ಕೆಂಪು ಪುಸ್ತಕ ದಿನ | ‘ಯು.ಎಸ್ ಸಾಮ್ರಾಜ್ಯಾಶಾಹಿ- ಭಾರತದ ಜನತೆಯ ಶತ್ರು’ ದಾಖಲೆ ಮಾರಾಟ ಕಂಡ ಪುಸ್ತಕ

ಬೆಂಗಳೂರು : ಕೆಂಪು ಪುಸ್ತಕದ ದಿನದ ಅಂಗವಾಗಿ ಫೆ 21 ರಂದು ‘ಯು.ಎಸ್ ಸಾಮ್ರಾಜ್ಯಾಶಾಹಿ- ಭಾರತದ ಜನತೆಯ ಶತ್ರು’ ಪುಸ್ತಕವು ರಾಜ್ಯ ವ್ಯಾಪಿ ಬಿಡುಗಡೆಯಾಯಿತು. ಬಿಡುಗಡೆಯಾದ ದಿನವೇ ದಾಖಲೆಯ ಮಾರಾಟ ಕಂಡಿದೆ. ಈ ಪುಸ್ತಕವನ್ನು ಜಾಗತಿಕ ಬೆಳವಣಿಗೆಗಳ ವಿಶ್ಲೇಷಕರಾದ ಎನ್‌ ಕೆ ವಸಂತರಾಜ್‌ ಬರೆದಿದ್ದು, ಇದನ್ನು ಕ್ರಿಯಾ ಮಾಧ್ಯಮ ಪ್ರಕಟಿಸಿದೆ. ಬೆಂಗಳೂರು

ಕರ್ನಾಟಕದ ಎಲ್ಲಾ ಜಿಲ್ಲೆಗಳ ಪ್ರಮುಖ ಕೇಂದ್ರಗಳಲ್ಲಿ ಪುಸ್ತಕ ಬಿಡುಗಡೆಯಾಗಿದ್ದು. 16, 609 ಪ್ರತಿಗಳನ್ನು ಎಡಪಕ್ಷಗಳು, ಜನಪರ ಸಂಘಟನೆಗಳು, ವಿದ್ಯಾರ್ಥಿ, ಯುವಜನ, ಮಹಿಳೆಯರು ಪುಸ್ತಕಗಳನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ : ಸಾಮ್ರಾಜ್ಯಶಾಹಿ ತೊಲಗಿ, ಸಮಾಜವಾದ ಜಾರಿಯಾದರೆ ಶ್ರಮಿಕರಿಗೆ ತಮ್ಮ ಶ್ರಮದ ಪ್ರತಿಫಲ – ಬಸವರಾಜ ಪೂಜಾರ

ಮೈಸೂರಿನಲ್ಲಿ ಈ ಪುಸ್ತಕವನ್ನು ಚಿಂತಕ ಪ್ರೊ. ಎನ್.ಎಸ್. ವೇಣುಗೋಪಾಲ್ ಬಿಡುಗಡೆ ಮಾಡಿದರು. ಯು.ಎಸ್ ಸಾಮ್ರಾಜ್ಯಶಾಹಿ ಎಂದರೆ ನಿರಂತರ ಯುದ್ಧ, ಸಾವು- ನೋವು, ನಾಶ, ಸಂಪನ್ಮೂಲಗಳ ಪೋಲು ಎಂಬಂತಾಗಿದೆ. ಎಲ್ಲಾ ದೇಶಗಳ ಶೋಷಣೆ, ಲೂಟಿ ಮಾಡುತ್ತಿದೆ. ಇವನ್ನು ಮರೆಮಾಚಲು ಕೋಮುವಾದ, ಮತಾಂಧತೆ ಮುನ್ನೆಲೆಗೆ ತರಲಾಗುತ್ತಿದೆ. ಅಮೆರಿಕನ್ ಸಾಮ್ರಾಜ್ಯಶಾಹಿ ಇಡೀ ಜಗತ್ತಿನ ಶತ್ರು’ ಎಂದು ದೂರಿದರು.

