ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ನಡೆದಿದ್ದ ಕೋಮು ಗಲಭೆಗಳಲ್ಲಿ ಬಂಧಿತರಾಗಿರುವ ಅಮಾಯಕ ಯುವಕರ ಮೇಲಿನ ಕೇಸುಗಳನ್ನು ವಾಪಸ್ ಪಡೆಯಲು ಗೃಹ ಸಚಿವ ಜಿ.ಪರಮೇಶ್ವರ್ ಅವರು ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಶಿಫಾರಸು ಮಾಡಿರುವ ವಿಚಾರದ ಬಗ್ಗೆ ಬಿಜೆಪಿ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ:ಗೋ ಪೂಜೆ ನಾನು ಮಾಡಿದ್ದೆ; ಆದರೆ ಆರ್ಥಿಕತೆ, ನಂಬಿಕೆ ಬೇರೆಬೇರೆ: ಗೃಹ ಸಚಿವ ಪರಮೇಶ್ವರ್
ಈ ಬಗ್ಗೆ ಶಿಫಾರಸು ಪತ್ರ ಹಂಚಿಕೊಂಡು ಬುಧವಾರ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಒಂದು ಕೋಮಿನ ಕಮ್ಯುನಲ್ ಅಪರಾಧಿಗಳಿಗೆ ನಮ್ಮಲ್ಲಿ ಕ್ಲೀನ್ ಚಿಟ್ ನೀಡಲಾಗುವುದೆಂದು ಬೋರ್ಡ್ ಹಾಕಿಕೊಂಡು ಪರಮೇಶ್ವರ್ ಕಾರ್ಯನಿರ್ವಹಿಸುತ್ತಿರುವಂತಿದೆ ಎಂದು ಟೀಕಿಸಿದೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೊಂದಿದೆಯೇ? ಈ ಸರ್ಕಾರ ಜಿಹಾದಿಗಳ,ಪಿಎಫ್‌ಐ ಭಯೋತ್ಪಾದಕರ ತಾಳಕ್ಕೆ ಕುಣಿಯುತ್ತಿರುವುದನ್ನು ಈ ಪತ್ರ ರುಜುವಾತುಪಡಿಸುತ್ತಿದೆ.
ಜಿಹಾದಿ ಸರ್ಕಾರದ ಎಲ್ಲಾ ಬಗೆಯ ಹಿಂದೂ ವಿರೋಧಿ ನೀತಿ-ನಿಲುವುಗಳ ವಿರುದ್ಧ ಬಿಜೆಪಿ ಹೋರಾಟ ಮುಂದುವರೆಸಲಿದೆ ಎಂದು ಟ್ವೀಟ್ ಮಾಡಿದೆ.ಜುಲೈ-19 ರಂದು ಜಿ.ಪರಮೇಶ್ವರ್ ಅವರು ಬರೆದಿರುವ ಪತ್ರದಲ್ಲಿ, ಡಿ.ಜೆ.ಹಳ್ಳಿ,ಕೆ.ಜಿ ಹಳ್ಳಿ,ಶಿವಮೊಗ್ಗ ಹಾಗೂ ಹುಬ್ಬಳ್ಳಿಯಲ್ಲಿ ನಡೆದಿರುವ ಗಲಭೆಗಳಲ್ಲಿ ಪೊಲೀಸರು ಕೆಲವು ಅಮಾಯಕ ಯುವಕರನ್ನು, ವಿದ್ಯಾರ್ಥಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿರುವ ಸಾಧ್ಯತೆ ಇದೆ. ಹೀಗಾಗಿ ಇಂತಹವರ ಮೇಲಿನ ಕೇಸುಗಳನ್ನು ವಾಪಸ್ ಪಡೆಯಬೇಕೆಂದು ಶಾಸಕ ತನ್ವಿರ್ ಸೇಠ್ ಮನವಿ ಮಾಡಿಕೊಂಡಿದ್ದಾರೆ. ಈ ಮನವಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಟಿಪ್ಪಣಿ ರೂಪದಲ್ಲಿ ಪರಮೇಶ್ವರ್ ಪತ್ರ ಕಳುಹಿಸಿದ್ದರು.
‘ಒಂದು’ ಕೋಮಿನ ಕಮ್ಯುನಲ್ ಅಪರಾಧಿಗಳಿಗೆ ನಮ್ಮಲ್ಲಿ ಕ್ಲೀನ್ ಚಿಟ್ ನೀಡಲಾಗುವುದು ಎಂದು ಬೋರ್ಡ್ ಹಾಕಿಕೊಂಡು @DrParameshwara ರವರು ಕಾರ್ಯನಿರ್ವಹಿಸುತ್ತಿರುವಂತಿದೆ!
ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೊಂದಿದೆಯೇ?
ಈ ಸರಕಾರ ಜಿಹಾದಿಗಳ, ಪಿಎಫ್‌ಐ ಭಯೋತ್ಪಾದಕರ ತಾಳಕ್ಕೆ ಕುಣಿಯುತ್ತಿರುವುದು ಈ ಪತ್ರ ಋುಜುವಾತು ಪಡಿಸುತ್ತಿದೆ.… pic.twitter.com/FVjeoIbMys
— BJP Karnataka (@BJP4Karnataka) July 26, 2023