ನವದೆಹಲಿ: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಮೂವರು ನ್ಯಾಯಾಂಗ ಅಧಿಕಾರಿಗಳನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿದೆ. ಏಪ್ರಿಲ್ 14ರಂದು ನಡೆದ ಸಭೆಯ ಬಳಿಕ ಈ ಶಿಫಾರಸ್ಸುಗಳನ್ನು ಕೊಲಿಜಿಯಂ ಮಾಡಿದೆ.
ನ್ಯಾಯಾಂಗ ಅಧಿಕಾರಿಗಳಾದ ರಾಜೇಶ್ವರಿ ನಾರಾಯಣ ಹೆಗ್ಡೆ, ಕೆ ಗಣೇಶ್ ಶಾಂತಿ ಮತ್ತು ಮಹದೇವಪ್ಪ ಬೃಂಗೇಶ್ ಅವರ ಪದೋನ್ನತಿಗೆ ಶಿಫಾರಸ್ಸು ಮಾಡಲಾಗಿದೆ.
ಇದನ್ನೂ ಓದಿ: ಎಸ್‌ಐಆರ್: ನಾಗರಿಕರ ಸಾಂವಿಧಾನಿಕ ಹಕ್ಕನ್ನು ನಿರಾಕರಿಸಿ ಬಿಡಬಹುದೇ?
ಕರ್ನಾಟಕ ಹೈಕೋರ್ಟ್‌ನಲ್ಲಿ 62 ನ್ಯಾಯಮೂರ್ತಿಗಳ ಹುದ್ದೆಗಳಿದ್ದು, ಸದ್ಯ 45 ನ್ಯಾಯಮೂರ್ತಿಗಳ ಹುದ್ದೆಗಳು ಮಾತ್ರ ಭರ್ತಿಯಾಗಿವೆ.
ಇದನ್ನೂ ನೋಡಿ: ಟಿಪ್ಪುವನ್ನು ವಿರೋಧಿಸುತ್ತಿರುವರು ಬ್ರಿಟಿಷರ ಸ್ನೇಹಿತರು: ಡಾ.ಬಂಜಗೆರೆ ಜಯಪ್ರಕಾಶ್ Janashakthi Media