ಉಡುಪಿಯಲ್ಲಿ ಈ ಪುಸ್ತಕವನ್ನು ಚಿಂತಕ ಪ್ರೊ. ಫಣಿರಾಜ್, ಬಿಡುಗಡೆ ಮಾಡಿ ಮಾತನಾಡಿದರು. ಯು.ಎಸ್‌ ಸಾಮ್ರಾಜ್ಯಶಾಹಿಯು ಸಮಾಜವಾದಿ ರಾಷ್ಟ್ರಗಳ ಸಂಪತ್ತನ್ನು ಲೂಟಿ ಮಾಡಲು ನಿರಂತರ ಮಿಲಿಟರಿ ದಾಳಿಗಳು ಮತ್ತು ರಾಜಕೀಯ ಒತ್ತಡಗಳನ್ನು ಬಳಸುತ್ತಿದೆ ಎಂದು ಆರೋಪಿಸಿದರು.

ಮಂಗಳೂರಿನಲ್ಲಿ ಚಿಂತಕ, ಪ್ರೊ. ರಾಜೇಂದ್ರ ಉಡುಪ ಪುಸ್ತಕವನ್ನು ಬಿಡುಗಡೆ ಮಾಡಿದರು. ಎರಡನೇ ಮಹಾಯುದ್ಧದ ಬಳಿಕ ಬ್ರಿಟಿಷ್ ವಸಾಹತುಶಾಹಿಯ ಬದಲಿಗೆ ಯುಎಸ್‌ ದೊಡ್ಡಣ್ಣನಾಗಿ ವರ್ತಿಸುತ್ತಿದೆ. ಸೋವಿಯತ್ ಯೂನಿಯನ್‌ನ ಕುಸಿತದ ನಂತರ ಅಮೆರಿಕಾ ವರ್ತನೆ ಅತಿಯಾಗಿದೆ. ಭಾರತದ ವರ್ತಮಾನದ ಬಿಕ್ಕಟ್ಟುಗಳಲ್ಲಿ ಅಮೆರಿಕಾದ ಪಾತ್ರವನ್ನು ನಿರಾಕರಿಸಲು ಸಾಧ್ಯವಿಲ್ಲ. ಭಾರತದ ಜನತೆಯ ನೈಜ ಶತ್ರುವಾದ ಅಮೆರಿಕನ್ ಸಾಮ್ರಾಜ್ಯಶಾಹಿಯನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯವಾಗಬೇಕು ಎಂದರು.

ಆನೇಕಲ್ ತಾಲ್ಲೂಕಿನ ಸನ್‌ಸೇರಾ ಕಾರ್ಮಿಕರ ಸಂಘದ 6 ಘಟಕಗಳಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ಸಿಪಿಐ(ಎ) ರಾಜ್ಯ ಕಾರ್ಯದರ್ಶಿ ಡಾ. ಕೆ.ಪ್ರಕಾಶ್‌ ಬಿಡುಗಡೆ ಮಾಡಿದರು. ನೂರಾರು ಸಂಖ್ಯೆಯ ಕಾರ್ಮಿಕರು ಉತ್ಸಾಹದಿಂದ ಭಾಗವಹಿಸಿದ್ದರು.

ಸಿಐಟಿಯು ರಾಜ್ಯಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಅಖಿಲ ಭಾರತ ಅಧ್ಯಕ್ಷರಾದ ಹೇಮಲತಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ವರಲಕ್ಷ್ಮಿ, ರಾಜ್ಯಾಧ್ಯಕ್ಷ ಮೀನಾಕ್ಷಿ ಸುಂದರಂ, ರಾಷ್ಟ್ರೀಯ ನಾಯಕ ಕೆ.ಎನ್.‌ ಉಮೇಶ್‌ ಸೇರಿದಂತೆ ಅನೇಕ ಕಾರ್ಮಿಕ ನಾಯಕರು ಭಾಗವಹಿಸಿದ್ದರು.

