ಬೆಂಗಳೂರು: ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳ ಪುಟವನ್ನು ಹಿಂದಿ ಭಾಷೆಯಲ್ಲಿ ತೆರೆದಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
‘ಈ ಪುಟವನ್ನು ಅಳಿಸಿ ಇಲ್ಲದಿದ್ದರೆ ನಾವು ನಿಮ್ಮನ್ನು ಬೆಂಬಲಿಸುವುದಿಲ್ಲ’ ಎಂದು ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ. ಖಾತೆಯನ್ನು ಗಮನಿಸಿದಾಗ, ಕಳೆದ ಅಕ್ಟೋಬರ್ ತಿಂಗಳಲ್ಲಿ ‘ಎಕ್ಸ್’ನಲ್ಲಿ ಈಗಾಗಲೇ ಇರುವ ಆರ್ಸಿಬಿಯ ಅಧಿಕೃತ ಖಾತೆಯೊಂದಿಗೆ ಕನ್ನಡ ಹಾಗೂ ಹಿಂದಿಯಲ್ಲಿ ನೂತನ ಖಾತೆ ತೆರೆದಿರುವುದು ಗಮನಕ್ಕೆ ಬರುತ್ತದೆ. ಆದರೆ ಹಿಂದಿಯಲ್ಲಿ ಖಾತೆ ತೆರೆದಿರುವುದು ಹಾಗೂ ಹಿಂದಿಯಲ್ಲಿ ಪೋಸ್ಟ್ ಮಾಡಿರುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಪತಿಯ ಸಾವಿನ ಸುದ್ದಿ ಕೇಳಿ ಪತ್ನಿ ಹೃದಯಾಘಾತದಿಂದ ಸಾವು: ಸಾವುನಲ್ಲೂ ಒಂದಾದ ದಂಪತಿಗಳು
ಐಪಿಎಲ್ ಹರಾಜಿನಲ್ಲಿ ಆರ್ಸಿಬಿ ತಂಡಕ್ಕೆ ಸಂಬಂಧಪಟ್ಟಂತೆ ಹೊಸದಾಗಿ ಹಿಂದಿಯಲ್ಲಿ ಪೋಸ್ಟ್ ಮಾಡಲಾಗಿತ್ತು. ‘ಹಿಂದಿಗೂ ಬೆಂಗಳೂರಿಗೂ ಯಾವುದೇ ಸಂಬಂಧವಿಲ್ಲ. ಹಿಂದಿ ಹೇರಿಕೆಯನ್ನು ನಿಲ್ಲಿಸಿ’ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ. ಆಕಾಶ್ ಪಾಟೀಲ್ ಎನ್ನುವವರು ” RCB in Hindi ಅಂತ ಬೇರೆ ಪೇಜ್ ಇದೆ ಇವ್ರದ್ದು.. ರಾಜ್ಯೋತ್ಸವದ ದಿನ ಕನ್ನಡ ಪೇಜ್ ತೆರೆದಿದ್ದೆ ದೊಡ್ಡ ಸಾಧನೆ ಅನ್ನೋ ತರ ಬಿಲ್ಡಪ್ ಕೊಟ್ರು. ಎಂತ ಹಡಬೆ…. ಇವ್ರು ಎಂದು ಪೋಸ್ಟ್ ಮಾಡಿದ್ದಾರೆ.
पेश है धुरंधरों से सजी आईपीएल 2️⃣0️⃣2️⃣5️⃣ की हमारी दमदार टीम! ❤️🔥#PlayBold #IPL2025 #IPLAuction #BidForBold #RCB #Hindi #Explore pic.twitter.com/R3ZbmmDRAZ
— Royal Challengers Bengaluru Hindi (@RCBinHindi) November 25, 2024
‘ಹಿಂದಿ ಬಳಸೋಕೆ ಒಂದು ನೆಪ ಬೇಕಿತ್ತು. ಅದಕ್ಕೆ ಕನ್ನಡಕ್ಕಾಗಿ ಒಂದು ಖಾತೆ ತೆರೆದು ಜೊತೆಗೆ ಹಿಂದಿ ಅಂತ ಇನ್ನೊಂದು ತೆರೆಯಲಾಗಿದೆ. ವಾ! ಈ ಶೋಕಿ ಎಲ್ಲ ಬೇಡ. ಮೊದಲು ಈ ಖಾತೆ ಅಳಿಸಿ. ಅಧಿಕೃತ ಖಾತೆಯಲ್ಲೇ ಕನ್ನಡ ಬಳಸಿ’ ಎಂದು ಮತ್ತೊಬ್ಬ ಅಭಿಮಾನಿ ಪ್ರತಿಕ್ರಿಯೆ ನೀಡಿದ್ದಾರೆ. ‘ಹಿಂದಿ ಭಾಷಿಕರಿಗೆ ಯಾಕೆ ಬಕೆಟ್ ಹಿಡಿತೀರಾ’ ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ. ಸೌದಿ ಅರೇಬಿಯಾದಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲೂ ಸ್ಥಳೀಯ ಆಟಗಾರರಿಗೆ ಮನ್ನಣೆ ನೀಡಲಾಗಿಲ್ಲ ಎಂದು ಅಭಿಮಾನಿಗಳು
ದೂರಿದ್ದಾರೆ.
ಇದನ್ನೂ ನೋಡಿ : ಆರ್.ಬಿ. ಮೋರೆ | ಈ ಪುಸ್ತಕ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದರಿಂದ ಸರಳವಾಗಿ ಅನುವಾದಿಸಿದೆ – ಅಬ್ದುಲ್ ರೆಹಮಾನ ಪಾಷಾ