“ರೈತರ ಆದಾಯಗಳನ್ನು ದ್ವಿಗುಣಗೊಳಿಸುವ ಬದಲು ಅವರ ಸಂಕಟಗಳನ್ನೇ ದ್ವಿಗುಣಗೊಳಿಸುತ್ತಿದ್ದಾರೆ“
ದೆಹಲಿ : ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ರಸಗೊಬ್ಬರ ಕಂಪನಿಗಳಿಗೆ ರಾಸಾಯನಿಕ ಗೊಬ್ಬರಗಳ ಬೆಲೆಗಳಲ್ಲಿ ವಿಪರೀತ ಏರಿಕೆ ಮಾಡಲು ಅವಕಾಶ ನೀಡಲು ನಿರ್ಧರಿಸಿದೆ. ಇದನ್ನು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್)ಬಲವಾಗಿ ಖಂಡಿಸಿದೆ.
ಡಿಎಪಿ (18-46-00) 2020ರಲ್ಲಿ ಮೆಟ್ರಿಕ್ ಟನ್‍ಗೆ 24,000 ರೂ. ಇದ್ದದ್ದು ಈಗ 38,000 ರೂ.ಗೆ ಏರಿದೆ. ಅಂದರೆ ಮೆಟ್ರಿಕ್ ಟನ್‍ಗೆ 14,000ರೂ. ನಂತೆ ಏರಿದೆ. 50 ಕೆಜಿ ಚೀಲಕ್ಕೆ 1200 ರೂ. ತರುತ್ತಿದ್ದ ರೈತರು ಈಗ 1900 ರೂ. ತರಬೇಕಾಗಿದೆ.
ಎನ್‍ಪಿಕೆ ಕಾಂಪ್ಲೆಕ್ಸ್ ಗೊಬ್ಬರದ ಬೆಲೆಯಲ್ಲೂ ವಿಪರೀತ ಏರಿಕೆಯಾಗಿದೆ. ಎನ್‍ಪಿಕೆ – 1 (10-26-26) ಬೆಲೆಗಳು ಮೆಟ್ರಿಕ್ ಟನ್‍ಗೆ 23,500ರೂ. ನಿಂದ 35,500ರೂ. ಗೇರಿದೆ. ಎನ್‍ಪಿಕೆ – 2 (12-32-16) ರ ಬೆಲೆ 23,700 ರೂ. ನಿಂದ 36,000 ರೂ. ಗೇರಿದೆ. ಅಂದರೆ ಮೆಟ್ರಿಕ್ ಟನ್‍ಗೆ 12,3000 ರೂ. ಏರಿಕೆ. ಎನ್‍ಪಿ (20-20–0-13) ಬೆಲೆಯೂ ಮೆಟ್ರಿಕ್ ಟನ್‍ಗೆ 18,500 ರೂ. ನಿಂದ 27,000 ರೂ, ಗೆ ಏರಿದೆ. ಈ ಎಲ್ಲ ಬೆಲೆ ಏರಿಕೆಗಳನ್ನು ತಕ್ಷಣವೇ ಹಿಂದಕ್ಕೆ ತಳ್ಳಬೇಕು ಎಂದು ಎಐಕೆಎಸ್ ಆಗ್ರಹಿಸಿದೆ.
