ಬಿಜೆಪಿಗೆ ರಾಜೀನಾಮೆ ನೀಡಿದ ರಂಜಿತ್ ಸಿಂಗ್‌ ಚೌಟಾಲಾ ಮತ್ತು ಶಾಸಕ ಲಕ್ಷ್ಮಣ್ ದಾಸ್ ನಾಪಾ

ಚಂಡೀಗಢ: ಸಚಿವ ರಂಜಿತ್ ಸಿಂಗ್‌ ಚೌಟಾಲಾ ಮತ್ತು ಶಾಸಕ ಲಕ್ಷ್ಮಣ್ ದಾಸ್ ನಾಪಾ ಹರಿಯಾಣ ವಿಧಾನಸಭೆ ಚುನಾವಣೆಗೆ ಟಿಕೆಟ್ ನಿರಾಕರಿಸಿದ್ದರಿಂದ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಆಡಳಿತಾರೂಢ ಬಿಜೆಪಿ 67 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ ಒಂದು ದಿನದ ನಂತರ, ಪಕ್ಷಕ್ಕೆ ಬಂಡಾಯ ಎದುರಾಗಿದೆ.ರಾಜೀನಾಮೆ

ಮಾಜಿ ಉಪಪುಧಾನಿ ದೇವಿ ಲಾಲ್ ಅವರ ಪುತ್ರ ಇಂಧನ ಮತ್ತು ಜೈಲು ಸಚಿವ ರಂಜಿತ್‌ ಚೌತಾಲಾ (79) ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರ.
ನಾಪಾ ಅವರು ಟಿಕೆಟ್ ನಿರಾಕರಿಸಿದ್ದರಿಂದ ಪಕ್ಷವನ್ನು ತೊರೆದರು. ಮಾಜಿ ಸಚಿವ ಕರಣ್‌ ದೇವ್ ಕಾಂಬೋಜ್ ತಮ್ಮ ಅಭ್ಯರ್ಥಿಯನ್ನು ಪಕ್ಷ ಕಡೆಗಣಿಸಿದ್ದರಿಂದ ರಾಜ್ಯ ಬಿಜೆಪಿಯ ಒಬಿಸಿ ಮೋರ್ಚಾ ಮುಖ್ಯಸ್ಥ ಸ್ನಾನದಿಂದ ಕೆಳಗಿಳಿದರು.

ಪಕ್ಷವನ್ನು ತೊರೆದ ನಾಪಾ, ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರನ್ನು ದೆಹಲಿಯ ನಿವಾಸದಲ್ಲಿ ಭೇಟಿಯಾಗಿದ್ದು, ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್‌ಗೆ ಸೇರುವುದಾಗಿ ಹೇಳಿದರು.
‘ನಾನು ಬಿಜೆಪಿಯೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇನೆ. ಅವರು ನನಗೆ ಹಿಸಾರ್ ನಿಂದ ಲೋಕಸಭೆ ಟಿಕೆಟ್ ನೀಡಿದರು. ಅವರು ಯಾರ ಸಲಹೆ ಮೇರೆಗೆ ಹೀಗೆ ವರ್ತಿಸಿದ್ದಾರೆಂದು ತಿಳಿದಿಲ್ಲ. ನಾನು ಚೌಧರಿ ದೇವಿ ಲಾಲ್ ಅವರ ಮಗ. ನನಗೆ ನನ್ನದೇ ಘನತೆಯಿದೆ. ನಾನು ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ,’ ಎಂದು ಹೇಳಿದರು.

ಇದನ್ನು ಓದಿ : ವಿಧಾನಸಭಾ ಚುನಾವಣೆ; ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಭಜರಂಗ್ ಪುನಿಯಾ ಕಾಂಗ್ರೆಸ್‌ಗೆ ಸೇರ್ಪಡೆ

ಚೌತಾಲಾ ಅವರು ರಾನಿಯಾ ಕ್ಷೇತ್ರದಿಂದ ಸ್ಪರ್ಧಿಸಲು ಆಶಿಸಿದ್ದರು. ಆದರೆ, ಬಿಜೆಪಿ ಕ್ಷೇತ್ರದಿಂದ ಶಿಶ್ನಾಲ್ ಕಾಂಬೋಜ್ ಅವರನ್ನು ಕಣಕ್ಕಿಳಿಸಿದೆ. ಲೋಕಸಭೆ ಚುನಾವಣೆಗೆ ಮುನ್ನ ರಂಜಿತ್, ರಾನಿಯಾದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು.