ವಿಜಯನಗರ ಜಿಲ್ಲೆಯ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಖಾನಾ ಹೊಸಳ್ಳಿಯಲ್ಲಿ ಪುಸ್ತಕ ಬಿಡುಗಡೆ ನಡೆಯಿತು. ಕೊಪ್ಪಳ ಹಲವೆಡೆ ಪುಸ್ತಕವನ್ನು ಬಿಡುಗಡೆ ಮಾಡಿ. ವಿಡಿಯೋಗಳನ್ನು ಪ್ರದರ್ಶಿಸಲಾಯಿತು. ಬೀದರ್‌, ಯಾದಗಿರಿ, ರಾಯಚೂರು ಬಳ್ಳಾರಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ಬಿಡುಗಡೆಯಲ್ಲಿ ಭಾಗವಹಿಸಿದ್ದ ಸಭಿಕರು ಓದುವ ಮೂಲಕ ಚರ್ಚೆ ಸಂವಾದಗಳನ್ನು ನಡೆಸಿದರು. ಅಲ್ಲಲ್ಲಿ ವಿಡಿಯೋ , ಆಡಿಯೋ ಪ್ರದರ್ಶನ ನಡೆಯಿತು.

ಕಲಬುರ್ಗಿಯಲ್ಲಿ ಪುಸ್ತಕ ಬಿಡುಗಡೆಯ ಜೊತೆ ಹಾಡು, ಸಂವಾದ, ವಿಡಿಯೋ ಪ್ರದರ್ಶನ ನಡೆಯಿತು. ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಲ್ಲೂ ಪುಸ್ತಕ ಬಿಡುಗಡೆಗೊಂಡು ಚರ್ಚೆ ಸಂವಾದಗಳು ನಡೆದವು.

ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಳವಳ್ಳಿ, ಹಾಸನದಲ್ಲಿ ಪುಸ್ತಕ ಬಿಡಯಗಡೆ ಮಾಡಲಾಯಿತು. ಕಾರ್ಮಿಕರು, ಕೂಲಿಕಾರರು, ರೈತರು, ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಿಡುಗಡೆ ಸಂದರ್ಭದಲ್ಲಿ ಚರ್ಚೆ- ಸಂವಾದ ಕಾರ್ಯಕ್ರಮಗಳು ನಡೆದವು.

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯಲ್ಲೂ ಪುಸ್ತಕ ಬಿಡುಗಡೆಗೊಂಡಿತು. ಉತ್ತರ ಕನ್ನಡದಲ್ಲಿ ಪ್ರಗತಿಪರ ಸಾಹಿತಿಗಳು, ಚಿಂತಕರು ಪುಸ್ತಕ ಬಿಡುಗಡೆಯಲ್ಲಿ ಭಾಗಿಯಾಗಿದ್ದರು.

ಬೆಂಗಳೂರು, ದಕ್ಷಿಣ, ಬೆಂಗಳೂರು ಉತ್ತರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕೆ.ಆರ್.‌ ಪುರಂ, ದಾಸರಹಳ್ಳಿ, ಕೆಂಗೇರಿ, ಜಯನಗರ, ಬೊಮ್ಮನಹಳ್ಳಿ, ಮಡಿವಾಳದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ವಿಡಿಯೋ ಪ್ರದರ್ಶನ, ಸಂವಾದ ಕಾರ್ಯಕ್ರಮಗಳು ನಡೆದವು.

ಒಟ್ಟಿನಲ್ಲಿ ಕೆಂಪು ಪುಸ್ತಕದ ದಿನದ ಭಾವಗವಾಗಿ ರಾಜ್ಯವ್ಯಾಪಿ ಪುಸ್ತಕ ಮಾರಾಟ ನಡೆದು 16 ಸಾವಿರಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗುವುದರ ಜೊತೆಗೆ ಯು.ಎಸ್‌. ಸಾಮ್ರಾಜ್ಯಶಾಹಿ ಭಾರತದ ಜನತೆಯ ಶತೃ ಹೇಗೆ ಎಂಬುದನ್ನು ಚರ್ಚೆ, ಸಂವಾದಗಳ ಮೂಲಕ ಹೊಸ ಸಂಚಲನವನ್ನು ಸೃಷಿಸಿದೆ ಎಂದು ಹೇಳಬಹುದು.

ಇದನ್ನೂ ನೋಡಿ : “ಏನಿದು ‘ಕೆಂಪು ಪುಸ್ತಕ’? ಅದರ ವಿಶೇಷವೇನು?” – ಡಾ. ಕೆ.ಪ್ರಕಾಶ್‌ | ಯು.ಎಸ್‌. ಸಾಮ್ರಾಜ್ಯಶಾಹಿ Janashakthi Media

Donate Janashakthi Media

Leave a Reply

Your email address will not be published. Required fields are marked *