ಬೆಲೆಗಳನ್ನು ಏರಿಸುವುದಿಲ್ಲ, ಏಕೆಂದರೆ ರೈತರಿಗೆ ಕೃಷಿ ಲಾಗುವಾಡುಗಳ ವೆಚ್ಚವನ್ನು ಇಳಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದ ಎರಡೇ ತಿಂಗಳಲ್ಲಿಇಫ್ಕೊ ಈ ಮಾಹಿತಿಯನ್ನು ಕೊಟ್ಟಿರುವುದು ಒಂದು ವಿಡಂಬನೆ ಎಂದು ಎಐಕೆಎಸ್ ವರ್ಣಿಸಿದೆ. ಸರಕಾರ ರಸಗೊಬ್ಬರ ವಲಯದಲ್ಲಿ ನಿಯಂತ್ರಣಗಳನ್ನು ತೆಗೆಯುವುದನ್ನು ಉತ್ತೇಜಿಸಿರುವುದರಿಂದ ಇದು ಸಂಭವಿಸಿದೆ. ರಸಗೊಬ್ಬರ ಕಂಪನಿಗಳು ರಸಗೊಬ್ಬರ ಸಬ್ಸಿಡಿಗಳನ್ನು ರೈತರಿಗೆ ವರ್ಗಾಯಿಸದೆಯೇ ಬೆಲೆಗಳನ್ನು ನಿಗದಿ ಮಾಡುತ್ತವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ಸರಕಾರ ರೈತರ ಆದಾಯಗಳನ್ನು ದ್ವಿಗುಣಗೊಳಿಸಲು ನೆರವಾಗುವ ಬದಲು ಅವರ ಸಂಕಟಗಳನ್ನೇ ದ್ವಿಗುಣಗೊಳಿಸುತ್ತಿದ್ದಾರೆ ಎಂದು ಎಐಕೆಎಸ್ ಖೇದ ವ್ಯಕ್ತಪಡಿಸಿದೆ.
ರೈತರು ಈಗಾಗಲೇ ಅಯೋಜಿತ ಲಾಕ್‍ಡೌನ್ ಮತ್ತು ಈಗಾಗಲೇ ಏರುತ್ತಿರುವ ಡೀಸೆಲ್ ಬೆಲೆಗಳು ಮತ್ತು ಇತರ ಕೃಷಿ ಲಾಗುವಾಡುಗಳ ಬೆಲೆ ಹೆಚ್ಚಳಗಳಿಂದ ಆಗುತ್ತಿರುವ ಉತ್ಪಾದನಾ ವೆಚ್ಚಗಳ ಏರಿಕೆಯಿಂದ ಅಪಾರ ನಷ್ಟಗಳನ್ನು ಅನುಭವಿಸುತ್ತಿರುವ ಸಮಯದಲ್ಲಿ ಈ ತೀವ್ರ ಏರಿಕೆಗಳು ಬಂದಿವೆ. ಅಲ್ಲದೆ ಅಂತರ್ರಾಷ್ಟ್ರೀವಾಗಿ ಕಚ್ಚಾತೈಲ ಬೆಲೆಗಳು ಕೆಳಮಟ್ಟದಲ್ಲಿರುವ ಸಮಯದಲ್ಲಿ ಬಂದಿದೆ ಎಂದು ಎಐಕೆಎಸ್ ಹೇಳಿದೆ.
ಈ ಕೆಳಗಿರುವ ಕೋಷ್ಟಕವನ್ನು ನೋಡಿ:
ಉತ್ಪನ್ನ |
ಎಂ.ಆರ್.ಪಿ. 2020ರಲ್ಲಿ |
ಹೊಸ ಬೆಲೆಗಳು (2021) |
||||
ರೂ/ಮೆ.ಟನ್ |
ರೂ./50 ಕೆಜಿ ಚೀಲ | ರೂ/ಮೆ.ಟನ್ |
ರೂ./50 ಕೆಜಿ ಚೀಲ |
|||
ಡಿಎಪಿ |
24,000 | 1200 | 38,000 | 1900 | ||
ಎನ್‍ಪಿಕೆ-1 |
23,500 | 1175 | 35,500 |
1775 |
||
ಎನ್‍ಪಿಕೆ-2 |
23,700 | 1185 | 36,000 |
1800 |
||
ಎನ್‍ಪಿ | 18,500 | 925 | 27,000 |
1350 |
ಅಖಿಲ ಭಾರತ ಕಿಸಾನ್ ಸಭಾ ರಸಗೊಬ್ಬರ ಬೆಲೆಗಳಲ್ಲಿ ಈ ಅನ್ಯಾಯಯುತ ಏರಿಕೆಯ ವಿರುದ್ಧ ಪ್ರತಿಭಟಿಸಿ ಎದ್ದು ನಿಲ್ಲಬೇಕು ಎಂದು ತನ್ನ ಎಲ್ಲ ಘಟಕಗಳಿಗೆ ಕರೆ ನೀಡಿದೆ.