ಮೂರುದಿನ ರಂಗವಿಜಯ ನಾಟಕೋತ್ಸವ

ರಂಗ ವಿಜಯಾ ತಂಡದ 5ನೇ ವರ್ಷದ ಆಚರಣೆ ಹಾಗೂ ಮಾಲೂರು ವಿಜಿ ಅವರಿಗೆ 50 ವರ್ಷದ ಸುವರ್ಣ ಸಂಭ್ರಮದ ಅಂಗವಾಗಿ ಮೂರು ದಿನಗಳ ರಂಗವಿಜಯಾ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಏಪ್ರಿಲ್‌ 9 ರಿಂದ 11ರವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕೋತ್ಸವ ನಡೆಯಲಿದ್ದು, ನಾಟಕ ಪ್ರದರ್ಶನ ಅಲ್ಲದೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಸಂಜೆ 6 ಗಂಟೆಯಿಂದ ಪ್ರಾರಂಭವಾಗಲಿದೆ.

  • ಏಪ್ರಿಲ್‌ ೯ : ಅಂತರಂಗ ಬಹಿರಂಗ ತಂಡದಿಂದ ಯಥಾಪ್ರಕಾರ ನಾಟಕ ಪ್ರದರ್ಶನ.
  • ಏಪ್ರಿಲ್‌ ೧೦ : ಸಾಫಲ್ಯ ತಂಡದಿಂದ ಪ್ರಮೀಳಾರ್ಜುನೀಯಂ ನಾಟಕ ಪ್ರದರ್ಶನ.
  • ಏಪ್ರಿಲ್‌ ೧೧ : ರಂಗವಿಜಯ ತಂಡದಿಂದ ತೊರೆದು ಜೀವಿಸಬಹುದೆ ನಾಟಕ ಪ್ರದರ್ಶನ.

ಮೊದಲ ದಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.‌ ನಾಗಭರಣ ನಾಟಕೋತ್ಸವ ಉದ್ಘಾಟನೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಶ್ರೀಮತಿ ಉಮಾಶ್ರೀ ಅವರು ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ಕೆ.ವೈ.ನಂಜೇಗೌಡ, ಎಂ.ಎಸ್.ನರಸಿಂಹ ಮೂರ್ತಿ, ಎಂ. ಮೋಹನ್‌ ಆಳ್ವ, ಕೆ.ವಿ.ನಾಗರಾಜಮೂರ್ತಿ ಭಾಗವಹಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆ ಗೋವಿಂದರಾಜು ವಹಿಸಲಿದ್ದಾರೆ.

ಎರಡನೇ ದಿನ : 2020ನೇ ಸಾಲಿನ ಯುಗಾದಿ ಪುರಸ್ಕಾರವನ್ನು ಕಲಾ ನಿರ್ದೇಶಕರಾದ ಶಶಿಧರ ಅಡಪ ಅವರಿಗೆ ನೀಡಲಾಗುತ್ತದೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬಿ.ಸುರೇಶ್‌, ಡಾ|| ನಾಗೇಶ್‌ ವಿ. ಬೆಟ್ಟಕೋಟೆ, ಹೆಚ್‌ ಎಸ್‌ ಶಿವಪ್ರಕಾಶ್‌, ಮುಖ್ಯಮಂತ್ರಿ ಚಂದ್ರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ ಭೀಮಸೇನ ವಹಿಸಲಿದ್ದಾರೆ.

ಮೂರನೇ ದಿನ : 2021ನೇ ಸಾಲಿನ ಯುಗಾದಿ ಪುರಸ್ಕಾರವನ್ನು ನಟ, ನಿರ್ದೇಶಕರಾದ ಮಂಡ್ಯ ರಮೇಶ್‌ ಅವರಿಗೆ ನೀಡಲಾಗುತ್ತದೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಡಾ|| ವಿಜಯಮ್ಮ, ಡಾ|| ಬಿ.ವಿ.ರಾಜಾರಾಂ, ಎನ್‌.ಎಸ್.‌ ಶಂಕರ್‌, ಡಾ|| ಕೆ.ವೈ.ನಾರಾಯಣಸ್ವಾಮಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಲೂರು ವಿಜಿ ವಹಿಸಲಿದ್ದಾರೆ.

ಎರಡನೇ ದಿನ ಮಧ್ಯಹ್ನ 3.30ಕ್ಕೆ ʻಹವ್ಯಾಸಿ ರಂಗಭೂಮಿ, ರಂಗ ತಂಡಗಳ ಪ್ರಸ್ತುತ ವಿದ್ಯಮಾನಗಳುʼ ರಂಗ ಸಂವಾದ ಕಾರ್ಯಕ್ರಮ ಏರ್ಪಿಸಲಾಗಿದೆ. ರಂಗಸಾಧಕರಿಗೆ ರಂಗ ಗೌರವವನ್ನು ಹಮ್ಮಿಕೊಳ್ಳಲಾಗಿದೆ.

 

Donate Janashakthi Media

Leave a Reply

Your email address will not be published. Required fields are marked *