ರಂಗಭೂಮಿ ಕಲಾವಿದ ಕಬಡ್ಡಿ ರಾಮಚಂದ್ರ ನಿಧನ

ಬೆಂಗಳೂರು: ರಂಗಭೂಮಿ ಕಲಾವಿದ ಹಾಗೂ ಸಂಘಟಕ ಕಬಡ್ಡಿ ರಾಮಚಂದ್ರ ಅವರು ನೆನ್ನೆ ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು. ಇಸ್ರೊ ಬಡಾವಣೆಯ ವಸಂತಪುರದ ತಮ್ಮ ನಿವಾಸದಲ್ಲಿ ಅವರು ಮೃತಪಟ್ಟರು.

ಕೆಲವು ದಿನಗಳ ಹಿಂದಷ್ಟೇ ಅವರಿಗೆ ಮಿದುಳಿನ ಗೆಡ್ಡೆ (ಬ್ರೈನ್ ಟ್ಯೂಮರ್) ತೆರವಿಗೆ ಶಸ್ತ್ರಚಿಕಿತ್ಸೆ ನಡೆದಿತ್ತು. ರಾಮಚಂದ್ರ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ್ದರು. ಸಾಮಾಜಿಕ ಸಂದೇಶ ಸಾರುವ ನಾಟಕಗಳಲ್ಲಿ ಅವರು ಹೆಚ್ಚಾಗಿ ಅಭಿನಯಿಸುತ್ತಿದ್ದರು.

ಇದನ್ನು ಓದಿ: ಸಮುದಾಯ, ರಂಗಭೂಮಿಗಳೊಂದಿಗೆ ದಲಿತಕವಿ ಸಿದ್ಧಲಿಂಗಯ್ಯ ನಂಟು

ಕಲಾವಿದರ ಬಳಗ ಟ್ರಸ್ಟ್‌ನ ಸಂಸ್ಥಾಪನಾ ಅಧ್ಯಕ್ಷರಾಗಿದ್ದ ಅವರು, ಯುವ ಕಲಾವಿದರನ್ನು ಹೆಚ್ಚಾಗಿ ಪ್ರೋತ್ಸಾಹಿಸಿ ರಂಗಭೂಮಿಯೊಂದಿಗೆ ಆಸಕ್ತಿ ಬೆಳೆಸಿಕೊಳ್ಳಲು ಹುರಿದುಂಬಿಸುತ್ತಿದ್ದರು. ನಾಟಕ ಅಕಾಡೆಮಿ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವು ಸಂಘ–ಸಂಸ್ಥೆಗಳ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಅವರ ನಿವಾಸದಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಚಾಮರಾಜಪೇಟೆಯ ಟಿ.ಆರ್.ಮಿಲ್ ಚಿತಾಗಾರದಲ್ಲಿ ಅವರ ಅಂತ್ಯಸಂಸ್ಕಾರವನ್ನು ನೆರವೇರಿತು.

 

Donate Janashakthi Media

Leave a Reply

Your email address will not be published. Required fields are marked *