ಫತೇಹಾಬಾದ್ ಜಿಲ್ಲೆಯ ರಾಟೆಯಾ ಮೀಸಲು ಕ್ಷೇತ್ರದ ಶಾಸಕ ನಾಪಾ, ತಮಗೆ ಪಕ್ಷ ಏಕೆ ಟಿಕೆಟ್ ನಿರಾಕರಿಸಿದೆ ಎಂದು ನನಗೆ ತಿಳಿದಿಲ್ಲ,’ ಎಂದು ಹೇಳಿದರು. ಗುರುವಾರ ಬೆಳಗ್ಗೆ ಹೂಡಾ ಅವರನ್ನು ಭೇಟಿಯಾಗಿದ್ದು, ಕಾಂಗ್ರೆಸ್‌ ಸೇರುತ್ತಿದ್ದಾರೆ. ಮಾಜಿ ಸಚಿವ ಕರಣ್ ದೇವ್ ಕಾಂಬೋಜ್ ಅವರು ಹರಿಯಾಣ ಬಿಜೆಪಿಯ ಒಬಿಸಿ ಮೋರ್ಚಾದ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಮತ್ತು ಅವರು ಹೊಂದಿದ್ದ ಎಲ್ಲಾ ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.

ಮೊದಲ ಪಟ್ಟಿ: ಬಿಜೆಪಿಯ 67 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಸಚಿವ ಸಂಜಯ್ ಸಿಂಗ್‌ ಮತ್ತು ಮಾಜಿ ಸಚಿವ ಸಂದೀಪ್ ಸಿಂಗ್‌ ಸೇರಿದಂತೆ ಕೆಲವು ಹಾಲಿ ಶಾಸಕರಿಗೆ ಸ್ಥಾನ ನೀಡಿಲ್ಲ. ರಾಟಿಯಾದಿಂದ ಪಕ್ಷ ಸಿರ್ಸಾದ ಮಾಜಿ ಸಂಸದೆ ಸುನೀತಾ ದುಗ್ನಲ್ ಅವರನ್ನು ಕಣಕ್ಕಿಳಿಸಿದೆ. ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿಗೆ ಸೇರ್ಪಡೆಯಾದ ಅಶೋಕ್ ತನ್ಯಾರ್‌ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ತನ್ಮಾರ್ ಅವರು ಕಾಂಗ್ರೆಸ್ ಹಿರಿಯ ನಾಯಕಿ ಕುಮಾರಿ ಸಲ್ಮಾ ವಿರುದ್ಧ ಸೋತಿದ್ದಾರೆ. ಕರ್ನಾಲ್ ಹಾಲಿ ಶಾಸಕ, ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರನ್ನು ಲಾಡ್ಯಾ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿದೆ. ಇತ್ತೀಚೆಗೆ ಪಕ್ಷಕ್ಕೆ ಪ್ರವೇಶಿಸಿದ ಹಲವರಿಗೆ ಟಿಕೆಟ್‌ ನೀಡಿದೆ.

ಸೋನಿಪತ್‌ನಿಂದ ಟಿಕೆಟ್ ಬಯಸಿದ ಹರಿಯಾಣದ ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕಿ ಕವಿತಾ ಜೈನ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರನ್ನು ಲಾಡ್ಯಾ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿದ ಮತ್ತು ಇತ್ತೀಚೆಗೆ ಪಕ್ಷಕ್ಕೆ ಪ್ರವೇಶಿಸಿದ ಹಲವಾರು ಜನರಿಗೆ ಚುನಾವಣಾ ಟಿಕೆಟ್‌ಗಳನ್ನು ನೀಡಿದೆ.

90 ಸದಸ್ಯ ಬಲದ ವಿಧಾನಸಭೆಗೆ ನಡೆದ ಚುನಾವಣೆಯ ಮತ ಎಣಿಕ ಅಕ್ಟೋಬರ್ 8ರಂದು ನಡೆಯಲಿದೆ.

ಇದನ್ನು ಓದಿ : ಗೋರಕ್ಷಣೆ ಹೆಸರಲ್ಲಿ ಹತ್ಯೆ – RSS ಬಿತ್ತಿದ ಧ್ವೇಷ ಕಾರಣ – ಶ್ರೀಪಾದ್ ಭಟ್Janashakthi Media

Donate Janashakthi Media

Leave a Reply

Your email address will not be published. Required fields are marked *