ರಂಜನ್ ಚೌಧರಿ ಸಂಸತ್ ಕಲಾಪಕ್ಕೆ ನಿರಂತರ ಅಡ್ಡಿಪಡಿಸುತ್ತಿದ್ದಾರೆ ಎಂದ ಸಚಿವ ಪ್ರಲ್ಹಾದ್ ಜೋಶಿ
ನವದೆಹಲಿ: ಲೋಕಸಭೆಯ ಕಲಾಪಕ್ಕೆ ನಿರಂತರವಾಗಿ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಗುರುವಾರ ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ನಿರ್ಣಯ ಮಂಡಿಸಿದ್ದು, ಈ ನಿರ್ಣಯವನ್ನು ಸಂಸತ್ತು ಅಂಗೀಕರಿಸಿದೆ. ವಿಶೇಷಾಧಿಕಾರ ಸಮಿತಿಯು ಅವರ ವಿರುದ್ಧ ತನ್ನ ವರದಿಯನ್ನು ಸಲ್ಲಿಸುವವರೆಗೆ ಅವರನ್ನು ಅಮಾನತಿನಲ್ಲಿರಲಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಸಚಿವ ಪ್ರಲ್ಹಾದ್ ಜೋಶಿ, ಸಂಸತ್ ಕಲಾಪದಲ್ಲಿ ಚೌಧರಿ ಅವರು ನಿರಂತರವಾಗಿ ಅಡ್ಡಿಪಡಿಸುತ್ತಿದ್ದಾರೆ. ಈ ಮೂಲಕ ದೇಶ ಮತ್ತು ದೇಶದ ಪ್ರತಿಷ್ಠೆಯನ್ನು ಅವಮಾನಿಸಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.
“ಚೌದರಿ ಅವರಿಗೆ ಇದು ಅಭ್ಯಾಸವಾಗಿಬಿಟ್ಟಿದೆ. ಪದೇ ಪದೇ ಎಚ್ಚರಿಕೆ ನೀಡಿದರೂ ಅವರು ಸುಧಾರಿಸಿಕೊಂಡಿಲ್ಲ. ಅವರು ಯಾವಾಗಲೂ ತಮ್ಮ ಚರ್ಚೆಗಳಲ್ಲಿ ಆಧಾರರಹಿತ ಆರೋಪಗಳನ್ನು ಮಾಡುತ್ತಾರೆ. ಈ ಮೂಲಕ ಅವರು ದೇಶ ಮತ್ತು ದೇಶದ ಪ್ರತಿಷ್ಠೆಯನ್ನು ಅವಮಾನಿಸುತ್ತಾರೆ ಮತ್ತು ಎಂದಿಗೂ ಕ್ಷಮೆಯಾಚಿಸುವುದಿಲ್ಲ” ಎಂದು ಜೋಶಿ ಹೇಳಿದ್ದಾರೆ.
ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಫಂಡ್ ಕಲೆಕ್ಷನ್‌ಗೆ ಇಳಿದಿದೆಯೇ? ಕಾಂಗ್ರೆಸ್ ಸರ್ಕಾರಕ್ಕೆ ಮಾಜಿ ಸಚಿವ ಆರ್.ಅಶೋಕ್ ಪ್ರಶ್ನೆ
ಬುಧವಾರ ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಮಾತನಾಡುತ್ತಿದ್ದಾಗಲೂ ಚೌಧರಿ ಅದೇ ರೀತಿ ವರ್ತಿಸಿದ್ದರು ಎಂದು ಜೋಶಿ ಉಲ್ಲೇಖಿಸಿದ್ದಾರೆ. ನಂತರ ಅವರು ಚೌದರಿ ಅವರ ವಿಷಯವನ್ನು ವಿಶೇಷಾಧಿಕಾರ ಸಮಿತಿಗೆ ಉಲ್ಲೇಖಿಸಲು ನಿರ್ಣಯವನ್ನು ಮಂಡಿಸಿ ಸಮಿತಿಯು ವರದಿಯನ್ನು ಸಲ್ಲಿಸುವವರೆಗೆ ಅಧೀರ್ ಅವರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು. ಈ ನಿರ್ಣಯವನ್ನು ಸಂಸತ್ತು ಅಂಗೀಕರಿಸಿತು.
ಗುರುವಾರ ಲೋಕಸಭೆಯ ಅವಿಶ್ವಾಸ ನಿರ್ಣಯದ ವೇಳೆ ಪ್ರಧಾನಿಯ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದ ನಡೆದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಅವಿಶ್ವಾಸ ನಿರ್ಣಯದ ಶಕ್ತಿ ಪ್ರಧಾನಿ ಮೊದಿಯನ್ನು ಸಂಸತ್ತಿಗೆ ಎಳೆದು ತಂದಿದ್ದು, ಇಲ್ಲವೆಂದರೆ ಅವರು ಸಂಸತ್ತಿಗೆ ಬರುವುದಿಲ್ಲ ಎಂದು ಪ್ರತಿಜ್ಞೆ ಕೈಗೊಳ್ಳುತ್ತಿದ್ದರು ಎಂದು ಹೇಳಿದ್ದರು.
ಕ್ವಿಟ್ ಇಂಡಿಯಾ ಚಳವಳಿಯನ್ನು ಉಲ್ಲೇಖಿಸಿದ ರಂಜನ್ ಚೌಧರಿ, ಬಿಜೆಪಿಯ ಪೂರ್ವಜರು ಬ್ರಿಟಿಷರೊಂದಿಗೆ ಕೈಜೋಡಿಸಿದವರಾಗಿದ್ದು, ಕೇಸರಿಕರಣ ಮತ್ತು ಧ್ರುವೀಕರಣದ ವಿರುದ್ಧ ಕ್ವಿಟ್ ಇಂಡಿಯಾದ ರೀತಿಯ ಮತ್ತೊಂದು ಚಳುವಳಿ ನಡೆಯಬೇಕು ಎಂದು ಹೇಳಿದ್ದು, “ನಾವು ಯಾವುದೇ ಬಿಜೆಪಿ ಸದಸ್ಯರನ್ನು ಸಂಸತ್ತಿಗೆ ಬರುವಂತೆ ಒತ್ತಾಯಿಸುತ್ತಿಲ್ಲ. ನಾವು ಒತ್ತಾಯಿಸಿದ್ದು ನಮ್ಮ ಪ್ರಧಾನಿಯನ್ನಾಗಿದೆ” ಎಂದು ಹೇಳಿದ್ದಾರೆ.
ವಿಡಿಯೊ ನೋಡಿ: ಸೌಜನ್ಯ ಪ್ರಕರಣ – SIT ತನಿಖೆಗೆ ಆಗ್ರಹಿಸಿ ಆಗಸ್ಟ್ 28 ಕ್ಕೆ ಬೃಹತ್ ಪ್ರತಿಭಟನೆ Janashakthi Media