮೈಲನಹಳ್ಳಿಯ ಮನೆಯಲ್ಲಿ ಮತದಾನ ಮಾಡಿದ್ದಾರೆ. ಮಗ ವಿನೋದ್ ರಾಜ್ ಸಹಾಯದಿಂದ ಲೀಲಾವತಿಯವರು ಮನೆಯಲ್ಲಿ ಮತದಾನ ಮಾಡಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಲೀಲಾವತಿ ಅವರು, ‘ಚುನಾವಣಾ ಆಯೋಗ ಈ ಅವಕಾಶ ಕಲ್ಪಿಸಿದ್ದು ನನ್ನಂತಹ ಹಿರಿಯರಿಗೆ ಅನುಕೂಲವಾಗಿದೆ.
ಇದನ್ನೂ ಓದಿ : ಜನಮತ 2023 : ಏ.29 ರಿಂದ ಮೇ. 6 ರವರೆಗೆ 80 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲರು ಮನೆಯಿಂದಲೇ ಮತದಾನ ಮಾಡಲು ಅವಕಾಶ